ಚಿಕ್ಕಬಳ್ಳಾಪುರ: ‘ಲೋಕ ಕಲ್ಯಾಣಾರ್ಥವಾಗಿ ಗಾಯತ್ರಿ ಸೇವಾ ಸಮಿತಿ, ಗಾಯತ್ರಿ ಮಹಿಳಾ ಮಂಡಳಿ ವತಿಯಿಂದ ಜನವರಿ 19 ರಂದು ನಗರದ ಶ್ರೀದೇವಿ ಪ್ಯಾಲೇಸ್‌ನಲ್ಲಿ ‘ಸೀತಾರಾಮ ಕಲ್ಯಾಣೋತ್ಸವ’ ಹಮ್ಮಿಕೊಳ್ಳಲಾಗಿದೆ ಎಂದು ಗಾಯತ್ರಿ ಸೇವಾ ಸಮಿತಿಯ ಅಧ್ಯಕ್ಷ ರಮೇಶ್ ಹೇಳಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜ.19 ರಂದು ಬೆಳಿಗ್ಗೆ 7.30 ಕ್ಕೆ ಗೋ ಪೂಜೆ, ಗುರು ಪ್ರಾರ್ಥನೆ, ವೇದ ಪಾರಾಯಣ, ಆಂಜನೇಯ ಸಹಸ್ರನಾಮ ತುಳಸಿ ಅರ್ಚನೆ, ಪವಮಾನ ಹೋಮ ನಡೆಯಲಿವೆ. ಮಧ್ಯಾಹ್ನ 12.30 ಕ್ಕೆ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 5ಕ್ಕೆ ಮೃದಂಗ ವಿದ್ವಾಂಸ ಆನೂರು ಅನಂತಕೃಷ್ಣಶರ್ಮ, ಸಂಗೀತ ವಿದುಷಿ ಸುನಿತಾ, ಮಂಗಳಾ ರವಿ, ಸಂಗೀತ ವಿದ್ವಾನ್ ರಘುರಾಮ್ ತಂಡದ ಸಂಗೀತ ಕಛೇರಿ ನಡೆಯಲಿದೆ’ ಎಂದು ತಿಳಿಸಿದರು.

‘ಕಾರ್ಯಕ್ರಮದಲ್ಲಿ ಕೆಂಗೇರಿ ಓಕಾಂರ ಆಶ್ರಮದ ಮಧುಸೂದನಾನಂದಪುರಿ ಸ್ವಾಮಿ, ರಾಯಲ್ಪಾಡು ವಿದ್ವಾನ್ ವೆಲ್ಲಾಲ ಸತ್ಯನಾರಾಯಣ ಶಾಸ್ತ್ರಿ, ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರ ಟ್ರಸ್ಟ್ ಸಂಸ್ಥಾಪಕ ಪ್ರಭಾಕರ ಭಟ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಡಾ.ಕೆ.ಸುಧಾಕರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ’ ಎಂದರು. ಗಾಯತ್ರಿ ಸೇವಾ ಸಮಿತಿಯ ಪದಾಧಿಕಾರಿಗಳಾದ ವಿಕ್ರಮ್, ಆದಿತ್ಯ, ಕಾರ್ತಿಕ್, ಮನೋಜ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.