ಶಿಡ್ಲಘಟ್ಟ: ಕಣ್ಣು ಕಾಣದವರೂ ಚಿತ್ರ ಮಂದಿರದಲ್ಲಿ ಕುಳಿತು ಕೇಳಿಸಿಕೊಂಡು ಚಿತ್ರವನ್ನು ಆನಂದಿಸಿದ ಸಂಗತಿ ಪಟ್ಟಣದ ಚಿತ್ರಮಂದಿರದಲ್ಲಿ ಸೋಮ ವಾರ ನಡೆದಿದೆ.

ಪಟ್ಟಣದ ಆಶಾಕಿರಣ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿ ಗಳಿಗೆ ಸೋಮ ವಾರದ ದಿನ ವಿಶಿಷ್ಟ ವಾಗಿತ್ತು. ಮಯೂರ ಚಿತ್ರಮಂದಿರ ದಲ್ಲಿ ಪ್ರದರ್ಶಿತ ವಾಗುತ್ತಿರುವ ತಾಲ್ಲೂಕಿನ ಬೆಳ್ಳೂಟಿಯ ಎನ್. ವೀರೇಂದ್ರಬಾಬು ನಟಿಸಿರುವ `ಸ್ವಯಂಕೃಷಿ~ ಚಲನಚಿತ್ರಕ್ಕೆ 60 ಮಂದಿ ಅಂಧ ಮಕ್ಕಳು ಆಗಮಿಸಿದ್ದರು. ಕೆಲ ಮಕ್ಕಳಿಗೆ ಭಾಗಶಃ ಅಂಧತ್ವ ವಿದ್ದರೆ, ಕೆಲವರಿಗೆ ಏನೂ ಕಾಣಿಸದು. ಆದರೂ ಅವರೆಲ್ಲ ಕೇಳಿಸಿಕೊಂಡು ಪಕ್ಕದವರಿಂದ ಹೇಳಿಸಿಕೊಳ್ಳುತ್ತಾ ಚಲನಚಿತ್ರವನ್ನು ಆನಂದಿಸಿದರು.

`ಎನ್.ವೀರೇಂದ್ರಬಾಬು ಅವರ ಜನ್ಮದಿನವನ್ನು ಅವರ ಪತ್ನಿ ಚಂದ್ರಿಕಾ ಅವರು ಆಶಾಕಿರಣ ಅಂಧಮಕ್ಕಳ ಶಾಲೆ ಯಲ್ಲಿ ಆಚರಿಸಿದ್ದರು. ಆಗ ಮಕ್ಕಳೆಲ್ಲ ನಾವೂ ಚಿತ್ರವನ್ನು ನೋಡ ಬೇಕೆಂದು ಹೇಳಿಕೊಂಡಿದ್ದರು.

ನಾವಿಲ್ಲಿ ರೇಡಿಯೋ ಮತ್ತು ದೂರದರ್ಶನದಲ್ಲಿ ಬರುವುದನ್ನು ಕೇಳಿಸಿಕೊಳ್ಳುತ್ತೇವೆ. ಅದೇ ರೀತಿ ಚಲನಚಿತ್ರವನ್ನೂ ಕೇಳಿಸಿಕೊಳ್ಳು ತ್ತೇವೆಂದು ಹೇಳಿದ್ದರು. ಹಾಗಾಗಿ ನಾವು ಕೆಲವು ಸ್ನೇಹಿತರು ಹಣವನ್ನು ಒಟ್ಟು ಮಾಡಿ ಮಕ್ಕಳನ್ನು ಚಿತ್ರಮಂದಿರಕ್ಕೆ ಕರೆತಂದಿದ್ದೇವೆ~ ಎಂದು ಅಪ್ಪೇಗೌಡನಹಳ್ಳಿಯ ಶ್ರಿರಾಮ ಯುವಕಸಂಘದ ಎ.ಎಂ. ತ್ಯಾಗರಾಜ ತಿಳಿಸಿದರು.

`ನಾವು ಎಂದೂ ಚಿತ್ರಮಂದಿರಕ್ಕೆ ಹೋಗಿರಲಿಲ್ಲ. ಈ ಅಣ್ಣಂದಿರಿಂದಾಗಿ ಸ್ವಯಂ ಕೃಷಿ ಚಿತ್ರಕ್ಕೆ ಬಂದೆವು. ಬಡವನಾಗಿ ಹುಟ್ಟುವುದು ತಪ್ಪಲ್ಲ. ಆದರೆ ಬಡವನಾಗಿ ಸಾಯುವುದು ತಪ್ಪು ಎಂಬ ಸಂದೇಶವಿದೆ. ಹಾಡುಗಳು ಇಂಪಾ ಗಿವೆ, ನಮಗೆಲ್ಲಾ ಹೊಸ ಅನುಭವ ವಾಯಿತು ಎಂದು ಅಂಧ ಮಕ್ಕಳು ಅಭಿಪ್ರಾಯಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.