ಆಲ್ದೂರು: ಪಂಚಾಯಿತಿ ವ್ಯಾಪ್ತಿಯ 15 ವ್ಯಾಪಾರ ಮಳಿಗೆಗಳ ಬಹಿರಂಗ ಹರಾಜು ಪ್ರಕ್ರಿಯೆ ಶುಕ್ರವಾರ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಮುಂಗಡವಾಗಿ ಡಿಡಿ ಸಲ್ಲಿಸಿದ ಆಸಕ್ತ ಅಭ್ಯರ್ಥಿಗಳು ಹರಾಜಿನಲ್ಲಿ ಪಾಲ್ಗೊಂಡರು. ಪಂಚಾಯಿತಿ ಅಧ್ಯಕ್ಷೆ ಶ್ರೀದೇವಿ ಕುಮಾರಸ್ವಾಮಿ, ಉಪಾಧ್ಯಕ್ಷ ಭರತ್ ಎ.ಬಿ, ಪಂಚಾಯಿತಿ ಸದಸ್ಯರ ಸಮ್ಮುಖದಲ್ಲಿ ಹರಾಜು ನಡೆಯಿತು.

ಪಂಚಾಯಿತಿಗೆ ಸೇರಿದ 15 ಮಳಿಗೆಗಳಿದ್ದು ಶುಕ್ರವಾರ ನಡೆದ ಹರಾಜಿನಲ್ಲಿ 13 ಮಳಿಗೆಗಳನ್ನು ವ್ಯಾಪಾರಿಗಳು ಖರೀದಿಸಿದರು.

‘ಹರಾಜಿನಿಂದ ಒಟ್ಟು ₹10 ಲಕ್ಷ ಸಂಗ್ರಹವಾಗಿದೆ. ಮಳಿಗೆ ಪಡೆದವರು ಅನುಸರಿಸಬೇಕಾದ ಮಾರ್ಗಸೂಚಿಗಳು ಮತ್ತು ನಿಬಂಧನೆಗಳನ್ನು ತಿಳಿಸಲಾಗಿದ್ದು, ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಪಿಡಿಒ ಶಂಶೂನ್ ನಹರ್ ಮಾಹಿತಿ ನೀಡಿದರು.

ಪಂಚಾಯಿತಿ ಸದಸ್ಯರಾದ ಅಶೋಕ್ ಡಿ.ಬಿ, ಗಿರೀಶ್ ಹವ್ವಳ್ಳಿ, ಸರೋಜಮ್ಮ, ನವರಾಜು ಎಚ್, ನಾಗರತ್ನಾ, ಮಮತಾ, ಕಾರ್ಯದರ್ಶಿ ಸಿ.ಡಿ ಉಷಾ, ಸಿಬ್ಬಂದಿ ಮಂಜುನಾಥ್, ಪ್ರವೀಣ್, ವಾಣಿ, ಪೂರ್ಣೇಶ್, ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.