ಶಿಡ್ಲಘಟ್ಟ: ತಾಲ್ಲೂಕಿನ ಅಪ್ಪೇಗೌಡನಹಳ್ಳಿ ರೈತ ಎ.ಎಂ.ತ್ಯಾಗರಾಜ್, ಬಳ್ಳಿ ಆಲೂಗಡ್ಡೆ ಕಳೆದ ನಾಲ್ಕು ವರ್ಷಗಳಿಂದ ಬೆಳೆಯುತ್ತಿದ್ದು, ಇದರ ಗಡ್ಡೆಗಳನ್ನು ರಾಜ್ಯ ಮತ್ತು ಹೊರರಾಜ್ಯಗಳ ರೈತರಿಗೆ ನೀಡುತ್ತಾ ಬಂದಿದ್ದಾರೆ. ಇವರ ಬಳ್ಳಿ ಆಲೂಗಡ್ಡೆ ಬಗ್ಗೆ ದೂರದ ಅಮೆರಿಕಯಲ್ಲಿ ನೆಲೆಸಿದ್ದವರೂ ಇದೀಗ ಆಕರ್ಷಿತರಾಗಿದ್ದಾರೆ.

ಅಮೆರಿಕದಲ್ಲಿ ಸುಮಾರು 45 ವರ್ಷಗಳಿಂದ ನೆಲೆಸಿರುವ ಕೃಷಿ ವಿಜ್ಞಾನಿ ರಾಘವರೆಡ್ಡಿ, ರೈತ ಎ.ಎಂ.ತ್ಯಾಗರಾಜ್ ಬೆಳೆದ ಬಳ್ಳಿ ಆಲೂಗಡ್ಡೆ ವಿಚಾರವನ್ನು ಪ್ರಜಾವಾಣಿ ಜಾಲತಾಣದ ವಿಡಿಯೊದಲ್ಲಿ (https://www.youtube.com/watch?v=sKJZt3Sm-5w) ನೋಡಿ ತ್ಯಾಗರಾಜ್ ಅವರ ತೋಟಕ್ಕೆ ಬಂದಿದ್ದರು.

‘ಬಳ್ಳಿ ಆಲೂಗಡ್ಡೆ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಔಷಧೀಯ ಕಣಜವೆಂದು ಆದಿವಾಸಿಗಳು ಬಳಸುತ್ತಿದ್ದರು. ತ್ಯಾಗರಾಜ್ ಬೆಳೆದಿರುವ ಬಳ್ಳಿ ಆಲೂಗಡ್ಡೆ ಬಗ್ಗೆ ವಿಡಿಯೊವನ್ನು ಅಮೆರಿಕದಲ್ಲಿದ್ದಾಗ ನೋಡಿ, ವಿಳಾಸ ಗುರುತು ಹಾಕಿಕೊಂಡಿದ್ದೆ. ಇದೀಗ ಇವರ ತೋಟಕ್ಕೆ ಭೇಟಿ ನೀಡಿ ಗಡ್ಡೆಗಳನ್ನು ತೆಗೆದುಕೊಂಡು ಹೋಗುತ್ತಿರುವೆ’ ಎಂದು ಕೃಷಿ ವಿಜ್ಞಾನಿ ರಾಘವರೆಡ್ಡಿ ತಿಳಿಸಿದರು.

‘ನಾನು ಜಿ.ಕೆ.ವಿ.ಕೆಯಲ್ಲಿ ಕೃಷಿ ವಿಜ್ಞಾನದಲ್ಲಿ ಎಂ.ಎಸ್ಸಿ ಪದವಿ ಪಡೆದು ಅಮೆರಿಕದ ಸಿಯಾಟಲ್ ನಲ್ಲಿ 45 ವರ್ಷಗಳಿಂದ ನೆಲೆಸಿರುವೆ. ಇದೀಗ ಹೊಸಕೋಟೆ ಬಳಿ ದೇವನಗುಂದಿ ಹೊಸಹಳ್ಳಿಯಲ್ಲಿ ಜಮೀನು ಮಾಡಿದ್ದು, ಬರಸಹಿಷ್ಣು ಹಣ್ಣಿನ ಮರಗಳು ಹಾಗೂ ಸಸ್ಯಗಳನ್ನು ಬೆಳೆಸುತ್ತಿದ್ದೇನೆ. ಮೂರು ವರ್ಷಗಳು ಮಾತ್ರ ಆರೈಕೆ ಮಾಡಿ, ಹಣ್ಣಿನ ಅರಣ್ಯವನ್ನು ರೂಪಿಸುವ ಉದ್ದೇಶವನ್ನು ಹೊಂದಿದ್ದೇನೆ. ಈಗ ಬಳ್ಳಿ ಆಲೂಗಡ್ಡೆ ಕೂಡ ಹೊಸ ಸೇರ್ಪಡೆಯಾಗಲಿದೆ. ಅಮೆರಿಕಾಗೂ ಒಂದೆರಡು ಗಡ್ಡೆ ತೆಗೆದುಕೊಂಡು ಹೋಗುವೆ. ವರ್ಷಕ್ಕೊಮ್ಮೆ ಅಮೆರಿಕದಿಂದ ಭಾರತಕ್ಕೆ ಬರುತ್ತಿರುತ್ತೇನೆ. ನಾನಿಲ್ಲದಿದ್ದಾಗ ಜಮೀನನ್ನು ನೋಡಿಕೊಳ್ಳಲು ಒಬ್ಬರನ್ನು ನೇಮಿಸಿದ್ದೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.