ಸೋಮವಾರ, ಜೂನ್ 27, 2022
21 °C

ಪಡಿತರ ಅಕ್ಕಿ ಪಾಲಿಶ್‌ ಮಾಡಿ ಮಾರಾಟ; ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ ಬೇರೆ ಬೇರೆ ಬ್ರಾಂಡ್‌ಗಳ ಹೆಸರಿನಲ್ಲಿ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರದ ಸಪ್ತಗಿರಿ ರೈಸ್ ಮಿಲ್‌ನ ವೇಣುಗೋಪಾಲ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಸಪ್ತಗಿರಿ ಗ್ರಾಮೋದ್ಯೋಗ ಸಂಘದ ಅಡಿಯಲ್ಲಿ ಈ ಮಿಲ್ ನಡೆಯುತ್ತಿತ್ತು. ವೇಣುಗೋಪಾಲ್ ‌ಸಂಘದ ಕಾರ್ಯದರ್ಶಿ ಆಗಿದ್ದರು. 

74.40 ಕ್ವಿಂಟಲ್ ಅಕ್ಕಿ, 281 ಕ್ವಿಂಟಲ್ ಅಕ್ಕಿ ನುಚ್ಚು ಹಾಗೂ ₹ 10,300 ಮೌಲ್ಯದ ಖಾಲಿ ಪಾಲಿಥಿನ್ ಚೀಲಗಳನ್ನು ವಶಕ್ಕೆ ಪಡೆಯಲಾಗಿದೆ.

ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳಿಗೆ ಅಕ್ರಮದ ಬಗ್ಗೆ ಖಚಿತ ಮಾಹಿತಿ ದೊರೆತಿತ್ತು. ಇಲಾಖೆ ಉಪನಿರ್ದೇಶಕಿ ಸವಿತಾ ಅವರ ನೇತೃತ್ವದಲ್ಲಿ ಅಧಿಕಾರಿಗಳು ದಾಳಿ ನಡೆಸಿದರು. ನಂದಿ ಠಾಣೆ ಪೊಲೀಸರು ಹಾಗೂ ತಹಶೀಲ್ದಾರ್ ಗಣ‍ಪತಿ ಶಾಸ್ತ್ರಿ ಅವರೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

‘ಆಂಧ್ರಪ್ರದೇಶದಿಂದ ತಂದಿದ್ದೆವು. ಬೇರೆಯವರಿಂದ ಅಕ್ಕಿ ಪಡೆದಿದ್ದೆವು ಎಂದು ಮಿಲ್‌ನವರು ಹೇಳಿದರು. ಆದರೆ ಈ ಯಾವುದಕ್ಕೂ ಲೆಕ್ಕಪತ್ರಗಳ ನಿರ್ವಹಣೆ ಮಾಡಿಲ್ಲ. ದಾಖಲೆಗಳೂ ಇಲ್ಲ’ ಎಂದು ಸವಿತಾ ತಿಳಿಸಿದರು.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದೆವು. ಅಕ್ಕಿ ಪಾಲಿಶ್‌ ಮಾಡಿ 25 ಕೆ.ಜಿ ಪಾಲಿಥಿನ್ ಚೀಲದಲ್ಲಿ ಪ್ಯಾಕ್ ಮಾಡಿ ಬೇರೆ ಬೇರೆ ಬ್ರಾಂಡ್ ಹೆಸರಿನಲ್ಲಿ ಮಾರಾಟಕ್ಕೆ ಸಜ್ಜುಗೊಳಿಸಿದ್ದರು. ಸಾರ್ವಜನಿಕರಿಂದ ಸಂಗ್ರಹಿಸಿದ ಪಡಿತರ ಅಕ್ಕಿ ಎನಿದೆ. ದ್ದಾರೆ. ಇಲ್ಲಿ ಭತ್ತ ಮಿಲ್ ಮಾಡಲು ಅವಕಾಶವಿದೆ. ಆದರೆ ಇಲ್ಲಿ ಹಳೇ ಎರಡು ಚೀಲದಲ್ಲಿ ಭತ್ತವನ್ನು ಸಂಗ್ರಹಿಸಿದ್ದಾರಷ್ಟೇ. ಉಳಿದಂತೆ ಯಾವುದೇ ಭತ್ತ ಮಿಲ್ ಕೆಲಸಗಳು ನಡೆದಿಲ್ಲ. ಪಾಲಿಷ್ ಮಾಡಿದ ಹೊಟ್ಟು ಇತ್ತು ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು