ಶನಿವಾರ, 21 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶಾಂತಿ, ನೆಮ್ಮದಿಯಿಂದ ಕೂಡಿ ಬಾಳಿ

ಭಾವೈಕ್ಯ, ಬಾಂಧವ್ಯ ಬೆಸುಗೆಯ ಆಚರಣೆ
Published : 17 ಜೂನ್ 2018, 12:38 IST
ಫಾಲೋ ಮಾಡಿ
Comments

ಗೌರಿಬಿದನೂರು: ಆತ್ಮವಿಶ್ವಾಸ, ಸೇವೆ, ಭಾವೈಕ್ಯದ ಸಂಕೇತ ಈದ್‌ ಉಲ್‌ ಫಿತ್ರ್‌ ಆಚರಣೆ ಶನಿವಾರ ಸಂಭ್ರಮದಿಂದ ನಡೆಯಿತು.

ರಂಜಾನ್ ಉಪವಾಸ ವ್ರತದಲ್ಲಿದ್ದ ಮುಸ್ಲಿಮರು ಶ್ವೇತ ವರ್ಣದ ಹೊಸ ಬಟ್ಟೆ ತೊಟ್ಟು ಪಟ್ಟಣದ ಹೊರ ವಲಯದ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡು ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸಿದರು.

ಧಾರ್ಮಿಕ ಮುಖಂಡರು, ಸಮುದಾಯದ ಹಿರಿಯರು ಮತ್ತು ಮಕ್ಕಳು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡರೆ, ಮಹಿಳೆಯರು ಮನೆಗಳಲ್ಲೇ ಪ್ರಾರ್ಥನೆ ಮಾಡಿ ಅಲ್ಲಾಹುವನ್ನು ಸ್ಮರಿಸಿದರು. ಪಟ್ಟಣದ ಸಾಯಿನಗರದ ಈದ್ಗಾ ಮೈದಾನದಲ್ಲಿ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು.

ನಂತರ ಮಾತನಾಡಿ, 'ಹಿಂದೂ– ಮುಸ್ಲಿಂ ಸಮುದಾಯದವರು ಸಹೋದರಂತೆ ಪ್ರೀತಿ, ವಿಶ್ವಾಸದಿಂದ ಸೌಹಾರ್ದಯುತವಾಗಿ ಬದುಕುವುದು ಸಂತಸದ ವಿಚಾರ. ಇದು ಜಗತ್ತಿಗೆ ಪ್ರೇರಣೆ ಆಗಬೇಕು’ ಎಂದು ತಿಳಿಸಿದರು.

ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳ ಸಮರ್ಪಕ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂದರು.

ನಗರಸಭೆ ಅಧ್ಯಕ್ಷ ಕಲೀಂ ಉಲ್ಲಾ, ಮೌಲಾನಾ ಅಶ್ರಫ್‌ ಅಲಿ, ಮೌಲಾನಾ ಅಬ್ದುಲ್‌ ಸುಬಾನ್‌ ಮಾತನಾಡಿ, 'ಈದ್ ಉಲ್‌ ಫಿತ್ರ್‌ ಶಾಂತಿ, ಸಹಬಾಳ್ವೆ, ಸೌಹಾರ್ದದ ಸಂಕೇತವಾಗಿದೆ. ಸಮಾಜದ ಎಲ್ಲ ಜಾತಿ, ಧರ್ಮಗಳ ಜನರ ಭಾವನೆ, ನಂಬಿಕೆ, ಆಚರಣೆಗೆ ಅಡ್ಡಿ ಆಗದಂತೆ ಎಲ್ಲರೂ ಸಹಕಾರ ನೀಡಿ, ಗೌರವಿಸಬೇಕು’ ಎಂದು ತಿಳಿಸಿದರ.

ಮುಖಂಡರಾದ ಎಚ್.ಎನ್. ಪ್ರಕಾಶ್ ರೆಡ್ಡಿ, ಅಹ್ಲೆ ಸುನ್ನತ್‌ ಉಲ್ಲಾ ಜಮಾತಿನ ಅಧ್ಯಕ್ಷ ಶಫಿ ಉಲ್ಲಾ, ಕಾರ್ಯದರ್ಶಿ ದಸ್ತಗಿರ್ ಸಾಬ್, ನಗರಸಭೆ ಸದಸ್ಯರಾದ ಶಫೀಕ್ ಖಾನ್, ಮುನ್ನಾ, ಸುಬಾನ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಉಪಾಧ್ಯಕ್ಷ ಖಲೀಲ್ ಪಾಷಾ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT