ಗೌರಿಬಿದನೂರು: ತಾಲ್ಲೂಕಿನವಿದುರಾಶ್ವತ್ಥದ ವೀರಸೌಧದ ಚಿತ್ರಪಟ ಗ್ಯಾಲರಿಯಲ್ಲಿರುವ ಚಿತ್ರಗಳು ಈಗ ಆರ್‌ಎಸ್‌ಎಸ್ ಮತ್ತು ವಿದುರಾಶ್ವತ್ಥದ ಸ್ವಾತಂತ್ರ್ಯ ಸ್ಮಾರಕ ಸಮಿತಿಯ ನಡುವೆ ಜಟಾಪಟಿಗೆ ಕಾರಣವಾಗಿದೆ.

ಆರ್‌ಎಸ್‌ಎಸ್, ಬಜರಂಗದಳ ಮತ್ತು ವಿಎಚ್‌ಪಿ ಮುಖಂಡರು ಪದೇ ಪದೇ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ, ‘ವಿದುರಾಶ್ವತ್ಥಕ್ಕೆ ರಕ್ಷಣೆ ಕೊಡಿ’ ಎಂದು ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಸ್ವಾತಂತ್ರ್ಯ ಸ್ಮಾರಕ ಸಮಿತಿಯ ಗಂಗಾಧರಮೂರ್ತಿ ಹಾಗೂ ಸದಸ್ಯರು ಮನವಿ ನೀಡಿದ್ದಾರೆ.

ಇಲ್ಲಿನ ವೀರಸೌಧದದಲ್ಲಿ ಚಿತ್ರಪಟ ಗ್ಯಾಲರಿ ಇದೆ. ಸ್ವಾತಂತ್ರ್ಯ ಹೋರಾಟದ ಘಟನೆಗಳನ್ನು ಮೆಲುಕು ಹಾಕುವ ಚಿತ್ರಗಳು ಗ್ಯಾಲರಿಯಲ್ಲಿವೆ. ‘ಬಲಪಂಥೀಯ ರಾಜಕಾರಣ; ಹಿಂದೂ ಕೋಮುವಾದ; ಹಿಂದೂ ಮಹಾಸಭಾ; ಆರ್‌ಎಸ್‌ಎಸ್’ ಎನ್ನುವ ಚಿತ್ರವಿದೆ. ಗಾಂಧಿ ಹತ್ಯೆ ಮತ್ತು ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿನ ಚಿತ್ರಗಳನ್ನು ಗ್ಯಾಲರಿಯಲ್ಲಿ ಕಾಣಬಹುದು. ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಇವರು ಚಿತ್ರಗಳಲ್ಲಿ ಸಾರ್ವಕರ್ ಅವರ ಚಿತ್ರವೂ ಇದೆ.

ಹಿಂದೂ ಕೋಮುವಾದಕ್ಕೆ ಸಂಬಂಧಿಸಿದ ಇರುವ ಚಿತ್ರದಿಂದ ಆರ್‌ಎಸ್‌ಎಸ್ಹೆಸರು ತೆಗೆಯಬೇಕು ಮತ್ತು ಸ್ವಾತಂತ್ರ್ಯ ಹೋರಾಟ ಸಂಬಂಧ ಸಾವರ್ಕರ್ ಚಿತ್ರಗಳನ್ನು ಗ್ಯಾಲರಿಯಲ್ಲಿ ಅಳವಡಿಬೇಕು ಎಂದು ಆರ್‌ಎಸ್‌ಎಸ್ ಆಗ್ರಹಿಸುತ್ತಿದೆ.

20 ದಿನಗಳಲ್ಲಿ ಆರ್‌ಎಸ್‌ಎಸ್, ವಿಶ್ವ ಹಿಂದೂ ಪರಿಷತ್, ಬಜರಂಗದಳದ ಕಾರ್ಯಕರ್ತರು ನಾಲ್ಕು ಬಾರಿ ಗ್ಯಾಲರಿಗೆ ಭೇಟಿ ನೀಡಿ ಈ ಒತ್ತಡ ಹೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.