ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೂರು: ಕ್ರಿಸ್ತಶರಣ ಶಾಲೆಯಲ್ಲಿ ವಂದನೋತ್ಸವ

Last Updated 17 ಜನವರಿ 2023, 8:29 IST
ಅಕ್ಷರ ಗಾತ್ರ

ಬೀರೂರು: ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ಕ್ರಿಯಾಶೀಲ ಮನೋಭಾವದ ಮೂಲಕ ಸದೃಢಗೊಳಿಸಲು ಶಿಕ್ಷಕರು ಮತ್ತು ಪೋಷಕರು ಮುಂದಾಗಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಗಂಗಾಧರ್ ಹೇಳಿದರು.

ಪಟ್ಟಣದ ಶ್ರೀಗುರು ಕ್ರಿಸ್ತಶರಣ ಶಾಲೆಯಲ್ಲಿ ಶನಿವಾರ ಸಂಜೆ ನಡೆದ ವಂದನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಚಿಕ್ಕಮಗಳೂರಿನ ವಿನಯ್‍ಕುಮಾರ್ ಸ್ವಾಮೀಜಿ ಮಾತನಾಡಿ, ಗುರುವಿನ ಬೆಂಬಲದಿಂದ ಗುರಿಯೆಡೆಗೆ ಸಾಗುವುದೇ ದರ್ಶನ. ಮಕ್ಕಳು ಮನೆ, ಮನಸ್ಸು ಮತ್ತು ಸಮಾಜವನ್ನು ಬೆಳಗುವ ಹಣತೆಯಾಗಬೇಕು. ಪೋಷಕರು ತಮ್ಮ ಆಶಯವನ್ನು ಮಕ್ಕಳ ಮೇಲೆ ಹೇರದೇ ಅವರ ಪ್ರತಿಭೆಗೆ ಸಾಣೆ ಹಿಡಿದು ಅವರ ಆಸಕ್ತಿ ಇರುವ ಕ್ಷೇತ್ರದಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಡಬೇಕು ಎಂದರು.

ಮುಖ್ಯಶಿಕ್ಷಕಿ ಫ್ಲಾವಿಯಾ ಲೋಬೊ ವಾರ್ಷಿಕ ವರದಿ ಮಂಡಿಸಿದರು. ಸಿಸ್ಟರ್ ಭಾರತಿ ಲೋಬೊ, ತಾರಾ ಸೆರಾವೊ, ಪೋಷಕರು ಇದ್ದರು. ಮಕ್ಕಳು ವಿವಿಧ ಸಾಂಸ್ಕೃತಿಕ ನೃತ್ಯಗಳು, ನಾಟಕ ಪ್ರದರ್ಶನ ನೀಡಿ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT