ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವ ಸ್ತನ್ಯಪಾನ ಸಪ್ತಾಹ: ‘ಎದೆಹಾಲು ಕುಡಿಸಿದರೆ ಸೌಂದರ್ಯ ಕುಂದುವುದಿಲ್ಲ’

ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮದಲ್ಲಿ ಎಸ್.ನಯನಾ
Last Updated 2 ಆಗಸ್ಟ್ 2019, 8:38 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಮಗುವಿಗೆ ಎದೆಹಾಲು ಕುಡಿಸಿದರೆ ತಾಯಿಯ ಸೌಂದರ್ಯ ಹಾಳಾಗುವುದಿಲ್ಲ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿ ಎಸ್.ನಯನಾ‌ ತಿಳಿಸಿದರು.

ಇಲ್ಲಿನ ಸರ್ಕಾರಿ ಆಸ್ಪತ್ರೆಯ ಆವರಣ ದಲ್ಲಿ ಗುರುವಾರ ಆರೋಗ್ಯ ಇಲಾಖೆ, ರೋಟರಿ ಕ್ಲಬ್, ಇನ್ಹರ್ ವೀಲ್‍ಕ್ಲಬ್ ಹಾಗೂ ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಮಹಿಳಾ ಘಟಕದ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ಗರ್ಭಿಣಿಯರಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ವಿಜ್ಞಾನ ಸಾಕಷ್ಟು ಮುಂದುವರೆದಿ ದ್ದರೂ ಎದೆ ಹಾಲನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಎದೆ ಹಾಲಿ ನಲ್ಲಿರುವ ಪೌಷ್ಟಿಕಾಂಶವು ಮಗುವಿಗೆ ದೊರಕಿದರೆ ಮಗು ಆರೋಗ್ಯವಾಗಿ ಬೆಳೆಯುತ್ತದೆ. ಎದೆಹಾಲು ಅಮೃತಕ್ಕೆ ಸಮಾನ ಎಂದರು.

ರೋಟರಿ ಸಂಸ್ಥೆಯ ಮಾಜಿ ಅಧ್ಯಕ್ಷ ಎಚ್.ಟಿ.ರಾಜೇಂದ್ರ ಮಾತನಾಡಿ, ‘ಮಗುವಿಗೆ ಎದೆ ಹಾಲನ್ನು ನೀಡಿದರೆ ತನ್ನ ಸೌಂದರ್ಯ ಹಾಳಾಗುತ್ತದೆ ಎಂಬ ತಪ್ಪುಕಲ್ಪನೆಯಿಂದ 1990ರ ದಶಕದಲ್ಲಿ ತಾಯಂದಿರು ಮಗುವಿಗೆ ಎದೆ ಹಾಲನ್ನು ಕೊಡಲು ಹಿಂಜರಿಕೆ ಮಾಡುತ್ತಿದ್ದರು. ಆದರೆ, ನಂತರದ ವರ್ಷಗಳಲ್ಲಿ ಎದೆ ಹಾಲಿನ ಮಹತ್ವ ಅರಿತು ಕೊಂಡ ತಾಯಂದಿರು ಮಗುವಿಗೆ ಎದೆ ಹಾಲನ್ನು ನೀಡುತ್ತಿದ್ದಾರೆ. ತಾಯಿಯು ಮಗುವಿಗೆ ಎದೆಹಾಲನ್ನು ನೀಡುವುದರಿಂದ ಮಗುವಿಗೆ ರೋಗ ನಿರೋಧಕ ಶಕ್ತಿ, ಭೌತಿಕ ಬೆಳವಣಿಗೆ ಆಗಲಿದೆ. ಸ್ಪರ್ಶ ಸುಖ ಅನುಭವಿಸುವ ತಾಯಿ-ಮಗುವಿನ ಬಾಂಧವ್ಯ ಇನ್ನಷ್ಟು ವೃದ್ಧಿಯಾಗಲಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ವೀರ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ, ‘1992ರಿಂದ ವಿಶ್ವ ಸ್ತನ್ಯಪಾನ ಸಪ್ತಾಹ ಪ್ರಾರಂಭವಾಯಿತು.ಇದಕ್ಕೂ ಮೊದಲು ಎದೆ ಹಾಲಿನ ಮಹತ್ವದ ಬಗ್ಗೆ ಹೆಚ್ಚು ತಿಳಿವಳಿಕೆ ಇರಲಿಲ್ಲ. ಪ್ರಸ್ತುತ ವಿಶ್ವದ 120 ದೇಶಗಳಲ್ಲಿ ಆಗಸ್ಟ್ 1ರಿಂದ 7 ರ ವರೆಗೆ ಸ್ತನ್ಯಪಾನ ಸಪ್ತಾಹ ಆಚರಿಸಿ ತಾಯಿಂದರಿಗೆ ಮಾಹಿತಿ ನೀಡಲಾಗುತ್ತಿದೆ’ ಎಂದರು.

ತಾಲ್ಲೂಕು ಕ್ಷೇತ್ರ ಆರೋಗ್ಯ ನಿರೀಕ್ಷಿಕ ಪಿ.ಪಿ.ಬೇಬಿ, ಸ್ಲೈಡ್ ಶೋ ಮೂಲಕ ಎದೆ ಹಾಲಿನ ಮಹತ್ವ ವಿವರಿಸಿದರು. ರೋಟರಿ ಕ್ಲಬ್‍ ಅಧ್ಯಕ್ಷ ಬಿ.ವಿ.ಉಪೇಂದ್ರ, ಕಾರ್ಯದರ್ಶಿ ಇ.ಸಿ.ಜೋಯಿ, ಇನ್ನರ್ ವೀಲ್‍ಕ್ಲಬ್‍ ಅಧ್ಯಕ್ಷೆ ಪ್ರಶಾಂತಿ ವೆಂಕಟೇಶ್, ಕಾರ್ಯದರ್ಶಿ ರಮ್ಯಕೇಶವ, ಭಾರತೀಯ ಮಾನವ ಹಕ್ಕುಗಳ ಸಂರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಜುಬೇದ, ಸುಜಾತಾ, ಪಿ.ಪ್ರಭಾಕರ್, ಲಲಿತ ಪಾಲ್ಗೊಂಡಿದ್ದರು.

ಗರ್ಭಿಣಿಯರಿಗೆ ಅರಿಸಿನ ಕುಂಕಮ, ತೆಂಗಿನ ಕಾಯಿ, ಅಕ್ಕಿ, ಕಣದೊಂದಿಗೆ ಬಾಗೀಣ ನೀಡಿ ಹಾಡಿನೊಂದಿಗೆ ಆರತಿ ಎತ್ತಿ ವಿಶಿಷ್ಟವಾಗಿ ಸೀಮಂತ ಕಾರ್ಯಕ್ರಮ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT