ಗ್ರಾ.ಪಂ. ಚುನಾವಣೆಗೆ ಸಿದ್ಧತೆ
ಚಿಕ್ಕಬಳ್ಳಾಪುರ: ಗ್ರಾಮ ಪಂಚಾಯಿತಿ ಚುನಾವಣೆಯ ಅಧಿಸೂಚನೆ ಪ್ರಕಟವಾಗಿದ್ದು, ಜಿಲ್ಲೆಯ 6 ತಾಲ್ಲೂಕುಗಳಲ್ಲಿ ಡಿ. 22ರಂದು ಮೂರು ತಾಲ್ಲೂಕು ಹಾಗೂ ಡಿ. 27ರಂದು ಮೂರು ತಾಲ್ಲೂಕುಗಳಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.
ಜಿಲ್ಲೆಯ ಶಿಡ್ಲಘಟ್ಟ (24 ಗ್ರಾ.ಪಂ.ಗಳು), ಚಿಂತಾಮಣಿ (35 ಗ್ರಾ.ಪಂ.ಗಳು) ಹಾಗೂ ಬಾಗೇಪಲ್ಲಿ (25 ಗ್ರಾ.ಪಂ.ಗಳು) ತಾಲ್ಲೂಕಿನಲ್ಲಿ ಡಿ. 22 ರಂದು ಒಟ್ಟು 84 ಗ್ರಾಮ ಪಂಚಾಯಿತಿಯಲ್ಲಿ ಮೊದಲ ಹಂತದಲ್ಲಿ ಚುನಾವಣೆ ನಡೆಯಲಿದೆ. ಉಳಿದ ಚಿಕ್ಕಬಳ್ಳಾಪುರ (23 ಗ್ರಾ.ಪಂ.ಗಳು), ಗೌರಿಬಿದನೂರು (37 ಗ್ರಾ.ಪಂ.ಗಳು) ಹಾಗೂ ಗುಡಿಬಂಡೆ (8 ಗ್ರಾ.ಪಂ.ಗಳು) ತಾಲ್ಲೂಕಿನಲ್ಲಿ ಡಿ. 27ರಂದು ಒಟ್ಟು 68 ಗ್ರಾಮ ಪಂಚಾಯಿತಿಗಳಿಗೆ ಎರಡನೇ ಹಂತದಲ್ಲಿ ಚುನಾವಣೆ ನಡೆಯಲಿದೆ.
ಜಿಲ್ಲೆಯ 6 ತಾಲ್ಲೂಕಿನಲ್ಲಿ ಒಟ್ಟು 152 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಇದಕ್ಕಾಗಿ ಜಿಲ್ಲೆಯಲ್ಲಿ 1,195 ಮೂಲ ಮತಗಟ್ಟೆಗಳು, 137 ಆಕ್ಸಿಲರಿ ಮತಗಟ್ಟೆಗಳನ್ನು ಎಂದು ಗುರುತಿಸಲಾಗಿದ್ದು, ಒಟ್ಟು 1,332 ಮತಗಟ್ಟೆಗಳು
ಸಿದ್ಧವಾಗಿವೆ.
ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ 152 ಗ್ರಾ.ಪಂ.ನಲ್ಲಿ 3,87,796 ಪುರುಷರು, 3,87,266 ಮಹಿಳೆಯರು ಮತ್ತು 52 ಇತರೆ ಸೇರಿದಂತೆ ಒಟ್ಟು 7,75,116 ಮತದಾರರಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಎರಡು ಹಂತದ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಜಿಲ್ಲಾಡಳಿತ ಹಾಗೂ ಆಯಾ ತಾಲ್ಲೂಕು ಆಡಳಿತವು ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.