ಬುಧವಾರ, ಜನವರಿ 20, 2021
15 °C
ಕೊಯ್ಲು ಮಾಡಿ ಸಾಗಿಸಿದರೆ ಸಿಗುತ್ತಿಲ್ಲ ಸಾಗಾಟದ ಖರ್ಚು

ಕೇಳುವವರಿಲ್ಲ ಟೊಮೆಟೊ ಹಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೇಳೂರು: ಬೇಸಾಯದಿಂದ ಬಂಗಾರದ ಬುದುಕು ಸಾಗಿಸಬಹುದು ಎಂಬ ಕನಸು ಹೊತ್ತು ಟೊಮೆಟೊ ಬೆಳೆದ ರೈತರು ಮಾರುಕಟ್ಟೆ ಇದ್ದರೂ ವ್ಯಾಪಾರಿಗಳಿಲ್ಲದೇ ತಲೆಮೇಲೆ ಕೈಇಟ್ಟು ಕುಳಿತುಕೊಳ್ಳುವ
ಸ್ಥಿತಿ ಬಂದಿದೆ.

ಟೊಮೆಟೊಗೆ ನೆರೆಯ ರಾಜ್ಯಗಳಲ್ಲಿ ಉತ್ತಮ ಮಾರುಕಟ್ಟೆ ಸಿಗಲಿದೆ ಎಂದು ಭಾವಿಸಿ ಲಕ್ಷಾಂತರ ಬಂಡವಾಳ ಹಾಕಿ ಬೆಳೆದ ಟೊಮೆಟೊ ಇಂದು ಮಾರುಕಟ್ಟೆ ಇದ್ದರೂ ಕೊಳ್ಳುವವರಿಲ್ಲದೆ ದನ–ಕರು, ಮೇಕೆಗಳಿಗೆ
ಆಹಾರವಾಗುತ್ತಿದೆ.

ಚೇಳೂರು ಹೋಬಳಿಯ ದರವಾರಪಲ್ಲಿ ಗ್ರಾಮದ ರೈತ ಪಾತಲ ಪಿ.ಬಿ. ಕೃಷ್ಣಾರೆಡ್ಡಿ ಎಂಬವರು ನಿಮ್ಮಕಾಯಲಪಲ್ಲಿ ಗ್ರಾಮದಲ್ಲಿ ತನ್ನ 3.50ಎಕರೆ ಜಮೀನಿನಲ್ಲಿ ಸುಮಾರು ₹ 3.50 ಲಕ್ಷ ಬಂಡವಾಳ ಹಾಕಿ ಟೊಮೆಟೊ ಬೆಳೆದಿದ್ದಾರೆ. ₹15 ಲಕ್ಷ ಲಾಭದ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು. ಇದೀಗ ಮಾರುಕಟ್ಟೆಯಲ್ಲಿ ಕೊಳ್ಳುವವರಿಲ್ಲದೇ ಟೆಮೆಟೋವನ್ನು ತನ್ನ
ಜಮೀನಿನಲ್ಲಿಯೇ ಬಿಟ್ಟಿದ್ದಾರೆ.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಟೊಮೆಟೊವನ್ನು ಈ ಬಾರಿ ಹೆಚ್ಚಿನ ರೈತರು ಬೆಳೆದಿದ್ದಾರೆ. ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದ ಟೊಮೆಟೊ ಆವಕವಾಗುತ್ತಿದೆ. ಇದರಿಂದ ಬೆಲೆ
ಪಾತಾಳಕ್ಕೆ ಇಳಿದಿದೆ.

ಟೊಮೆಟೊಗೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿಗೆ ₹4-6 ಸಿಗುತ್ತಿದೆ.
ಕೊಯ್ಲು ಮಾಡಿ ಸಾಗಿಸಿದರೆ ಸಾಗಾಟದ ಖರ್ಚೂ ಸಿಗುತ್ತಿಲ್ಲ. ಇದರಿಂದಾಗಿ ಹಲವರು ಟೊಮೆಟೊವನ್ನು ಗಿಡದಿಂದ ಕೀಳದೆ ಹಾಗೆಯೇ ಬಿಟ್ಟಿದ್ದಾರೆ. ಇನ್ನು ಕೆಲ ರೈತರು ರಸ್ತೆಯ ಬದಿಗಳಲ್ಲಿ ರಾಶಿ ಹಾಕಿ ಹೊರಟು
ಹೋಗುತ್ತಿದ್ದಾರೆ.

ಲಾಕ್‌ಡೌನ್ ಆದ ಪರಿಣಾಮ ಮಾರುಕಟ್ಟೆಗೆ ಟೊಮೆಟೊ ಸಾಗಿಸ
ಲಾಗದೇ ಹಾಕಿದ ಬಂಡವಾಳವನ್ನು ವಾಪಸ್ಸು ಪಡೆಯುವುದು ಹೇಗೆಂದು ಕಂಗಾಲಾಗಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರ ಇಂತಹ ರೈತರ ನೆರವಿಗೆ ಧಾವಿಸಬೇಕು ಎನ್ನುವುದು ರೈತರ ಒತ್ತಾಯ.

ಮಾರಾಟವಾಗದ ಟೊಮೆಟೊ

ಮಾರುಕಟ್ಟೆಗೆ ಚಿಂತಾಮಣಿ ಸುತ್ತಮುತ್ತ ಗ್ರಾಮಗಳಿಂದ ಟೊಮೆಟೊ ತರುವ ರೈತರು ಸೂಕ್ತ ಬೆಲೆ ಸಿಗದೇ ಹೋದಲ್ಲಿ ಹಾಗೆಯೇ ಟೊಮೆಟೊ ಬಿಟ್ಟು ಹೋಗುತ್ತಿದ್ದಾರೆ. ಹೀಗೆ ಸುಮಾರು 10 ಸಾವಿರಕ್ಕೂ ಹೆಚ್ಚು ಬಾಕ್ಸ್ ಟೊಮೆಟೊ ಮಾರುಕಟ್ಟೆಯಲ್ಲಿ ವ್ಯಾಪಾರವಾಗದೆ ಉಳಿದಿದೆ. ಸರ್ಕಾರ ಪರಿಹಾರ ನೀಡಲಿ ಎಂದು ರೈತರ ಮನವಿ ಮಾಡಿದ್ದಾರೆ.

ಜೆ.ವಿ.ವಿ.ಚಲಪತಿ, ಚೇಳೂರು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು