ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿನ್ನೆಹೊಸಹಳ್ಳಿ ಗ್ರಾಮದ ರಂಗಾರೆಡ್ಡಿ ಅವರ ಕುರಿ ಶೆಡ್ ಮೇಲೆ ಭಾನುವಾರ ರಾತ್ರಿ ನಾಯಿಗಳ ಹಿಂಡು ದಾಳಿ ನಡೆಸಿದೆ. 15 ಕುರಿಗಳು ಸಾವನ್ನಪ್ಪಿವೆ.

ಶೆಡ್‌ನಲ್ಲಿ 40 ಕುರಿಗಳು ಇದ್ದವು. ರಂಗಾರೆಡ್ಡಿ ರಾತ್ರಿ ಶೆಡ್‌ಗೆ ಬೀಗ ಹಾಕಿ ಮನೆಗೆ ತೆರಳಿದ್ದರು. ಬೆಳಿಗ್ಗೆ ಸ್ಥಳಕ್ಕೆ ಬಂದು ನೋಡಿದಾಗ ಕುರಿಗಳು ಸಾವನ್ನಪ್ಪಿರುವುದು ಕಂಡು ಬಂದಿತು.

‘ನಾವು ಬಾಡಿಗೆ ಮನೆಯಲ್ಲಿ ವಾಸ ಮಾಡಿಕೊಂಡು ಜಾಗವನ್ನು ಬಾಡಿಗೆಗೆ ಪಡೆದು ಕುರಿ ಸಾಕುತ್ತಿದ್ದೇವೆ. ₹ 3 ಲಕ್ಷ ನಷ್ಟವಾಗಿದೆ. ನಮಗೆ ಜಮೀನಿಲ್ಲ. ಯಾವುದೇ ಬ್ಯಾಂಕುಗಳಿಂದ ಸಾಲವನ್ನೂ ನೀಡಿಲ್ಲ. ಖಾಸಗಿಯಾಗಿ ಸಾಲ ಮಾಡಿ ಕುರಿಗಳನ್ನು ಸಾಕುತ್ತಿದ್ದೆವು. ಈ ಕುರಿಗಳೇ ನಮ್ಮ ಬದುಕಿಗೆ ಆಧಾರವಾಗಿದ್ದವು‘ ಎಂದು ರಂಗಾರೆಡ್ಡಿ ಕಣ್ಣೀರಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.