ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | 27 ರಕ್ತ ಮಾದರಿಗಳಲ್ಲಿ ಝೀಕಾ ವೈರಸ್ ಇಲ್ಲ: ಆರೋಗ್ಯಾಧಿಕಾರಿ

Published 9 ನವೆಂಬರ್ 2023, 15:14 IST
Last Updated 9 ನವೆಂಬರ್ 2023, 15:14 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಝೀಕಾ ವೈರಸ್ ಪತ್ತೆಗಾಗಿ ಕಳುಹಿಸಿದ್ದ ಮಾದರಿಗಳಲ್ಲಿ 27 ಮಾದರಿಯ ಫಲಿತಾಂಶ ಬಂದಿದ್ದು, ಅದರಲ್ಲಿ ವೈರಸ್‌ ಇಲ್ಲದಿರುವುದು ಪತ್ತೆಯಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ ಮಾಹಿತಿ ನೀಡಿದರು.

ರಾಜ್ಯದಲ್ಲಿಯೇ ಪ್ರಥಮ ಬಾರಿ ಝೀಕಾ ವೈರಸ್ ಶಿಡ್ಲಘಟ್ಟ ತಾಲ್ಲೂಕಿನ ತಲಕಾಯಲಬೆಟ್ಟದಲ್ಲಿನ ಸೊಳ್ಳೆಯೊಂದರಲ್ಲಿ ಕಂಡು ಬಂದಿದ್ದ ಹಿನ್ನೆಲೆ ತಲಕಾಯಲಬೆಟ್ಟ ಗ್ರಾಮದ ಐದು ಕಿ.ಮೀ ವ್ಯಾಪ್ತಿಯಲ್ಲಿರುವ 5 ಗ್ರಾಮಗಳ 37 ಗರ್ಭಿಣಿಯರು ಹಾಗೂ 11 ಜ್ವರ ಪೀಡಿತರ ಒಟ್ಟು 48 ಮಂದಿಯ ರಕ್ತ ಮಾದರಿಯನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಕಳುಹಿಸಲಾಗಿತ್ತು.

ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ವೈರಾಲಜಿಯಿಂದ 27 ಮಾದರಿಯ ಫಲಿತಾಂಶ ಬಂದಿದ್ದು, ಅದರಲ್ಲಿ 23 ಗರ್ಭಿಣಿಯರು ಹಾಗೂ 4 ಜ್ವರಪೀಡಿತರದು ಫಲಿತಾಂಶ ಇದೆ. ಇನ್ನೂ 21 ಮಾದರಿ ಫಲಿತಾಂಶ ಸದ್ಯದಲ್ಲಿಯೇ ಬರಲಿದೆ. ಆರೋಗ್ಯ ಇಲಾಖೆಯಿಂದ ಗರ್ಭಿಣಿಯರ ಆರೋಗ್ಯದ ಮೇಲೆ ನಿಗಾ ಇಡಲಾಗಿದೆ. ಉತ್ತಮ ಪೋಷಕಾಂಶಯುಕ್ತ ಆಹಾರ ಸೇವನೆಗೆ ಸೂಚನೆ ನೀಡಲಾಗಿದೆ. ಎಲ್ಲರೂ ಸೊಳ್ಳೆ ಪರದೆ ಬಳಸಿಕೊಂಡು ಮಲಗಲು ತಿಳಿಸಲಾಗಿದೆ. ಝೀಕಾ ವೈರಸ್ ಆತಂಕದಿಂದ ದೂರ ಇರಲು ಸಲಹೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಯಾರೂ ಅನಗತ್ಯವಾಗಿ ಆತಂಕ ಪಡಬೇಕಾಗಿಲ್ಲ. ವಾರಕ್ಕೊಮ್ಮೆ ತೊಟ್ಟಿ ತೊಳೆದು, ಶೇಖರಿಸಿಟ್ಟ ನೀರನ್ನು ಬದಲಿಸಬೇಕು. ಮನೆ ಮುಂದೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT