ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮರೆತ ಪುಟಗಳು: ಅನಾಮಿಕ ಹೋರಾಟಗಾರರ ಹೆಸರು ಪತ್ತೆ

Published : 23 ಆಗಸ್ಟ್ 2024, 5:56 IST
Last Updated : 23 ಆಗಸ್ಟ್ 2024, 5:56 IST
ಫಾಲೋ ಮಾಡಿ
Comments

ಶಿಡ್ಲಘಟ್ಟ: ಬೆಂಗಳೂರಿನ ವಿಧಾನಸೌಧದಲ್ಲಿನ ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯಲ್ಲಿನ ಹಳೆಯ ಪೊಲೀಸ್ ಫೈಲ್ಸ್ ದಾಖಲೆಗಳಲ್ಲಿ 1939ರಲ್ಲಿ ಕೆಜಿಎಫ್‌ನ ಸ್ಪೆಷಲ್ ಸೂಪರಿಂಡೆಂಟ್ ಆಫ್ ಪೊಲೀಸ್ ಸಹಿ ಮಾಡಿ, ತಮ್ಮ ಹಿರಿಯ ಅಧಿಕಾರಿಗಳಿಗೆ (ಸ್ಪೆಷಲ್ ರಿಪೋರ್ಟ್) ವರದಿ ಸಲ್ಲಿಸಿರುವ ಅಪರೂಪದ ದಾಖಲೆ ಲಭಿಸಿದೆ.

ತಳಗವಾರದ ಟಿ.ವಿ.ನಾಗರಾಜ ಅವರು ಚಿಂತಾಮಣಿಗೆ ಸಂಬಂಧಿಸಿದಂತೆ ದಾಖಲೆ ಹುಡುಕುವಾಗ ಶಿಡ್ಲಘಟ್ಟ ತಾಲ್ಲೂಕಿನ ಸ್ವಾತಂತ್ರ್ಯ ಹೋರಾಟಗಾರರ ಈ ಪಟ್ಟಿ ಲಭಿಸಿದೆ. ಆ ಮೂಲಕ ಹಲವು ಅನಾಮಿಕರಾಗಿದ್ದ ಹೋರಾಟಗಾರರ ಹೆಸರು ಪತ್ತೆಯಾಗಿದೆ.

‘1939 ರ ಆಗಸ್ಟ್ 27 ರಂದು ಊರ್‌ಗಾಂವ್ (ಕೆ.ಜಿ.ಎಫ್) ನಲ್ಲಿ ನಡೆಯಲಿರುವ ಸತ್ಯಾಗ್ರಹದಲ್ಲಿ ಭಾಗವಹಿಸಲೆಂದು ಕೆಲವು ಕಾಂಗ್ರೆಸ್ ಕಾರ್ಯಕರ್ತರು ಬೌರಿಂಗ್ ಪೇಟೆ (ಬಂಗಾರುಪೇಟೆ) ಗೆ ಬಂದಿರುವರೆಂದು ಮಾಹಿತಿ ಲಭಿಸಿತು. ಅವರು ಹತ್ತು ಮಂದಿಯ ಬಗ್ಗೆ ಮಾಹಿತಿ ಪಡೆದು ದಸ್ತಗಿರಿ ಮಾಡಲಾಯಿತು’.

‘ಅವರಿಂದ ತಿಳಿದು ಬಂದ ಮಾಹಿತಿ ಪ್ರಕಾರ, ಚಿಕ್ಕಬಳ್ಳಾಪುರದ ಕಾಂಗ್ರೆಸ್ ಸಂಘಟನಾ ಕಾರ್ಯದರ್ಶಿ ಸಂಪತ್ ಕುಮಾರನ್ ಅವರು ಮುಂದಿನ ಸೆಪ್ಟೆಂಬರ್ ತಿಂಗಳಿನಲ್ಲಿ ಇನ್ನಷ್ಟು ಕಾಂಗ್ರೆಸ್ ಕಾರ್ಯಕರ್ತರನ್ನು ಕಳಿಸುವವರಿದ್ದಾರೆ. ಲಭಿಸಿರುವ ರಹಸ್ಯ ಮಾಹಿತಿ ಪ್ರಕಾರ ಈ ಕಾರ್ಯಕರ್ತರೆಲ್ಲಾ ಕೆಜಿಎಫ್‌ನಲ್ಲಿ ಸೆಕ್ಷನ್ 39ರ ಕಾಯ್ದೆಯನ್ನು ಉಲ್ಲಂಘಿಸಿ, ಸತ್ಯಾಗ್ರಹ ನಡೆಸಲಿದ್ದಾರೆ’ ಎಂದು ವರದಿ ನೀಡುತ್ತಾ ಕೆಜಿಎಫ್‌ನ ಸ್ಪೆಷಲ್ ಸೂಪರಿಂಡೆಂಟ್ ಆಫ್ ಪೊಲೀಸ್ ಅವರು, 1939ರ ಸೆಪ್ಟೆಂಬರ್ 6 ರಂದು ದಸ್ತಗಿರಿ ಮಾಡಿರುವ 39 ಮಂದಿ ಕಾರ್ಯಕರ್ತರ ಪಟ್ಟಿ ನೀಡಿದ್ದಾರೆ. ಬಂಧಿತರ, ಊರು, ವಯಸ್ಸು, ಜಾತಿ, ತಂದೆ ಹೆಸರು ಪಟ್ಟಿಯಲ್ಲಿದೆ.

1939ರ ಆಗಸ್ಟ್ 27ರಂದು ದಸ್ತಗಿರಿ ಮಾಡಿರುವ ಹತ್ತು ಮಂದಿಯಲ್ಲಿ 8 ಮಂದಿ ಶಿಡ್ಲಘಟ್ಟ ತಾಲ್ಲೂಕಿನ ಕೊತ್ತನೂರು ಗ್ರಾಮದವರು. ಅವರ ಹೆಸರು ಹೀಗಿವೆ:

ಗಂಗಾಧರಸ್ವಾಮಿ (48), ಕೆ.ಎನ್.ಪಾಪಣ್ಣ (23), ಕೆ.ವೆಂಕಟಸುಬ್ಬಾರೆಡ್ಡಿ (30), ಎ.ವೆಂಕಟರಾಯಪ್ಪ (30), ಆರ್.ವೆಂಕಟಸುಬ್ಬಾರೆಡ್ಡಿ (28), ವೀರಪ್ಪರೆಡ್ಡಿ (28), ಮುನಿಕೆಂಚಪ್ಪ (24), ನರಸಪ್ಪ (25).

1939ರ ಸೆಪ್ಟೆಂಬರ್ 6 ರಂದು ದಸ್ತಗಿರಿ ಮಾಡಿರುವ 39 ಮಂದಿ ಕಾರ್ಯಕರ್ತರಲ್ಲಿ 33 ಮಂದಿ ಶಿಡ್ಲಘಟ್ಟ ತಾಲ್ಲೂಕಿನವರು. ಅವರ ಹೆಸರು:

ಮಳ್ಳೂರು ಗ್ರಾಮದವರು ಪಿಳ್ಳಮುನಿರಾಮಯ್ಯ (23), ಮುನಿಯಪ್ಪ (20), ಹನುಮಂತಪ್ಪ (20), ಪಿ.ಮುನಿಶಾಮಯ್ಯ (19),

ಮೇಲೂರು ಗ್ರಾಮದವರು: ಮುನಿಶಾಮಪ್ಪ (30), ಬಚ್ಚಪ್ಪ (25), ಸಿದ್ದಯ್ಯ (20), ಜಿ.ಪಾಪಣ್ಣ (25), ಸಿ.ನಂಜುಂಡಪ್ಪ (20), ಎ.ತಮ್ಮಣ್ಣ (20), ಎಚ್.ನಾರಾಯಣಪ್ಪ(20).

ಕಂಬದಹಳ್ಳಿ ಗ್ರಾಮದವರು: ಪಿಳ್ಳಪ್ಪ (20), ಜಿ.ಮುನಿಶಾಮಯ್ಯ (25),

ಭಕ್ತರಹಳ್ಳಿ ಗ್ರಾಮದವರು: ಕೆ.ಮಾರಪ್ಪ (20), ಕೆ.ನಂಜುಂಡಯ್ಯ (19), ಮುನಿತಮ್ಮಣ್ಣ (40), ಆರ್.ವಿ.ಮುನಿಶಾಮಯ್ಯ (23), ಈರಪ್ಪ (25), ರಂಗಪ್ಪ (30), ಬಿ.ನಾರಾಯಣಪ್ಪ (22), ಕ್ಯಾತಪ್ಪ (25).

ಮಳಮಾಚನಹಳ್ಳಿ ಗ್ರಾಮದವರು: ಎಚ್.ಕೆ.ಚನ್ನಬಸಪ್ಪ (23), ಕೆ.ಬಸವಾಚಾರಿ (25), ನಂಜುಂಡಯ್ಯ (25), ನರಸಿಂಹಯ್ಯ (26), ದಾಸಪ್ಪ (22), ನಾರಾಯಣಪ್ಪ (22), ರಾಮಯ್ಯ (20)

ಮುತ್ತುಗದಹಳ್ಳಿ ಗ್ರಾಮದವರು: ನರಸಪ್ಪ (25), ಎಂ.ಬಿ.ನಾರಾಯಣಗೌಡ (28), ಪಿಳ್ಳಪ್ಪ (20)

ಕೊತ್ತನೂರಿನ ಕೆ.ವೆಂಕಟಸುಬ್ಬಾರೆಡ್ಡಿ(30), ತುಮ್ಮನಹಳ್ಳಿಯ ಎಚ್.ನಾರಾಯಣಪ್ಪ (60)

ಶಿಡ್ಲಘಟ್ಟದ ಸ್ವಾತಂತ್ರ ಹೋರಾಟಗಾರರ ಹೆಸರುಗಳಿರುವ ರಾಜ್ಯ ಪತ್ರಾಗಾರ ಇಲಾಖೆಯಲ್ಲಿನ 1939ರ ದಾಖಲೆ
ಶಿಡ್ಲಘಟ್ಟದ ಸ್ವಾತಂತ್ರ ಹೋರಾಟಗಾರರ ಹೆಸರುಗಳಿರುವ ರಾಜ್ಯ ಪತ್ರಾಗಾರ ಇಲಾಖೆಯಲ್ಲಿನ 1939ರ ದಾಖಲೆ
ರಾಜ್ಯ ಪತ್ರಾಗಾರ ಇಲಾಖೆಯಲ್ಲಿನ 1939ರ ದಾಖಲೆ
ರಾಜ್ಯ ಪತ್ರಾಗಾರ ಇಲಾಖೆಯಲ್ಲಿನ 1939ರ ದಾಖಲೆ
ಸ್ವಾತಂತ್ರ್ಯ ಸಂಗ್ರಾಮದಲ್ಲಿ ತಮ್ಮ ತನು ಮನ ಧನ ಪ್ರಾಣವನ್ನು ತೊರೆದು ಇತಿಹಾಸದ ಪುಟಗಳಲ್ಲಿ ಲೀನವಾಗಿರುವ ಅನೇಕರನ್ನು ಹುಡುಕಿ ಗೌರವ ಸಲ್ಲಿಸುವ ಅಗತ್ಯವಿದೆ. ಪತ್ರಾಗಾರ ಇಲಾಖೆಯಲ್ಲಿ ದೊರೆತ ಈ ದಾಖಲೆಯಿಂದ ಕೆಲವರ ಹೆಸರು ನಮಗೆ ತಿಳಿದುಬಂದಿವೆ
ಟಿ.ವಿ.ನಾಗರಾಜ ತಳಗವಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT