ಗುರುವಾರ , ಮೇ 19, 2022
23 °C

ಚಿಂತಾಮಣಿಯಲ್ಲಿ 13ಕ್ಕೆ ಪಂದ್ಯಾವಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಂತಾಮಣಿ: ರಾಜ್ಯ ಸರ್ಕಾರಿ ನೌಕರರ ತಾಲ್ಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳು ಫೆಬ್ರವರಿ 13 ರಂದು ಶನಿವಾರ ನಗರದ ಝಾನ್ಸಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜನಾರ್ಧನರೆಡ್ಡಿ ತಿಳಿಸಿದರು.

ದೈಹಿಕ ಶಿಕ್ಷಕರು ಕ್ರೀಡಾ ಸ್ಪರ್ಧೆಗಳಲ್ಲಿ ಹಾಗೂ ಸಂಗೀತ ಶಿಕ್ಷಕರು ಸಂಗೀತ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿಲ್ಲ. ಮಹಿಳಾ ಮತ್ತು ಪುರುಷರಿಗೆ ಪ್ರತ್ಯೇಕ ಸ್ಪರ್ಧೆಗಳು ಇರುತ್ತವೆ. 45 ವರ್ಷ ಒಳಗಿನ ನೌಕರರು ಮತ್ತು 45 ವರ್ಷ ಮೇಲ್ಪಟ್ಟ ನೌಕರರು ಎಂದು ಎರಡು ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತವೆ. ಭಾಗವಹಿಸುವ ನೌಕರರು ಇಲಾಖಾ ಮುಖ್ಯಸ್ಥರಿಂದ ದೃಢೀಕರಣ ಪತ್ರವನ್ನು ತರಬೇಕು. ಭಾಗವಹಿಸುವ ನೌಕರರಿಗೆ ಅನ್ಯ ಕಾರ್ಯ ನಿಮಿತ್ತ(ಓ.ಓ.ಡಿ) ಸೌಲಭ್ಯವಿರುತ್ತದೆ.

ಪುರುಷರಿಗಾಗಿ ವಾಲಿಬಾಲ್, ಕಬಡ್ಡಿ, ಬ್ಯಾಡ್ಮಿಂಟನ್(ಷಟಲ್) ಸಿಂಗಲ್ಸ್ ಮತ್ತು ಡಬಲ್ಸ್, ಬಾಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್, ಕ್ರಿಕೆಟ್, ಬ್ಯಾಸ್ಕೆಟ್ ಬಾಲ್, ಚೆಸ್ ಸ್ಫರ್ಧೆಗಳಿರುತ್ತವೆ. ಮಹಿಳೆಯರಿಗಾಗಿ ಬ್ಯಾಡ್ಮಿಂಟನ್(ಷಟಲ್) ಸಿಂಗಲ್ಸ್ ಮತ್ತು ಡಬಲ್ಸ್, ಕೇರಂ ಸಿಂಗಲ್ಸ್ ಮತ್ತು ಡಬಲ್ಸ್, ಚೆಸ್, ಟೆನಿಕಾಯ್ಟ್ ಸಿಂಗಲ್ಸ್ ಮತ್ತು ಡಬಲ್ಸ್, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಸಿಂಗಲ್ಸ್ ಮತ್ತು ಡಬಲ್ಸ್‌ನಲ್ಲಿ ನಡೆಯಲಿವೆ.

100, 200, 400, 800 ಮೀ ಓಟ, ದೂರ ಜಿಗಿತ, ಎತ್ತರ ಜಿಗಿತ, ಗುಂಡು ಎಸೆತ, ಜಾವಲಿನ್ ಎಸೆತ, ಚಕ್ರ ಎಸೆತ, 4*100, 48400 ರಿಲೇ, 110 ಮೀ. ಹರಡಲ್ಸ್ ಸ್ಪರ್ಧೆಗಳು ಪುರುಷರಿಗೂ ಮತ್ತು ಮಹಿಳೆಯರಿಗೂ ಪ್ರತ್ಯೇಕವಾಗಿ ನಡೆಸಲಾಗುತ್ತದೆ. ಜತೆಗೆ ಪುರುಷರಿಗೆ 5,000, 10,000 ಮೀ ಓಟ ಇರುತ್ತವೆ ಎಂದು ಜನಾರ್ಧನರೆಡ್ಡಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು