ಚಿಕ್ಕಮಗಳೂರು: 2025–26ನೇ ಸಾಲಿನ ಬಜೆಟ್ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, 2023-24, 2024–25ನೇ ಸಾಲಿನಲ್ಲಿ ಪ್ರಸ್ತಾಪಿಸಿದ ಯೋಜನೆಗಳು ಘೋಷಣೆಯಾಗಿಯೇ ಉಳಿದಿವೆ.

2023–24ನೇ ಸಾಲಿನಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಮೂರು ಕೊಡುಗೆಗಳನ್ನು ಸರ್ಕಾರ ಬಜೆಟ್ನಲ್ಲಿ ನೀಡಿತ್ತು. ಕಿರು ವಿಮಾನ ನಿಲ್ದಾಣ, ಎನ್.ಆರ್.ಪುರದಲ್ಲಿ ಅಗ್ನಿಶಾಮಕ ಠಾಣೆ, ಕಾಫಿಗೆ ಬ್ರ್ಯಾಂಡ್ ರೂಪ ನೀಡುವ ಪ್ರಸ್ತಾಪ ಮಾಡಿತ್ತು.

ಮೊದಲನೆಯದಾಗಿ ಜಿಲ್ಲೆಯಲ್ಲಿ ಕಿರು ವಿಮಾನ ನಿಲ್ದಾಣ ನಿರ್ಮಾಣ ಮಾಡುವುದು. ಇದಕ್ಕೆ 1,200 ಮೀಟರ್ ರನ್ ವೇ ನಿರ್ಮಾಣವಾಗಬೇಕಿದ್ದು, 140 ಎಕರೆ ಜಾಗದ ಅಗತ್ಯವಿದೆ. ನಗರದ ಹೊರ ವಲಯದಲ್ಲಿ ಜಿಲ್ಲಾಡಳಿತ 120 ಎಕರೆ 22 ಗುಂಟೆ ಜಾಗವನ್ನು ಈ ಹಿಂದೆಯೇ ಕಾಯ್ದಿರಿಸಿದ್ದು, ಬಾಕಿ 19 ಎಕರೆಯನ್ನು ಸುತ್ತಮುತ್ತಲ ರೈತರಿಂದ ಸ್ವಾಧೀನ ಮಾಡಿಕೊಳ್ಳಬೇಕಿದೆ.

ಭೂಸ್ವಾಧೀನಕ್ಕೆ ₹24 ಕೋಟಿ ಅಗತ್ಯವಿದ್ದು, ₹7 ಕೋಟಿ ಲಭ್ಯವಿದೆ. ಇನ್ನೂ ₹17 ಕೋಟಿ ಅನುದಾನದ ಅಗತ್ಯವಿದೆ. ಭೂಸ್ವಾಧೀನ ಪ್ರಕ್ರಿಯೆಗೆ ಅಗತ್ಯ ಪ್ರಸ್ತಾವನೆ ಕೋರಿ ಕರ್ನಾಟಕ ರಾಜ್ಯ ಕೈಗಾರಿಕಾ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮದ(ಕೆಎಸ್ಐಐಡಿಸಿ) ವ್ಯವಸ್ಥಾಪಕ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಪತ್ರ ಬರೆದಿದ್ದಾರೆ.

ಅನುದಾನ ಬಂದರೆ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ಬಳಿಕ ಕೆಎಸ್ಐಐಡಿಸಿ ಕಿರು ವಿಮಾನ ನಿರ್ಮಾಣ ಮಾಡಬೇಕಿದೆ. ‘ಎರಡು ವರ್ಷ ಕಳೆದರೂ ಭೂಸ್ವಾಧೀನ ಪ್ರಕ್ರಿಯೆಯೇ ಆರಂಭವಾಗಿಲ್ಲ. ಇನ್ನು ಕಿರು ವಿಮಾನ ನಿಲ್ದಾಣ ನಿರ್ಮಾಣವಾಗಿ ಜಿಲ್ಲೆಯ ಜನ ವಿಮಾನದಲ್ಲಿ ಪ್ರಯಾಣ ಮಾಡುವುದು ಯಾವಾಗ’ ಎಂಬುದು ಜಿಲ್ಲೆಯ ಜನರ ಪ್ರಶ್ನೆ.

ಎನ್.ಆರ್.ಪುರದಲ್ಲಿ ಅಗ್ನಿಶಾಮಕ ಠಾಣೆ ನಿರ್ಮಾಣ ಮಾಡುವ ಪ್ರಸ್ತಾಪವನ್ನೂ 2023–24ನೇ ಸಾಲಿನ ಬಜೆಟ್ನಲ್ಲಿ ಪ್ರಸ್ತಾಪಿಸಲಾಗಿತ್ತು. ಈ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿ ಕಾಮಗಾರಿಯೂ ನಡೆಯುತ್ತಿದೆ.

ಪ್ರಸ್ತಾಪದಲ್ಲೇ ಉಳಿದ ಕಾಫಿ ಬ್ರ್ಯಾಂಡಿಂಗ್

ರಾಜ್ಯದ ಕಾಫಿಯನ್ನು ಮೌಲ್ಯವರ್ಧಿಸಿ ಬ್ರ್ಯಾಂಡ್ ಮಾಡುವುದಾಗಿ ರಾಜ್ಯ ಸರ್ಕಾರ ಮೊದಲ ಬಾರಿಗೆ 2023–24ನೇ ಸಾಲಿನ ಬಜೆಟ್ನಲ್ಲಿ ಪ್ರಸ್ತಾಪಿಸಿತ್ತು. ಅದು ಪ್ರಸ್ತಾಪದಲ್ಲೇ ಉಳಿದಿದ್ದು ಕಾರ್ಯರೂಪಕ್ಕೆ ಬಂದಿಲ್ಲ. ಅನನ್ಯವಾದ ರುಚಿ ಮತ್ತು ಕಂಪನ್ನು ಹೊಂದಿರುವ ಚಿಕ್ಕಮಗಳೂರು ಕೊಡಗು ಮತ್ತು ಬಾಬಾ ಬುಡನಗಿರಿಯ ಅರೇಬಿಕಾ ಕಾಫಿ ವೈವಿಧ್ಯವು ಜಿ.ಐ(ಜಿಯಾಗ್ರಫಿಕಲ್ ಇಂಡಿಕೇಷನ್) ಟ್ಯಾಗ್ ಹೊಂದಿವೆ. ರಾಜ್ಯದ ಕಾಫಿಯನ್ನು ಇನ್ನಷ್ಟು ಪ್ರಚಾರಪಡಿಸಿ ಜನಪ್ರಿಯಗೊಳಿಸಲು ಮತ್ತು ಕಾಫಿ ಎಕೊ ಟೂರಿಸಂ ಉತ್ತೇಜಿಸಲು ಕರ್ನಾಟಕದ ಕಾಫಿಗೆ ಬ್ರ್ಯಾಂಡಿಂಗ್ ಮಾಡಲಾಗುವುದು ಎಂದು ಹೇಳಿತ್ತು.

ಪಶ್ಚಿಮಘಟ್ಟದ ಸಾಲಿನ ಬೆಟ್ಟಗಳಲ್ಲಿ ಬೆಳೆಯುವ ಕಾಫಿಗೆ ತನ್ನದೇ ಆದ ಸ್ವಾದವಿದೆ. ಮರಗಳ ನೆರಳಿನಲ್ಲಿ ಮಲೆನಾಡಿನ ಹವಾಮಾನದಲ್ಲಿ ಬೆಳೆಯಲಾಗುತ್ತದೆ. ಯಂತ್ರಗಳ ಬಳಕೆ ಇಲ್ಲದೆ ಬಿಸಿಲಿನಲ್ಲೇ ಒಣಗಿಸಿ ಹದ ಮಾಡುವ ಪದ್ಧತಿಯನ್ನು ಬೆಳೆಗಾರರು ಇಂದಿಗೂ ಅನುಸರಿಸುತ್ತಿದ್ದಾರೆ.

ಈ ಎಲ್ಲಾ ಕಾರಣಗಳಿಂದ ಕರ್ನಾಟಕದ ಕಾಫಿಗೆ ಯುರೋಪಿಯನ್ ದೇಶಗಳಲ್ಲಿ ಬೇಡಿಕೆ ಇದೆ. ಈ ಕಾಫಿಯನ್ನು ಇನ್ನಷ್ಟು ಮೌಲ್ಯವರ್ಧಿಸಿ ಬ್ರ್ಯಾಂಡಿಂಗ್ ರೂಪ ನೀಡಿದರೆ ಬೇಡಿಕೆ ಹೆಚ್ಚಾಗುವುದರಲ್ಲಿ ಅನುಮಾನ ಇಲ್ಲ. ಬಾಬಾ ಬುಡನ್ಗಿರಿಯನ್ನು ಭಾರತದ ಕಾಫಿಯ ಜನ್ಮಸ್ಥಳ ಎಂದು ಕರೆಯಲಾಗುತ್ತದೆ. ಗಿರಿಗಳ ಸಾಲು ದಟ್ಟವಾದ ಕಾಡು ವನ್ಯಜೀವಿಗಳ ಆವಾಸ ಸ್ಥಾನದಲ್ಲಿ ಬೆಳೆಯುವ ಕಾಫಿಗೆ ಅನನ್ಯವಾದ ರುಚಿ ಇದೆ ಎಂಬುದನ್ನು ದೇಶ–ವಿದೇಶಗಳಲ್ಲಿ ಬ್ರ್ಯಾಂಡ್ ಮಾಡಿದರೆ ಬೆಳೆಗಾರರಿಗೆ ಅನುಕೂಲ ಆಗಲಿದೆ. ಉದ್ಯಮಿ ಸಿದ್ಧಾರ್ಥ ಅವರು ಕಾಫಿ ಕೆಫೆ ಆರಂಭಿಸಿದ ಬಳಿಕ ಕಾಫಿ ಬಳಕೆ ಹೆಚ್ಚಾಯಿತು.

ಈಗ ಸರ್ಕಾರವೇ ಬ್ರ್ಯಾಂಡ್ ರೂಪ ನೀಡಿದರೆ ಆಂತರಿಕ ಬಳಕೆಯೂ ಹೆಚ್ಚಾಗಲಿದೆ. ಈ ವಿಷಯವನ್ನು ಬಜೆಟ್ನಲ್ಲಿ ಪ್ರಸ್ತಾಪಿಸಿದ ಸರ್ಕಾರ ಸುಮ್ಮನಾಯಿತು ಎಂದು ಕಾಫಿ ಬೆಳೆಗಾರರ ಹಿತ ರಕ್ಷಣಾ ವೇದಿಕೆ ಪ್ರಧಾನ ಕಾರ್ಯದರ್ಶಿ ಗಿರೀಶ್ ಹೊಲದಗದ್ದೆ ಹೇಳಿದರು.

ಸ್ಪೈಸ್ ಪಾರ್ಕ್ ಸುದ್ದಿಯೇ ಇಲ್ಲ

2024–25ನೇ ಸಾಲಿನ ಬಜೆಟ್ನಲ್ಲಿ ಜಿಲ್ಲೆಗೆ ಕೆಲವು ಕೊಡುಗೆಗಳು ದೊರೆತಿದ್ದವು. ಎಲ್ಲವೂ ಪ್ರಸ್ತಾಪ ಹಂತದಲ್ಲೇ ಉಳಿದಿವೆ. ಬಹು ವರ್ಷಗಳ ಬೇಡಿಕೆಯಾಗಿದ್ದ ಸ್ಪೈಸ್ ಪಾರ್ಕ್(ಸಾಂಬಾರ ಪದಾರ್ಥಗಳ ಪಾರ್ಕ್) ಸ್ಥಾಪಿಸುವ ಬಗ್ಗೆ ಪ್ರಸ್ತಾಪವಾಯಿತು. ಜಿಲ್ಲೆಯಲ್ಲಿ 50 ಸಾವಿರ ಹೆಕ್ಟೇರ್ನಲ್ಲಿ ಕಾಳು ಮೆಣಸು ಬೆಳೆಯಲಾಗುತ್ತದೆ. ಶುಂಠಿ ಏಲಕ್ಕಿ ಲವಂಗ ಚಕ್ಕೆ ಬೆಳೆಯಲಾಗುತ್ತದೆ.

ಸ್ಪೈಸ್ ಪಾರ್ಕ್ ನಿರ್ಮಾಣವಾದರೆ ಸಾಂಬಾರ ಪದಾರ್ಥಗಳಿಗೆ ಅಂತರರಾಷ್ಟ್ರೀಯ ಮಟ್ಟದ ಮಾರುಕಟ್ಟೆ ಸೌಲಭ್ಯ ದೊರೆತಂತೆ ಆಗಲಿದೆ ಎಂದು ಜಿಲ್ಲೆಯ ಬೆಳೆಗಾರರು ಅಂದಾಜಿಸಿದ್ದರು. ಕೇರಳದ ಕೊಚ್ಚಿಯಲ್ಲಿರುವ ಸ್ಪೈಸ್ ಪಾರ್ಕ್ನಲ್ಲಿ ನಡೆಯುವ ವ್ಯಾಪಾರದ ಆಧಾರದಲ್ಲಿ ಇಲ್ಲಿನ ಸಾಂಬಾರ ಪದಾರ್ಥಗಳಿಗೆ ದರ ನಿಗದಿಯಾಗುತ್ತಿದೆ. ಚಿಕ್ಕಮಗಳೂರಿನಲ್ಲೇ ಈ ಸೌಲಭ್ಯ ದೊರೆತರೆ ರೈತರಿಗೆ ಅನುಕೂಲ ಆಗಲಿದೆ ಎಂಬುದು ಅವರ ಲೆಕ್ಕಾಚಾರ. ಆದರೆ ಸ್ಪೈಸ್ ಪಾರ್ಕ್ ನಿರ್ಮಾಣದ ಪ್ರಸ್ತಾಪ ಹೊಸದಲ್ಲ. ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಹೊಸಕೋಟೆಯ ಸರ್ವೆ ನಂಬರ್ 21ರಲ್ಲಿ ಜಾಗವನ್ನೂ ಜಿಲ್ಲಾಡಳಿತ ಗುರುತು ಮಾಡಿತ್ತು. ಸಾಂಬಾರು ಅಭಿವೃದ್ಧಿ ಮಂಡಳಿ ಮೂಲಕ ವಿಸ್ತೃತ ಯೋಜನಾ ವರದಿ(ಡಿಪಿಆರ್) ಕೂಡ ಸಿದ್ಧವಾಗಿತ್ತು ಎಂದು ಬೆಳೆಗಾರರು ಹೇಳುತ್ತಾರೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಸ್ಪೈಸ್ ಪಾರ್ಕ್ ನಿರ್ಮಾಣವಾಗಬೇಕಿದೆ. ರಾಜ್ಯ ಸರ್ಕಾರ ಗುರುತಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ. ಬಳಿಕ ಕೇಂದ್ರ ಸರ್ಕಾರ ಅನುಮೋದನೆ ಪಡೆದು ಯೋಜನೆ ಅನುಷ್ಠಾನವಾಗಬೇಕಿದೆ. ಪ್ರಯೋಗಾಲಯ ಕಾನ್ಫರೆನ್ಸ್ ಹಾಲ್ ಸೇರಿ ಎಲ್ಲಾ ಸೌಕರ್ಯ ಬೇಕಾಗಲಿದೆ. ಆದ್ದರಿಂದ ಕನಿಷ್ಠ 100 ಎಕರೆ ಜಾಗ ಬೇಕಾಗಲಿದೆ. ಬಜೆಟ್ನಲ್ಲಿ ಘೋಷಣೆಯಾದ ಬಳಿಕ ಈ ವಿಷಯದಲ್ಲಿ ಒಂದೇ ಹೆಜ್ಜೆಯೂ ಮುಂದಕ್ಕೆ ಹೋಗಿಲ್ಲ ಎಂದು ಬೆಳೆಗಾರ ಅರವಿಂದ್ ಬೂತನಕಾಡು ಹೇಳುತ್ತಾರೆ.

ಶೃಂಗೇರಿಯಲ್ಲಿ ಆಸ್ಪತ್ರೆಗೆ ಜಾಗದ ತೊಡಕು

ಶೃಂಗೇರಿಯಲ್ಲಿ 100 ಹಾಸಿಗೆಗಳ ಆಸ್ಪತ್ರೆ ನಿರ್ಮಾಣ ಮಾಡುವ ಪ್ರಸ್ತಾಪವನ್ನು 2024–25ನೇ ಸಾಲಿನ ಬಜೆಟ್ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ₹35 ಕೋಟಿ ಅನುದಾನವನ್ನೂ ನಿಗದಿ ಮಾಡಲಾಗಿದೆ. ಶೃಂಗೇರಿಯ ಶಿಡ್ಲೆ ಸಮೀಪ 4ಎಕರೆ 20 ಗುಂಟೆ ಜಾಗವನ್ನು ಆರೋಗ್ಯ ಇಲಾಖೆ ಗುರುತಿಸಿದೆ. ಅರಣ್ಯ ಇಲಾಖೆ ಜಾಗ ಆಗಿರುವುದರಿಂದ ಕೇಂದ್ರ ಪರಿಸರ ಇಲಾಖೆಯ ಒಪ್ಪಿಗೆ ಬೇಕಿದೆ. ಕಡೂರು ತಾಲ್ಲೂಕಿನಲ್ಲಿ ಬದಲಿ ಜಾಗ ನೀಡಿ ಅರಣ್ಯ ಜಾಗ ಪಡೆಯುವ ಪ್ರಕ್ರಿಯೆ ಇನ್ನೂ ಪೂರ್ಣಗೊಂಡಿಲ್ಲ.

1ಎಕರೆ 20 ಗುಂಟೆ ಜಾಗಕ್ಕಷ್ಟೇ ಯೋಜನೆ ಸಿದ್ಧಪಡಿಸಿ ಪ್ರಸ್ತಾವನೆ ಕಳುಹಿಸಿದ್ದರಿಂದ ಕೇಂದ್ರ ಪರಿಸರ ಇಲಾಖೆಯಲ್ಲಿ ಪ್ರಸ್ತಾವನೆ ತಿರಸ್ಕಾರವಾಗಿತ್ತು. ಈಗ 4 ಎಕರೆ 20 ಗುಂಟೆ ಜಾಗಕ್ಕೂ ಯೋಜನೆ ಸಿದ್ಧಪಡಿಸಿ ಮತ್ತೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ‘ಅರಣ್ಯ ಜಾಗ ಪಡೆಯುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ. ಈ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಕಾಮಗಾರಿ ಆರಂಭವಾಗಲಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್ಥಬಾಬು ತಿಳಿಸಿದರು.

ತಾರಾಲಯಕ್ಕೆ ವಿನ್ಯಾಸ ತಯಾರಿ

ಚಿಕ್ಕಮಗಳೂರಿನಲ್ಲಿ ವಿಜ್ಞಾನ ಕೇಂದ್ರ ಹಾಗೂ ತಾರಾಲಯ ಸ್ಥಾಪನೆಗೆ 2024–25ನೇ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಾಗಿತ್ತು. ತಾರಾಲಯ ನಿರ್ಮಾಣಕ್ಕೆ ಸಿದ್ಧತೆ ನಡೆದಿದ್ದು ಯೋಜನೆಗೆ ಅನುಮೋದನೆ ದೊರೆತಿದೆ. ವಿನ್ಯಾಸ ಸಿದ್ಧಪಡಿಸಲು ತಯಾರಿ ನಡೆಯುತ್ತಿದೆ. ಕೇಂದ್ರೀಯ ವಿದ್ಯಾಲಯದ ಪಕ್ಕದಲ್ಲಿ ಜಾಗ ಗುರುತಿಸಲಾಗಿದೆ. ಹೊರಾಂಗಣ ವಿಜ್ಞಾನ ಪಾರ್ಕ್ಗೆ ₹6.65 ಕೋಟಿ ಮತ್ತು ಗುಮ್ಮಟ ಮಾದರಿಯ ಡೋಮ್ ನಿರ್ಮಾಣಕ್ಕೆ ₹7.95 ಕೋಟಿ ಸೇರಿ ಒಟ್ಟು ₹14.60 ಕೋಟಿ ಅನುಮೋದನೆ ದೊರೆತಿದೆ. ಟೆಕ್ಸ್ಟೈಲ್ ಪಾರ್ಕ್ ನಿರ್ಮಿಸುವ ಪ್ರಸ್ತಾಪವನ್ನೂ ಬಜೆಟ್ನಲ್ಲಿ ಮಾಡಲಾಗಿತ್ತು. ಕಡೂರು ಮತ್ತು ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಪ್ರತ್ಯೇಕ ಎರಡು ಜವಳಿ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಡಳಿತ ಜಾಗ ಗುರುತಿಸಿದೆ. ಸರ್ಕಾರದಿಂದ ಅನುಮೋದನೆ ಕೂಡ ದೊರೆತಿದೆ.

ಕೇಬಲ್ ಕಾರ್ ಪ್ರಸ್ತಾಪವಿಲ್ಲ

ರಾಜ್ಯದ ಹತ್ತು ಪ್ರವಾಸಿ ತಾಣಗಳಲ್ಲಿ ರೋಪ್ವೇ ಮತ್ತು ಕೇಬಲ್ ಕಾರ್ ಅಳವಡಿಸುವ ಬಗ್ಗೆ ಉಲ್ಲೇಖಿಸಲಾಗಿತ್ತು. ಹತ್ತು ತಾಣಗಳಲ್ಲಿ ಚಿಕ್ಕಮಗಳೂರು ಜಿಲ್ಲೆಯೂ ಸೇರಿದ ಪರಿಸರಕ್ಕೆ ಹಾನಿಯಾಗದಂತೆ ಕೇಬಲ್ ಕಾರ್ ಯೋಜನೆ ಅನುಷ್ಠಾನ ಮಾಡುವ ಬಗ್ಗೆ ಜನಪ್ರತಿನಿಧಿಗಳೂ ಭರವಸೆ ನೀಡಿದ್ದರು. ಆದರೆ ವರ್ಷ ಕಳೆದರೂ ರೋಪ್ವೇ ಮತ್ತು ಕೇಬಲ್ ಕಾರ್ ಬಗ್ಗೆ ಜಿಲ್ಲೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಪ್ರವಾಸೋದ್ಯಮ ಇಲಾಖೆಗೆ ಪತ್ರ ವ್ಯವಹಾರಗಳೂ ನಡೆದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.