ಮಂಗಳವಾರ, ಜನವರಿ 26, 2021
16 °C

ಬೈಕು– ಕಾರು ಡಿಕ್ಕಿ: ಹೆಡ್‌ ಕಾನ್‌ಸ್ಟೆಬಲ್‌ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ತಾಲ್ಲೂಕಿನ ಹಿರೇಗೌಜ ಸಮೀಪ ಕೆ.ಎಂ ರಸ್ತೆಯಲ್ಲಿಬುಧವಾರ ರಾತ್ರಿ ಕಾರು ಮತ್ತು ಬೈಕು ಮುಖಾಮುಖಿ ಡಿಕ್ಕಿಯಾಗಿ ಬೈಕ್‌ ಸವಾರ ಹೆಡ್‌ ಕಾನ್‌ಸ್ಟೆಬಲ್‌ ಟಿ.ಎಸ್‌. ಸಿದ್ದರಾಮಪ್ಪ(48) ಸಾವಿಗೀಡಾಗಿದ್ದಾರೆ.

ಸಿದ್ದರಾಮಪ್ಪ ಅವರು ಕರ್ತವ್ಯ ಮುಗಿಸಿ ಸಖರಾಯಪಟ್ಟಣದಿಂದ ಚಿಕ್ಕಮಗಳೂರಿಗೆ ವಾಪಸ್ಸಾಗುತ್ತಿದ್ದಾಗ ಅಪಘಾತ ಸಂಭವಿಸಿದೆ.

ಕಾರು ಕಡೂರು ಕಡೆಗೆ, ಬೈಕು ಚಿಕ್ಕಮಗಳೂರು ಕಡೆಗೆ ಸಂಚರಿಸುತ್ತಿತ್ತು. ಅವಘಡದಲ್ಲಿ ಕಾರು ಮತ್ತು ಬೈಕು ಜಖಂ ಗೊಂಡಿವೆ.
‘ಸಿದ್ದರಾಮಪ್ಪ ಅವರು ಇನ್ನು ಎರಡ್ಮೂರು ದಿನದಲ್ಲಿ ಎಎಸ್‌ಐ (ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌) ಹುದ್ದೆಗೆ ಬಡ್ತಿಯಾಗುವ ನಿರೀಕ್ಷೆಯಲ್ಲಿದ್ದರು. ಚಿಕ್ಕಮಗಳೂರಿನ ಕಲ್ದೊಡ್ಡಿಯ ಪೊಲೀಸ್‌ ವಸತಿ ಗೃಹದಲ್ಲಿ ವಾಸವಾಗಿದ್ದರು. ಮೂಲತಃ ಅಜ್ಜಂಪುರ ತಾಲ್ಲೂಕಿನ ತಮ್ಮಟದಹಳ್ಳಿಯವರು‘ ಎಂದು ಅವರ ಸಹಪಾಠಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.