ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐಗೆ ಧಮ್ಕಿ: ವಿರೋಧಿಗಳ ಕುತಂತ್ರ ಎಂದ ಬಿಜೆಪಿ ಶಾಸಕ ಎಂ.ಪಿ.ಕುಮಾರಸ್ವಾಮಿ

Last Updated 6 ಮೇ 2022, 8:20 IST
ಅಕ್ಷರ ಗಾತ್ರ

ಚಿಕ್ಕಮಗಳೂರು:'ಪಿಎಸ್ ಐ ರವೀಶ್ ಫೋನ್ ಸಂಭಾಷಣೆ ರೆಕಾರ್ಡ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡಿದ್ದಾರೆ. ಈ ಬಗ್ಗೆ ಸದನ ಸಮಿತಿಗೆ ಹಕ್ಕುಚ್ಯುತಿ ಮಂಡಿಸುತ್ತೇನೆ' ಎಂದು ಶಾಸಕ ಎಂ.ಪಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದರು.

'ಪ್ರಜಾವಾಣಿ'ಯೊಂದಿಗೆ ಮಾತನಾಡಿ, 'ಶಾಸಕನನ್ನು 'ಬ್ಲ್ಯಾಕ್ ಮೇಲ್' ಮಾಡುವ ತಂತ್ರ ಮಾಡಿದ್ದಾರೆ. ರೆಕಾರ್ಡ್ ಮಾಡಿದ್ದಕ್ಕೆ ಆತ ವಿವರಣೆ ನೀಡಬೇಕು. ಇಲ್ಲಿಂದ ಆತ ಹೋಗಬೇಕು' ಎಂದರು

***

ಪಿಎಸ್‌ಐ ರವೀಶ್‌ಗೆ ಧಮ್ಕಿ ಹಾಕಿರುವ ಆಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವುದಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಫೆಸ್ಬುಕ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ಫೆಸ್ಬುಕ್ ಖಾತೆಯಲ್ಲಿನ ಪೋಸ್ಟ್ ಇಂತಿದೆ...

ಆತ್ಮೀಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ನಾಗರಿಕ ಬಂದುಗಳೇ ಹಾಗೂ ನನ್ನ ಪ್ರೀತಿಯ ಭಾಜಪ ಕಾರ್ಯಕರ್ತರೇ ಮತ್ತು ಮುಖಂಡರೇ.....

ಮಲ್ಲಂದೂರು ಪಿಎಸ್ಐಯೊಂದಿಗಿನಾ ಮಾತುಕತೆಯ ಆಡಿಯೋ ನನ್ನ ವಿರೋಧಿಗಳು ಮಾಡಿಸಿರುವ ಕುತಂತ್ರ,

ಹಿಂದೆ ಈ ಪಿಎಸ್ಐ ನನ್ನ ಬಳಿ ಬಂದಿದ್ದರು ಆ ಸಂದರ್ಭದಲ್ಲಿ ನಾನು ಮಲ್ಲಂದುರ್ ವ್ಯಾಪ್ತಿಯಲ್ಲಿ ಕೂಲಿ ಕಾರ್ಮಿಕರು ಅತ್ಯಂತ ಹಿಂದುಳಿದ ವರ್ಗದ ಜನಾಂಗದವರು ಹೆಚ್ಚು ವಾಸಿಸುತ್ತಿರುವುದರಿಂದ, ನಿಮ್ಮ ಸ್ವಂತ ಊರು ಮಂಡ್ಯ ಆಗಿದ್ದು ಹೊಸದಾಗಿ ಸೇರ್ಪಡೆಯಾಗಿರುವುದರಿಂದ, ಹಾಗೂ ಅನುಭವದ ಕೊರತೆ ಇರುವುದರಿಂದ , ಭಾಷೆಯ ವ್ಯತ್ಯಾಸ ಇರುವುದರಿಂದ ಜನರನ್ನು ಸಂಭಾಳಿಸುವುದು ಕಷ್ಟ ಎಂದು ತಿಳಿಹೇಳಿ ಕಳಿಸಿದ್ದೆ, ಅದನ್ನು ಹೊರತುಪಡಿಸಿ ಯಾವುದೇ ಜಾತಿ ಜನಾಂಗದ ವಿಚಾರ ಅಥವಾ ಬೇರೆ ವಿಚಾರವನ್ನು ಕೇಳದೆಯೇ ಕಳಿಸಿಕೊಟ್ಟಿದ್ದೇನೆ.

ಇದೀಗ ನಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನನ್ನ ಗಮನಕ್ಕೆ ಬಾರದೆ ಕೆಲಸಕ್ಕೆ ಹಾಜರಾಗಿದ್ದು, ಆ ವ್ಯಾಪ್ತಿಯ ನಮ್ಮ ಕಾರ್ಯಕರ್ತರು ಹಾಗೂ ಮತದಾರರು ನನ್ನ ಮೇಲೆ ಒತ್ತಡ ಹಾಕಿರುವುದರಿಂದ ಒಬ್ಬ ಶಾಸಕನಾಗಿ ನಾನೇ ಮಾತನಾಡಬೇಕಿದೆ, ಏಕೆಂದರೆ ಪೊಲೀಸ್ ಠಾಣೆ ವಿಚಾರವಾಗಿ ಪ್ರತಿದಿನ ಹತ್ತಾರು ಕರೆಗಳು ನನಗೆ ಬರುತ್ತವೆ ಮತ್ತು ನಾನೇ ಖುದ್ದು ಅದನ್ನು ನಿವಾರಣೆ ಮಾಡಬೇಕಾದ್ದರಿಂದ ಅದು ನನ್ನ ಹೊಣೆಗಾರಿಕೆಯೂ ಸತ್ಯ.

ಇದನ್ನು ಹೊರತುಪಡಿಸಿ ಇದೀಗ ನನ್ನ ವಿರುದ್ಧ ಒಕ್ಕಲಿಗರ ವಿರೋಧಿ ಎಂದು ಕುತಂತ್ರ ಹೆಣೆಯುತ್ತಿದ್ದು ಇದು ಸತ್ಯಕ್ಕೆ ದೂರವಾದ ಮಾತು, ನನ್ನ ಜೊತೆಗಾರ ರಲ್ಲಿ ಬಹುತೇಕರು ಒಕ್ಕಲಿಗ ನಾಯಕರೆ, ಹಾಗೂ ನಮ್ಮ ಕ್ಷೇತ್ರದ ಸಂಪೂರ್ಣ ಅಭಿವೃದ್ಧಿಯಲ್ಲಿ ಒಕ್ಕಲಿಗರ ನಿರ್ದೇಶನದಂತೆ ಬಹುತೇಕ ಮಾಡಲಾಗುತ್ತಿದೆ ಹಾಗೂ ಅದನ್ನು ನೀವು ಸದಾ ನೋಡುತ್ತಿದ್ದೀರಿ ಮತ್ತೆ ಅದು ಹೇಗೆ ನಾನು ಒಕ್ಕಲಿಗರ ವಿರೋಧಿಯಾಗುತೇನೆ, ಹಾಗಾಗಿ ನನ್ನ ವಿರೋಧಿಗಳು ಹೆಣೆದಿರುವ ಈ ಕುತಂತ್ರವನ್ನು ದಯವಿಟ್ಟು ಯಾರೂ ನಂಬಬಾರದು.

ನಾನು ಸದಾ ನಿಮ್ಮ ಸೇವಾನಿರತ,

ಎಂಪಿ ಕುಮಾರಸ್ವಾಮಿ, ಶಾಸಕ, ಮೂಡಿಗೆರೆ ವಿಧಾನಸಭಾ ಕ್ಷೇತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT