ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರದ ನೆರವಿನೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ರಾಜ್ಯದಲ್ಲಿ ಹೊಸದಾಗಿ 6,599 ‘ಗ್ರಾಮ ಗ್ರಂಥಾಲಯ’ಗಳನ್ನು ತೆರೆಯಲು ಮುಂದಾಗಿದೆ.

ಜಿಲ್ಲೆಯಲ್ಲಿ ಈ ಯೋಜನೆಯಡಿ 150 ಗ್ರಾಮ ಗ್ರಂಥಾಲಯಗಳು ಆರಂಭವಾಗಲಿವೆ. ಈಗಾಗಲೇ ಯಾವ ಗ್ರಾಮಗಳಲ್ಲಿ ಈ ಗ್ರಂಥಾಲಯಗಳು ಆರಂಭವಾಗಬೇಕು ಎನ್ನುವ ಪಟ್ಟಿಗೆ ಅನುಮೋದನೆ ಸಹ ದೊರೆತಿದೆ.

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಬಂಡವಾಳ ಹೂಡಿಕೆಗಾಗಿ ನೀಡುವ ಹಣಕಾಸು ನೆರವು ಯೋಜನೆಯ (ಎಸ್.ಎ.ಎಸ್.ಸಿ.ಐ) ‘ಮಕ್ಕಳು ಮತ್ತು ಹದಿಹರೆಯದವರಿಗಾಗಿ ಗ್ರಂಥಾಲಯಗಳು ಮತ್ತು ಡಿಜಿಟಲ್ ಮೂಲಸೌಕರ್ಯ’ ಕಾರ್ಯಕ್ರಮದಡಿ ‘ಗ್ರಾಮ ಗ್ರಂಥಾಲಯ’ಗಳನ್ನು ಪ್ರಾರಂಭಿಸಲು ಸಿದ್ಧತೆ ಕೈಗೊಳ್ಳಲಾಗಿದೆ.

ಎಲ್ಲೆಲ್ಲಿ ಆರಂಭ: ಬಾಗೇಪಲ್ಲಿ ತಾಲ್ಲೂಕಿನ ಜಂಗಾಲಪಲ್ಲಿ, ನಿಮ್ಮಕಾಯಲಪಲ್ಲಿ, ಪೂಲವಾರಿಪಲ್ಲಿ, ಪಾತಬಾಗೇಪಲ್ಲಿ, ಮುಲಕಚೆರುವುಪಲ್ಲಿ, ಚಿನ್ನಕಾಯಿಲಪಲ್ಲಿ, ಮಾರ್ಗಾನುಕುಂಟೆ, ಪೆಸಲಪರ್ತಿ, ಬ್ರಾಹ್ಮಣರಹಳ್ಳಿ, ಡಿ.ಕೊತ್ತಪಲ್ಲಿ, ಉಗ್ರಾಣಂಪಲ್ಲಿ, ಸೋಮಕಲಪಲ್ಲಿ, ಆರ್.ನಲ್ಲಗುಟ್ಟಪಲ್ಲಿ, ಸಜ್ಜವಾರಪಲ್ಲಿ, ಜಿಂಕಪಲ್ಲಿ, ವೆಂಕಟಾಪುರ, ದೇವಾರ್ಲಪಲ್ಲಿ, ಪೆದ್ದರೆಡ್ಡಿಪಲ್ಲಿ, ಕೊತ್ತೂರು, ಯುಗವಮಾರಪ್ಪಗಾರಿಪಲ್ಲಿ, ಪೈಪಾಳ್ಯ, ಮಲ್ಲಿಗುರ್ಕಿ, ಬುಟ್ಟಿವಾರಿಪಲ್ಲಿ, ಆಚೆಪಲ್ಲಿ, ಮಾಕಿರೆಡ್ಡಿಪಲ್ಲಿ, ಚಿಕ್ಕಬಳ್ಳಾಪುರ ತಾಲ್ಲೂಕಿನ ಪುರದಗಡ್ಡೆ, ಕುಡುವತಿ, ಮರಸನಹಳ್ಳಿ, ರಾಮಪಟ್ಟಣ, ಅದೇಗಾರಹಳ್ಳಿ, ಹಳೇ ಪೆರೇಸಂದ್ರ, ಚಿಕ್ಕಪೈಲಗುರ್ಕಿ, ಕತ್ತರಿಗುಪ್ಪೆ, ತಮ್ಮನಾಯಕನಹಳ್ಳಿ, ಅಂದಾರ್ಲಹಳ್ಳಿ, ಅಂಕಣಗೊಂದಿ, ಗುಂಡ್ಲಗುರ್ಕಿ, ಮೈಲಪ್ಪನಹಳ್ಳಿ, ಹರಿಹರಪುರ, ಹೂವಿನವಾರಹಳ್ಳಿ, ಜಾತವಾರ, ಹಿರೇನಾಗಪಲ್ಲಿ, ಮುಸ್ಟೂರು, ಬೊಮ್ಮೇನಹಳ್ಳಿ ಗ್ರಾಮಗಳಲ್ಲಿ ಗ್ರಾಮ ಗ್ರಂಥಾಲಯಗಳು ಆರಂಭವಾಗಲಿವೆ.

ಚಿಂತಾಮಣಿ ತಾಲ್ಲೂಕಿನ ದೊಡ್ಡಬೊಮ್ಮನಹಳ್ಳಿ, ಯನಮಲಪಾಡಿ, ಆಲಪಲ್ಲಿ, ಗುಡಮಾರ್ಲಹಳ್ಳಿ, ಸಾಲಮಾಕಲಹಳ್ಳಿ, ಟಿ.ಗೊಲ್ಲಹಳ್ಳಿ, ತುಳುವನೂರು, ನಾರಾಯಣಹಳ್ಳಿ, ದೊಡ್ಡಗಂಜೂರು, ಕೊಡದವಾಡಿ, ಮೋಟಮಾಕಲಹಳ್ಳಿ, ಬ್ಯಾಲಹಳ್ಳಿ, ಕುರುಪಲ್ಲಿ, ಅಂಕಾಲಮಡಗು, ಹಿರಣ್ಯಪಲ್ಲಿ, ಭಕ್ತರಹಳ್ಳಿ, ಲಕ್ಷ್ಮಿದೇವನಕೋಟೆ, ಶ್ಯಾಮರಾವ್ ಹೊಸಪೇಟೆ, ಪಾವತಿಮ್ಮನಹಳ್ಳಿ, ಮೈಲಾಂಡ್ಲಹಳ್ಳಿ, ಸೀಕಲ್ಲು, ದೊಡ್ಡಿಹಳ್ಳಿ, ಹುಲಗುಮ್ಮನಹಳ್ಳಿ, ಜಂಗಮಶೀಗೆಹಳ್ಳಿ, ಕುರುಟಹಳ್ಳಿ, ಗುಡಾರ್ಲಹಳ್ಳಿ, ಮುದ್ದಲಹಳ್ಳಿ, ನಾಗರಾಜಹಳ್ಳಿ, ನಾಯಿಂದ್ರಹಳ್ಳಿ ಕಾಲೊನಿ, ಅಕ್ಕಿಮಂಳ, ವೈಜಕೂರು, ನೆಲಮಾಚನಹಳ್ಳಿ, ಹೊಸಹಳ್ಳಿ, ಅಟ್ಟೂರು, ಬೂರಗಮಾಕಲಹಳ್ಳಿ, ಮಾಡಿಕೆರೆ, ಹೆಬ್ಬರಿ, ಬೊಮ್ಮೇಕಲ್ಲು, ಚಾಂಡ್ರಹಳ್ಳಿ, ರಾಯಪಲ್ಲಿ, ಕೊತ್ತಹುಡ್ಯ, ಗುಟ್ಟೂರು, ಗುಡಿಬಂಡೆ ತಾಲ್ಲೂಕಿನ , ಗಂದಮ್ಮನಹಳ್ಳಿ, ಚೆಂಡೂರು, ಯರ್ಲಕ್ಕೇನಹಳ್ಳಿ, ಕರಿಗನತಮ್ಮನಹಳ್ಳಿ, ಪೋಲಂಪಲ್ಲಿ, ಶಿಡ್ಲಘಟ್ಟ ತಾಲ್ಲೂಕಿನ ಬೆಳ್ಳೂಟಿ, ಬೋದಗೂರು, ಹನುಮಂತಪುರ, ಹೇಮಾರ್ಲಹಳ್ಳಿ, ಚಿಕ್ಕದಾಸರಹಳ್ಳಿ, ಮುತ್ತೂರು, ಕನ್ನಪ್ಪನಹಳ್ಳಿ, ಸುಗಟೂರು, ವಂಟೂರು, ಬೈಯಪ್ಪನಹಳ್ಳಿ, ಗೊರಮಡುಗು, ಕಾಳನಾಯಕನಹಳ್ಳಿ, ಸೊಣಗಾನಹಳ್ಳಿ ಗ್ರಾಮಗಳಲ್ಲಿ ಗ್ರಂಥಾಲಯ ಆರಂಭವಾಗಲಿವೆ.

ಗೌರಿಬಿದನೂರು ತಾಲ್ಲೂಕಿನ ದೊಡ್ಡಹನುಮೇನಹಳ್ಳಿ, ವೆಂಕಟಾಪುರ, ದೊಡ್ಡಮಲ್ಲೇಕೆರೆ, ಉಚ್ಚೋದನಹಳ್ಳಿ, ಗೌಡಸಂದ್ರ, ಎಚ್.ನಾಗಸಂದ್ರ, ಕುಡುಮಲಕುಂಟೆ, ಕುಂಟಚಿಕ್ಕನಹಳ್ಳಿ, ಚೋಳಶೆಟ್ಟಿಹಳ್ಳಿ, ಕೆಂಕೆರೆ, ವರವಣಿ, ಕದಿರೇನಹಳ್ಳಿ, ಚಂದನೂರು, ಉಪ್ಪರಹಳ್ಳಿ, ಮೇಲಿನ ಕುರುಬರಹಳ್ಳಿ, ಕೋಟಾಲದಿನ್ನೆ, ಲಕ್ಷ್ಮಿಪುರ, ಬಳಗೆರೆ, ಹನುಮಂತಪುರ, ಮರಳೂರು, ಬಂದಾರ್ಲಹಳ್ಳಿ, ಹುಣಸೇನಹಳ್ಳಿ, ರಾಯನಕಲ್ಲು, ಹಳೇ ಉಪ್ಪಾರಹಳ್ಳಿ, ಎಂ.ಗೊಲ್ಲಹಳ್ಳಿ, ಬಂದಾರ್ಲಹಳ್ಳಿ, ನರಸಾಪುರ, ಕಡಬೂರು, ಕೋಡಿಗಾನಹಳ್ಳಿ, ಕುದುರೆಬ್ಯಾಲ್ಯ, ಹೊಸಕೋಟೆ, ಸೋಮಶೆಟ್ಟಿಹಳ್ಳಿ, ತೊಂಡೇಬಾವಿ ರೈಲ್ವೆ ನಿಲ್ದಾಣ, ತೋಕಲಹಳ್ಳಿ, ಸಾದೇನಹಳ್ಳಿ, ರಾಯರೇಖಲಹಳ್ಳಿ ವದ್ದೇನಹಳ್ಳಿ, ರೆಡ್ಡಿ ದ್ಯಾವರಹಳ್ಳಿ, ಕೋಡಿಹಳ್ಳಿ, ಸಾಗಾನಹಳ್ಳಿ, ಕಾಚಮಾಚೇನಹಳ್ಳಿ, ಗಾಂಧಿನಗರ, ಚೀಗಟಗೆರೆ, ಕದರನಹಳ್ಳಿ, ಹಂಪಸಂದ್ರ, ದ್ವಾರಗಾನಹಳ್ಳಿಯಲ್ಲಿ ಗ್ರಾಮ ಗ್ರಂಥಾಲಯವು ಆರಂಭವಾಗಲಿವೆ.

ಪ್ರತಿ ಗ್ರಂಥಾಲಯಕ್ಕೆ ತಲಾ ₹2 ಲಕ್ಷ ಮೊತ್ತದ ಪುಸ್ತಕಗಳನ್ನು ‘ನ್ಯಾಷನಲ್ ಬುಕ್ ಟ್ರಸ್ಟ್ ಇಂಡಿಯಾ’ದಿಂದ ಖರೀದಿಸಲಾಗಿದ್ದು, ಆಯಾ ಜಿಲ್ಲಾ ಪಂಚಾಯಿತಿಗಳಿಗೆ ಪುಸ್ತಕಗಳು ಸರಬರಾಜಾಗಿವೆ. 2,040 ಕನ್ನಡ, 627 ಇಂಗ್ಲಿಷ್ ಹಾಗೂ 20 ಕಲಿಕಾ ವಿಜ್ಞಾನ ಪುಸ್ತಕಗಳು ಸೇರಿ ಒಟ್ಟು 2,687 ಕೃತಿಗಳು ಪ್ರತಿ ಗ್ರಂಥಾಲಯಕ್ಕೆ ಹಂಚಿಕೆಯಾಗಲಿವೆ.

ಗ್ರಾಮ ಗ್ರಂಥಾಲಯಗಳಿಗೆ ₹1 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಮತ್ತು ಯುಪಿಎಸ್ ಹಾಗೂ ₹1 ಲಕ್ಷ ವೆಚ್ಚದಲ್ಲಿ ಪಿಠೋಪಕರಣಗಳ ಸೌಲಭ್ಯಗಳು ದೊರಕಲಿವೆ. ಪೀಠೋಪಕರಣಗಳನ್ನು ಖರೀದಿಸಲು ಪಂಚಾಯತ್ ರಾಜ್ ಆಯುಕ್ತಾಲಯದಿಂದ ಜಿಲ್ಲಾ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆ ಮಾಡಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.