ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ-ಕೋಲಾರಕ್ಕೆ ರೈಲು ಸಂಪರ್ಕ ಕಲ್ಪಿಸುವ ರೈಲ್ವೆ ಕಾಮಗಾರಿ ಭರದಿಂದ ಸಾಗಿದೆ. ಹಗಲು ರಾತ್ರಿಯೆನ್ನದೇ ಕಾಮಗಾರಿ ಮುಂದುವರೆದಿದ್ದು, ರೈಲ್ವೆ ಮಾರ್ಗ ದುದ್ದಕ್ಕೂ ಭಾರಿ ಪ್ರಮಾಣದಲ್ಲಿ ಜೆಲ್ಲಿಕಲ್ಲುಗಳನ್ನು ಸುರಿ ಯಲಾಗಿದೆ.

ರೈಲ್ವೆ ಹಳಿಗಳ ಜೊತೆಗೆ ಕಂಬಿಗಳನ್ನು ಅಳವಡಿಸಲಾಗುತ್ತಿದೆ. ಹಿರಿಯ ಅಧಿಕಾರಿಗಳು ಸಹ ಸ್ಥಳಕ್ಕೆ ಭೇಟಿ ನೀಡಿ, ಎಲ್ಲವನ್ನೂ ಪರಿಶೀಲಿಸುತ್ತಿದ್ದಾರೆ. ಕಾಮಗಾರಿ ವೇಗವಾಗಿ ಪ್ರಗತಿ ಕಾಣುತ್ತಿರುವ ಬಗ್ಗೆ ಕೆಲವರಲ್ಲಿ ಸಂತಸವಿದೆ. ಆದರೆ ಇನ್ನೂ ಕೆಲವರಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.

ಚಿಕ್ಕಬಳ್ಳಾಪುರದಿಂದ ಕೋಲಾರಕ್ಕೆ ರೈಲು ಸಂಚಾರ ಆರಂಭಗೊಂಡರೆ, ಮನೆ-ಮಠವನ್ನು ಕಳೆದು ಕೊಳ್ಳ ಬೇಕಾ ಗುತ್ತದೆ ಎಂಬ ಭೀತಿ ಚಾಮರಾಜಪೇಟೆ ಮತ್ತು ಅಂಬೇಡ್ಕರ್ ಕಾಲೊನಿಯ ನಿವಾಸಿಗಳಲ್ಲಿ ಆವರಿಸಿದೆ. ರೈಲು ಸಂಚಾರ ಸುಗಮಗೊಳಿಸುವ ಉದ್ದೇಶದಿಂದ ರೈಲ್ವೆ ಇಲಾಖೆಯು ಈಗಾಗಲೇ ನಿವಾಸಿಗಳಿಗೆ ನೋಟಿಸ್ ಸಹ ಹೊರಡಿಸಿದೆ. ನಿಗದಿತ ದಿನಗಳೊಳಗೆ ಮನೆಗಳನ್ನು ಖಾಲಿ ಮಾಡುವಂತೆ ಸೂಚನೆಯನ್ನು ನೀಡಿದೆ.

`ಹಲವು ವರ್ಷಗಳಿಂದ ಇಲ್ಲೇ ವಾಸವಿದ್ದೇವೆ. ನಮ್ಮ ಮಕ್ಕಳು ಇಲ್ಲೇ ಹುಟ್ಟಿ-ಬೆಳೆದಿದ್ದಾರೆ. ಇಲ್ಲಿರುವ ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆ. ಈಗ ದಿಢೀರ್ನೇ ಬಂದು ಮನೆಗಳನ್ನು ಖಾಲಿ ಮಾಡಿಯೆಂದು ಹೇಳಿದರೆ ಏನೂ ಅರ್ಥ? ಇರುವ ಸಣ್ಣಪುಟ್ಟ ಮನೆಗಳನ್ನು ಸಹ ಕಳೆದುಕೊಂಡು ಬಿಟ್ಟರೆ, ನಾವು ಸಂಪೂರ್ಣವಾಗಿ ಅನಾಥರಾಗುತ್ತೇವೆ. ಇಲ್ಲಿ ಸುಮಾರು 300 ಮನೆಗಳಿದ್ದು, ಸಾವಿರಾರು ಜನರು ವಾಸವಿದ್ದಾರೆ. ಅವರೆಲ್ಲ ಎಲ್ಲಿ ಹೋಗಬೇಕು~ ಎಂದು ನಿವಾಸಿಗಳು ಪ್ರಶ್ನಿಸುತ್ತಾರೆ.

ಆತಂಕ ಏಕೆ ?: ರೈಲ್ವೆ ಕಾಮಗಾರಿ ಮತ್ತು ಮನೆ ತೆರವುಗೊಳಿಸುವ ಕಾರ್ಯಾಚರಣೆ ಪ್ರಕ್ರಿಯೆ ನಿನ್ನೆ-ಮೊನ್ನೆಯ ಸಂಗತಿಯೇನಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ರೈಲ್ವೆ ಇಲಾಖೆ ಮತ್ತು ಚಾಮರಾಜಪೇಟೆ, ಅಂಬೇಡ್ಕರ್ ಕಾಲೊನಿಯ ನಿವಾಸಿಗಳೊಡನೆ ವಾದ-ವಿವಾದ ನಡೆಯುತ್ತಲೇ ಬಂದಿದೆ. `ರೈಲ್ವೆ ಇಲಾಖೆಗೆ ಸೇರಿದ ಜಮೀನಿನಲ್ಲಿ ಮನೆಗಳನ್ನು ನಿರ್ಮಿಸಿರುವುದು ತಪ್ಪು.

ಅವುಗಳನ್ನು ತೆರವುಗೊಳಿಸಬೇಕು~ ಎಂದು ರೈಲ್ವೆ ಅಧಿಕಾರಿಗಳು ಹೇಳಿದರೆ, ಅದಕ್ಕೆ ಪ್ರತ್ಯುತ್ತರ ನೀಡುವ ನಿವಾಸಿಗಳು, `ನಮಗೆ ಬೇರೆಡೆ ಮನೆ ಅಥವಾ ನಿವೇಶನ ಕಲ್ಪಿಸಿಕೊಡಿ. ಮನೆ ಖಾಲಿ ಮಾಡುತ್ತೇವೆ~ ಎನ್ನುತ್ತಾರೆ.

ಈ ವಾದ-ವಿವಾದ ತಾರಕಕ್ಕೇರಿದಾಗ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರು ಮಧ್ಯೆ ಪ್ರವೇಶಿಸಿ, ಬಡಾವಣೆಗಳ ನಿವಾಸಿಗಳೊಂದಿಗೆ ಸಂವಾದ ನಡೆಸಿದರು. ಪ್ರತ್ಯೇಕ ನಿವೇಶನ ಮತ್ತು ಮನೆಗಳನ್ನು ಕಲ್ಪಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಎನ್.ಮಂಜುಳಾ ಮತ್ತು ಶಾಸಕ ಕೆ.ಪಿ.ಬಚ್ಚೇಗೌಡರಿಗೆ ತಿಳಿಸಿದರು. ಇದರಿಂದಾಗಿ ನಿವಾಸಿಗಳು ಸಮಾಧಾನಗೊಂಡಿದ್ದರು. ಆದರೆ ಈಗ ದಿಢೀರ್ ಮನೆ ತೆರವಿಗೆ ನೋಟಿಸ್ ಹೊರಡಿಸಲಾಗಿರುವುದು, ನಿವಾಸಿಗಳಲ್ಲಿ ಆತಂಕ ಹೆಚ್ಚಿಸಿದೆ.

`ನೈರುತ್ಯ ರೈಲ್ವೆ ಇಲಾಖೆಯು ಇಲ್ಲಿನ ಕೆಲ ನಿವಾಸಿಗಳಿಗೆ ಫೆ.2ರಂದು ನೋಟಿಸ್ ಹೊರಡಿಸಿ, ಇಲಾಖೆ ಅಧಿಕಾರಿ ಎದುರು ಮಾ.7ರಂದು ಹಾಜರಾಗಲು ಸೂಚಿಸಿತ್ತು. ಮುಂದಿನ ದಿನಗಳಲ್ಲಿ, ಇದೇ ರೀತಿ ಪ್ರತಿಯೊಬ್ಬರ ಮನೆಗೂ ನೋಟಿಸ್ ಹೊರಡಿಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಕೂಲಿ ಕೆಲಸವನ್ನೇ ನಂಬಿಕೊಂಡು ಬದುಕುವ ಜನ ನಾವು. ಓದು-ಬರಹ ಹೆಚ್ಚು ಗೊತ್ತಿಲ್ಲ. ಇಂಗ್ಲಿಷ್ ನೋಟಿಸ್ ನಮಗೆ ಅರ್ಥವಾಗುವುದಿಲ್ಲ. ನೋಡಿದ ಮೇಲೆ ಭಯವಾಗುತ್ತಿದೆ~ ಎಂದು ನಿವಾಸಿಗಳು ಹೇಳುತ್ತಾರೆ.

`ಕೆ.ಎಚ್.ಮುನಿಯಪ್ಪ ಅವರು ರೈಲು ನಿಲ್ದಾಣಕ್ಕೆ ಭೇಟಿ ನೀಡಿದಾಗ, ಮನೆ ಅಥವಾ ನಿವೇಶನ ಕೊಟ್ಟ ನಂತರವಷ್ಟೇ ನಿಮ್ಮನ್ನು ಮನೆಯಿಂದ ಖಾಲಿ ಮಾಡಿಸುತ್ತೇವೆ ಎಂದಿದ್ದರು. ಬೇರೆಡೆ ವಾಸಿಸಲು ಮಾನಸಿಕವಾಗಿ ಸಿದ್ಧತೆ ಡೆಸಿದ್ದೆವು. ಆದರೆ ಒಮ್ಮಿಂದೊಮ್ಮೆಲೇ ಮನೆ ಖಾಲಿ ಮಾಡಿಯೆಂದರೆ, ನಾವೆಲ್ಲಿ ಹೋಗಬೇಕು ? ನಮಗೆ ಪ್ರತ್ಯೇಕ ಮನೆ ಅಥವಾ ನಿವೇಶನವನ್ನೂ ಸಹ ಕಲ್ಪಿಸಲಾಗಿಲ್ಲ. ಏನೂ ಮಾಡಬೇಕೆಂದು ನಮಗೆ ದಿಕ್ಕೇ ತೋಚುತ್ತಿಲ್ಲ~ ಎಂದು ನಿವಾಸಿ ಸುರೇಶ್ ತಿಳಿಸಿದರು.

ಚಾಮರಾಜಪೇಟೆ ಮತ್ತು ಅಂಬೇಡ್ಕರ್ ಕಾಲೊನಿ ಬಡಾವಣೆಗಳು ಹಲವು ವೈಶಿಷ್ಟಗಳಿಂದ ಕೂಡಿದೆ. ಇಲ್ಲಿರುವ ನಮ್ಮೂರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂರಾರು ಮಕ್ಕಳು ಓದುತ್ತಾರೆ. ಇಲ್ಲಿರುವ ದೇಗುಲಗಳಲ್ಲಿ ನಿತ್ಯ ಪೂಜೆ ನಡೆಯುತ್ತದೆ. ಬಹುತೇಕ ಮಂದಿ ಕೂಲಿಕಾರ್ಮಿಕರೇ ಆಗಿದ್ದು, ಆಯಾ ದಿನದ ದುಡಿಮೆ ನಂಬಿಕೊಂಡು ಅವರು ಜೀವನ ನಡೆಸುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.