ಕಟ್ಟಡಗಳು ತುಂಬಾ ಹಳೆಯದಾಗಿವೆ. ಮೂಲ ಸೌಲಭ್ಯಗಳ ಕೊರತೆಯಿಂದ ಇಂದಿನ ಯುವ ಸಿಬ್ಬಂದಿ ಈ ಕಟ್ಟಡಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಕೆಲವು ಸಿಬ್ಬಂದಿಗೆ ಬಾಡಿಗೆಗೆ ಬರಲು ಸೂಚಿಸಲಾಗಿದೆ.
–ಪ್ರಕಾಶ್, ಎಇಇ ಲೋಕೋಪಯೋಗಿ ಇಲಾಖೆ
ಹೊಸ ಕಟ್ಟಡ ನಿರ್ಮಿಸಿ ಪ್ರತಿ ಅಡಿಗೂ ಚಿನ್ನದ ಬೆಲೆ ಇರುವ ಇಂತಹ ಜಾಗಗಳಲ್ಲಿ ಹಳೆ ಕಟ್ಟಡಗಳನ್ನು ದುರಸ್ತಿಮಾಡಬೇಕು. ಅಥವಾ ಹೊಸ ಕಟ್ಟಡಗಳನ್ನು ನಿರ್ಮಾಣ ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು. ಪಾಳು ಬೀಳುವಂತೆ ಮಾಡುವುದು ಸರಿಯಲ್ಲ.
– ಶ್ರೀನಿವಾಸ್, ಸ್ಥಳೀಯ
ಸರ್ಕಾರಿ ಕಚೇರಿಗಳಿಗೆ ನೀಡಿ ಸರ್ಕಾರದ ಅನೇಕ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಅನೇಕ ಸರ್ಕಾರಿ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಪಾಳು ಬೀಳುತ್ತಿವೆ. ಖಾಸಗಿಯವರಿಗೆ ಬಾಡಿಗೆ ನೀಡುವ ಬದಲು ಇಂತಹ ಕಟ್ಟಡಗಳನ್ನು ದುರಸ್ತಿಮಾಡಿಸಿ ಸರ್ಕಾರಿ ಕಚೇರಿಗಳಿಗೆ ನೀಡಿದರೆ ಬಾಡಿಗೆ ನೀಡುವುದು ತಪ್ಪುತ್ತದೆ.