ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ಒಳಚರಂಡಿ ಕೊಳಚೆ ನೀರು ಬೆಳೆಗೆ; ದೂರು

Published 20 ಜುಲೈ 2023, 6:49 IST
Last Updated 20 ಜುಲೈ 2023, 6:49 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದ ಸೊಣ್ಣಶೆಟ್ಟಹಳ್ಳಿಯ ಲೋಕೋಪಯೋಗಿ ಇಲಾಖೆಯ ಕಚೇರಿ ಮುಂಭಾಗದ ಕೆರೆಯ ಬಳಿ ಯಾರೋ ಅನಧಿಕೃತವಾಗಿ ಒಳಚರಂಡಿ ಕೊಳಚೆ ನೀರಿನ ಮ್ಯಾನ್ ಹೋಲ್ ಗಳ ಪೈಪ್ ಗಳನ್ನು ಕೊಳಚೆ ನೀರನ್ನು ಬೆಳೆಗಳಿಗೆ ಹಾಯಿಸಿಕೊಳ್ಳುತ್ತಿದ್ದಾರೆ. ಅವರನ್ನು ಪತ್ತೆ ಮಾಡಿ ಕಾನೂನಿನಂತೆ ಕ್ರಮಕೈಗೊಳ್ಳಬೇಕು ಎಂದು ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕಿ ಎನ್.ಆರತಿ ನಗರಠಾಣೆಗೆ ದೂರು ನೀಡಿದ್ದಾರೆ.

'ಕೆರೆಯ ಬಳಿ ಯಾರೋ ಅನಧಿಕೃತವಾಗಿ ಮೋಟಾರು ಪಂಪ್ ಬಳಸಿ ಒಳಚರಂಡಿ ನೀರನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಆಯುಕ್ತರ ಮೌಖಿಕ ಸೂಚನೆಯಂತೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ದೂರುಗಳು ನಿಜವಾಗಿದ್ದವು. ಯಾರೋ ಅನಧಿಕೃತ ವ್ಯಕ್ತಿಗಳು ಮ್ಯಾನ್ ಹೋಲ್ ಗಳನ್ನು ಒಡೆದು ಸದರಿ ಕೊಳಚೆ ನೀರನ್ನು ಬೆಳೆಗಳಿಗೆ ಹಾಯಿಸಿಕೊಳ್ಳುತ್ತಿದ್ದಾರೆ' ಎಂದು ದೂರಿನಲ್ಲಿ ತಿಳಿಸಿದ್ದಾರೆ.


‘ಇದರಿಂದ ನಗರಸಭೆಗೂ ನಷ್ಟವಾಗುತ್ತಿದೆ. ಕೊಳಚೆ ನೀರು ಹಾಯಿಸಿ ಬೆಳೆ ಬೆಳೆಯುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೂ ದುಶ್ಪರಿಣಾಮ ಬೀರುತ್ತದೆ. ಮ್ಯಾನ್ ಹೋಲ್ ಗಳನ್ನು ಒಡೆದು ಕೊಳಚೆ ನೀಎನ್ನು ಬಳಕೆ ಮಾಡಿಕೊಂಡು ಬೆಳೆಗಳನ್ನು ಬೆಳೆಸುತ್ತಿರುವುದು ಆಸಂಜ್ಞೆಯ ಅಪರಾಧವಾಗಿದೆ. ಆರೋಪಿಗಳ ವಿರುದ್ಧ 427 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿ ಅನುಮತಿಯನ್ನು ಪಡೆಯಲಾಗಿದೆ‘ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT