ಶಿಡ್ಲಘಟ್ಟ ತಾಲ್ಲೂಕಿನ ಚಿಕ್ಕದಾಸೇನಹಳ್ಳಿಯಿಂದ ಮಾರಪ್ಪನಹಳ್ಳಿಗೆ ಹೋಗುವ ರಸ್ತೆಯಲ್ಲಿ ವಿದ್ಯಾರ್ಥಿಗಳು ನಡೆದು ಹೋಗಲು ಕಷ್ಟಪಡುತ್ತಿರುವುದು
2024-25ನೇ ಸಾಲಿನ ಶಾಸಕರ ₹10 ಕೋಟಿ ಅನುದಾನದಲ್ಲಿ ಬುರುಡುಗುಂಟೆ ನಾರಾಯಣದಾಸರಹಳ್ಳಿ ಎನ್.ಹೊಸಹಳ್ಳಿ ಒಂಟೂರು ಲಕ್ಕಹಳ್ಳಿ ಸೀತಹಳ್ಳಿ ಗಡಿಮಿಂಚೇನಹಳ್ಳಿ ರಸ್ತೆಗಳನ್ನು ಅಭಿವೃದ್ಧಿಪಡಿಸಿದ್ದೇವೆ. ಮುಖ್ಯಮಂತ್ರಿ ವಿಶೇಷ ಅನುದಾನ ₹25 ಕೋಟಿಯಲ್ಲಿ ತಲಕಾಯಲಬೆಟ್ಟ ಕ್ರಾಸ್‌ನಿಂದ ಈ ತಿಮ್ಮಸಂದ್ರ ವರೆಗೆ ₹10 ಕೋಟಿಯ ರಸ್ತೆ ₹4 ಕೋಟಿಯಲ್ಲಿ ಕೋರಲಪರ್ತಿ ಸೇತುವೆ ಮತ್ತು ಮತ್ತು ಉಳಿಕೆ ಹಣದಲ್ಲಿ ಇತರೆ ಗ್ರಾಮೀಣ ರಸ್ತೆಗಳ ಅಭಿವೃದ್ಧಿ ನಡೆಸುತ್ತಿದ್ದೇವೆ. ಒಟ್ಟಾರೆ ತಾಲ್ಲೂಕಿನಲ್ಲಿ ಕೇವಲ 40 ಕಿ.ಮೀ ಗ್ರಾಮೀಣ ರಸ್ತೆ ಮಾತ್ರ ಅಭಿವೃದ್ಧಿ ಆಗುತ್ತಿದೆ. ಇನ್ನೂ 216 ಕಿ.ಮೀ ಗ್ರಾಮೀಣ ರಸ್ತೆ ಅಭಿವೃದ್ಧಿ ಆಗಬೇಕಿದೆ.