ಚಿಕ್ಕಬಳ್ಳಾಪುರ: ತಾಲ್ಲೂಕಿನ ಸೇಠ್‌ದಿನ್ನೆ ಬಳಿಯ ರಾಷ್ಟ್ರೀಯ ಹೆದ್ದಾರಿಯ 44ರಲ್ಲಿ ಭಾನುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.
ಮುಹಮ್ಮದುಲ್ ಬರಿ (40), ರಜಿಯಾ ಶಾಹಿನ್ (50) ಮತ್ತು ಎಂ.ಡಿ.ಶಾ ಅಲಂ (55) ಮೃತರು. ಇನ್ನೂ ಆರು ಮಂದಿ ಗಾಯಗೊಂಡಿದ್ದಾರೆ. ಮೃತರು ಬಿಹಾರ ಮೂಲದವರಾಗಿದ್ದಾರೆ. ಕೋಲಾರ ಮಸೀದಿಯಲ್ಲಿ ಮುಹಮ್ಮದುಲ್ ಬರಿ ಇಮಾಮ್ ಆಗಿ ಕೆಲಸ ಮಾಡುತ್ತಿದ್ದರು.
ರಜಿಯಾ ಶಾಹಿನ್
ಒಟ್ಟು 9 ಮಂದಿ ಕೋಲಾರದಿಂದ ಟಾಟಾ ಸುಮೊದಲ್ಲಿ ಆಂಧ್ರಪ್ರದೇಶದ ಪೆನುಗೊಂಡಕ್ಕೆ ತೆರಳುತ್ತಿದ್ದರು. ಸೇಠ್‌ದಿನ್ನೆ ಬಳಿ ಮುಂದೆ ಸಾಗುತ್ತಿದ್ದ ಲಾರಿಯನ್ನು ಹಿಂದಿಕ್ಕಲು ಟಾಟಾ ಸುಮೊ ಚಾಲಕ ಯತ್ನಿಸಿದ್ದಾರೆ. ಈ ವೇಳೆ ಲಾರಿಗೆ ಟಾಟಾ ಸುಮೊ ಡಿಕ್ಕಿಯಾಗಿದೆ. ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟರೆ ಒಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.