ಶಿಡ್ಲಘಟ್ಟ: ಇಲ್ಲಿಯ ಸರ್ಕಾರಿ ರೇಷ್ಮೆಗೂಡು ಮಾರುಕಟ್ಟೆಗೆ ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ಕೋಲಾರ ಜಿಲ್ಲೆಯ ರೈತರು ತಂದಿದ್ದ ರೇಷ್ಮೆಗೂಡುಗಳು ದಾಖಲೆಯ ಬೆಲೆಗೆ ಮಾರಾಟವಾಗಿವೆ.

ಹೊಸಕೋಟೆ ತಾಲ್ಲೂಕಿನ ಮಾರಸಂಡಹಳ್ಳಿಯ ರೈತ ಕೆಂಪಣ್ಣ ತಂದಿದ್ದ ದ್ವಿತಳಿ ರೇಷ್ಮೆ ಗೂಡು (ಬೈವೋಲ್ಟೀನ್) ಕೆ.ಜಿಗೆ ₹813ರಂತೆ ಮಾರಾಟವಾಗಿದೆ. ಇದು ಈ ವರ್ಷದ ಗರಿಷ್ಠ ಬೆಲೆಯಾಗಿದೆ. ಕೆಂಪಣ್ಣ 215 ಮೊಟ್ಟೆಯಲ್ಲಿ ತೆಗೆದಿದ್ದ 207 ಕೆ.ಜಿ ರೇಷ್ಮೆ ಗೂಡುಗಳನ್ನು ಸಯ್ಯದ್ ಇನಾಯತ್ ಉಲ್ಲಾ ಎಂಬ ರೀಲರ್ ಖರೀದಿಸಿದರು.

ಕೋಲಾರ ತಾಲ್ಲೂಕು ಮೇಡಿಹಾಳದ ರೈತ ಮುರಳಿ ತಂದಿದ್ದ ಬೈವೋಲ್ಟೀನ್ ಗೂಡು ಕೆ.ಜಿ.ಗೆ ₹738ಕ್ಕೆ ಮಾರಾಟವಾಗಿದ್ದು, ಎರಡನೇ ಅಧಿಕ ಬೆಲೆ ಎಂದು ದಾಖಲಾಗಿದೆ. ಅವರು 250 ಮೊಟ್ಟೆಯಲ್ಲಿ ತೆಗೆದಿದ್ದ 225 ಕೆ.ಜಿ. ಗೂಡುಗಳನ್ನು ಮೆಹಬೂಬ್ ಖಾನ್ ಎಂಬ ರೀಲರ್ ಖರೀದಿಸಿದರು.

ರೈತರು ಹಾಗೂ ರೀಲರ್ಗಳಿಗೆ ರೇಷ್ಮೆ ಇಲಾಖೆ ಉಪನಿರ್ದೇಶಕ ಎನ್.ಉಮೇಶ್ ಇಲಾಖೆ ಪ್ರಮಾಣಪತ್ರ ವಿತರಿಸಿದರು. ರೇಷ್ಮೆ ಸಹಾಯಕ ನಿರ್ದೇಶಕ ಕೆ.ತಿಮ್ಮರಾಜು, ವಿಸ್ತರಣಾಧಿಕಾರಿ ಶ್ರೀನಿವಾಸ್, ನಿರೀಕ್ಷಕರಾದ ರಮೇಶ್ ರಾಥೋಡ್, ವಿ.ಸಿ.ಬಾಬು, ಸಿಲ್ಕ್ ರೀಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಅನ್ಸರ್ ಖಾನ್, ರೀಲರುಗಳಾದ ಫೈರೋಸ್ ಪಾಷಾ, ನಬಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.