ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ಕಲ್ಲು ಗಣಿಗಾರಿಕೆ, ಗುಪ್ತವಾಗಿ ಸ್ಫೋಟಕ ಬಳಕೆ: ನಾಲ್ವರ ವಿರುದ್ಧ ಪ್ರಕರಣ

Last Updated 24 ಸೆಪ್ಟೆಂಬರ್ 2021, 5:51 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಅನಧಿಕೃತವಾಗಿ ಕಲ್ಲು ಗಣಿಗಾರಿಕೆ, ಗುಪ್ತವಾಗಿ ಸ್ಫೋಟಕ ಬಳಕೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ತರೀಕೆರೆ ಠಾಣೆಯಲ್ಲಿ ದೂರು ದಾಖಲಾಗಿದೆ.

ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ವರದಿ ಮೇರೆಗೆ ಪೊಲೀಸರ ಕಾರ್ಯಪ್ರವೃತರಾಗಿ ಸ್ಥಳ ಪರಿಶೀಲಿಸಿದ್ದಾರೆ. ತಂತಿ, ಇತರ ಕೆಲ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಸುರೇಶ್, ದೊರೆ, ಸುನೀಲ್, ರಾಘವೇಂದ್ರ ಪ್ರಕರಣದ ಆರೋಪಿಗಳು. ಎಕ್ಸ್‌ ಪ್ಲೊಸಿವ್‌ ಸಬ್‌ಸ್ಟೆನ್ಸ್‌ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

ಸುನೀಲ್ ಮತ್ತು ದೊರೆ ಎಂಬುವರು ಪರವಾನಗಿ ಪಡೆಯದೆ ಪಿರುಮೇನಹಳ್ಳಿಯ ಸರ್ವೆ ನಂ 22 ರಲ್ಲಿ ಅನಧಿಕೃತವಾಗಿ ಗುಪ್ತವಾಗಿ ಸ್ಫೋಟಕಗಳನ್ನು ಬಳಸಿ ಕಲ್ಲುಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಭೂವಿಜ್ಞಾನ ಇಲಾಖೆ ಅಧಿಕಾರಿ ನೀಡಿದ ವರದಿ ಮೇರೆಗೆ ಪೊಲೀಸರು ಸ್ಥಳ ಪರಿಶೀಲನೆ ಮಾಡಿದ್ದಾರೆ. ಅಲ್ಲಿದ್ದ ರಾಘವೇಂದ್ರ ಎಂಬಾತನನ್ನು ಹಿಡಿದು ವಿಚಾರಣೆ ಮಾಡಿದ್ದಾರೆ. ಸ್ಥಳದಲ್ಲಿ ಬಂಡೆ ಸಿಡಿಸಿದ ಚೂರುಗಳ ಕಂಡುಬಂದಿವೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT