ಚಿಕ್ಕಬಳ್ಳಾಪುರ: ಮುಷ್ಕರದ ನಡುವೆಯೂ ಕೆಲಸ ನಿರ್ವಹಿಸಿದ ಬಸ್ ಚಾಲಕರಾದ ಎಚ್.ವಿ.ಸತ್ಯನಾರಾಯಣರಾವ್ ಮತ್ತು ಬಿ.ವಿ.ಕೆ.ಮೂರ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಸಿಬ್ಬಂದಿಯ ವಿರುದ್ಧ ಕ್ರಮ ಜರುಗಿಸುವಂತೆ ಕೆಎಸ್ಆರ್ಟಿಸಿ ಚಿಕ್ಕಬಳ್ಳಾಪುರ ಘಟಕದ ವ್ಯವಸ್ಥಾಪಕ ಎಸ್.ಲಕ್ಷ್ಮಿಪತಿ ಇಲ್ಲಿನ ಸಿಇಎನ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಗುರುವಾರ ಈ ಇಬ್ಬರು ಚಾಲಕರು ಪೊಲೀಸ್ ಬಂದೋಬಸ್ತಿನಲ್ಲಿ ಬಸ್ಗಳನ್ನು ಚಲಾಯಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಚಿಕ್ಕಬಳ್ಳಾಪುರ ಘಟಕದ ಸಿಬ್ಬಂದಿ ಜೆ.ಎಸ್.ಚಂದ್ರು, ರಾಮಾಂಜಿ ಮತ್ತು ರಮೇಶ್ ‘ಕೆಎಸ್ಆರ್ಟಿಸಿ ಸಿಬಿಪಿ’ ಎಂಬ ವಾಟ್ಸ್ಆ್ಯಪ್ ಗ್ರೂಪ್ನಲ್ಲಿ ಎಚ್.ವಿ.ಸತ್ಯನಾರಾಯಣರಾವ್ ಮತ್ತು ಬಿ.ವಿ.ಕೆ.ಮೂರ್ತಿ ಅವರ ಭಾವಚಿತ್ರದ ಮೇಲೆ ಶ್ರದ್ಧಾಂಜಲಿ ಎಂದು ಬರೆದು, ಆಕ್ಷೇಪಾರ್ಹ ಬರಹದೊಂದಿಗೆ ಹಿನ್ನೆಲೆಯಲ್ಲಿ ಶೋಕಗೀತೆ ಅಳವಡಿಸಿ ವಿಡಿಯೊ ಸಹ ಮಾಡಿದ್ದಾರೆ. ನಂತರ ಈ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇವರ ಈ ಕೃತ್ಯದಿಂದ ಸಿಬ್ಬಂದಿಯ ಮನೋಸ್ಥೈರ್ಯ ಕುಂದುತ್ತದೆ. ಇತರೆ ಸಿಬ್ಬಂದಿ ಕೆಲಸಕ್ಕೆ ಹಾಜರಾಗುವುದಕ್ಕೂ ಅಡ್ಡಿಪಡಿಸಿದ್ದಾರೆ. ಆದ್ದರಿಂದ ಇವರ ವಿರುದ್ಧ ಕಾನೂನು ಕ್ರಮಜರುಗಿಸಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.