ಆಲ್ದೂರು: ಬ್ರಾಯ್ಲರ್ ಕೋಳಿ ಮಾಂಸದ ಬೆಲೆ ಕಳೆದ ಒಂದು ವಾರದಿಂದ ತೀವ್ರ ಏರಿಕೆಯಾಗಿದ್ದು, ಇದೇ ಸ್ಥಿತಿ ಮುಂದುವರಿದರೆ ದಾಖಲೆಯ ಮಟ್ಟ ತಲುಪುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಬೇಸಿಗೆಯ ತೀವ್ರ ತಾಪಮಾನ, ಚಳಿಗಾಲದಲ್ಲಿ ಕೋಳಿಗಳ ಬೆಳವಣಿಗೆಯ ಕುಂಠಿತ, ವಾತಾವರಣದ ಅಸಹಕಾರ, ಹಕ್ಕಿ ಜ್ವರ ಸೇರಿದಂತೆ ವಿವಿಧ ಕಾಯಿಲೆಗಳು ಹಾಗೂ ಕೋಳಿ ಆಹಾರದ (ಫೀಡ್) ಬೆಲೆ ಏರಿಕೆಯು ಉತ್ಪಾದನೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ.

ಇನ್ನೂ ಕೆಲವು ಪ್ರದೇಶಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿ ಉತ್ಪಾದನೆ ಆಗದಿರುವುದರಿಂದ ಕೋಳಿ ಮಾಂಸಕ್ಕೆ ಅಭಾವ ಉಂಟಾಗಿದ್ದು, ಬೇಡಿಕೆ ಹೆಚ್ಚಿರುವ ಪ್ರದೇಶಗಳಿಗೆ ಸಾಗಣೆ ಮಾಡುತ್ತಿರುವುದರಿಂದ ಬೆಲೆ ಏರಿಕೆಯಾಗಿದೆ.

ಫಾರಂ ಕೋಳಿ ಉತ್ಪಾದನೆ ಹಾಗೂ ಪೂರೈಕೆಯಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದ ಕಾರಣ ಅದರ ಬೆಲೆಯಲ್ಲಿ ಏರಿಕೆ ಕಂಡುಬಂದಿಲ್ಲ ಎಂದು ಡೀಲರ್ಗಳು ತಿಳಿಸಿದ್ದಾರೆ. ಬೆಲೆ ಏರಿಕೆಯ ವಿವರ ಹಿಂದೆ ಬ್ರಾಯ್ಲರ್ ಕೋಳಿ ಹೋಲ್ ಸೇಲ್ ಬೆಲೆ ಪ್ರತಿ ಕೆ.ಜಿಗೆ ₹150–160 ಇದ್ದಾಗ, ಮಾರುಕಟ್ಟೆಯಲ್ಲಿ ಚರ್ಮ ಸಹಿತ ಕೋಳಿ ಮಾಂಸವನ್ನು ₹200ಕ್ಕೆ, ಚರ್ಮ ರಹಿತವನ್ನು ₹220ಕ್ಕೆ ಮಾರಾಟ ಮಾಡಲಾಗುತ್ತಿತ್ತು.

ಪ್ರಸ್ತುತ ಹೋಲ್ ಸೇಲ್ ಬೆಲೆ ₹180–190ಕ್ಕೆ ಏರಿಕೆಯಾಗಿದ್ದು, ಚರ್ಮ ಸಹಿತ ಕೋಳಿ ಮಾಂಸವನ್ನು ₹260ಕ್ಕೆ ಹಾಗೂ ಚರ್ಮ ರಹಿತವನ್ನು ₹290ಕ್ಕೆ ಮಾರಾಟ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ವ್ಯಾಪಾರಿಗಳಿಗೆ ಸಂಕಷ್ಟ: ಬೆಲೆ ಏರಿಕೆಯಿಂದ ಗ್ರಾಹಕರು ಕೋಳಿ ಮಾಂಸ ಖರೀದಿಗೆ ಹಿಂದೇಟು ಹಾಕುತ್ತಿದ್ದು, ಮೀನು ಹಾಗೂ ಇತರೆ ಮಾಂಸಾಹಾರಿ ಆಹಾರಗಳ ಕಡೆ ಒಲವು ತೋರುತ್ತಿದ್ದಾರೆ. ಇದರಿಂದ ವ್ಯಾಪಾರಕ್ಕೆ ತೀವ್ರ ಹೊಡೆತ ಬಿದ್ದಿದೆ.

1 ಕೆ.ಜಿ ಕೋಳಿ ಮಾಂಸಕ್ಕೆ ಅಂಗಡಿ ವ್ಯಾಪಾರಿಗಳಿಗೆ ₹20 ರಿಂದ ₹30 ಮಾತ್ರ ಲಾಭ ಸಿಗುತ್ತದೆ. ಅದರಲ್ಲಿ ಅಂಗಡಿ ಬಾಡಿಗೆ, ಕಾರ್ಮಿಕರ ಸಂಬಳ, ಗ್ಯಾಸ್ ಮತ್ತು ಇತರೆ ಖರ್ಚುಗಳನ್ನು ಭರಿಸಬೇಕಾಗುತ್ತದೆ. ದಿನಕ್ಕೆ 200 ಕೋಳಿ ಮಾರಾಟವಾಗದಿದ್ದರೆ ಆದಾಯ ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

ಬೆಲೆ ಇಳಿಯುವವರೆಗೆ ಹಲವಾರು ಕೋಳಿ ಮಾಂಸ ಮಾರಾಟಗಾರರು ಅಂಗಡಿಗಳನ್ನು ಮುಚ್ಚಿ ಪರ್ಯಾಯ ಉದ್ಯೋಗಗಳತ್ತ ಮುಖ ಮಾಡುತ್ತಿದ್ದಾರೆ ಎಂದು ವ್ಯಾಪಾರಿಗಳಾದ ತೌಸೀಫ್ ಅಲಿ, ಪ್ರದೀಪ್ ಗೌಡ ಹಾಗೂ ಮನೋಜ್ ಆತಂಕ ವ್ಯಕ್ತಪಡಿಸಿದ್ದಾರೆ.

ಉತ್ಪಾದನೆ ಕಡಿತ: ಬೆಲೆ ಏರಿಕೆ

ಕಳೆದ ಒಂಬತ್ತು ತಿಂಗಳಿನಿಂದ ಕೋಳಿಗಳ ಅತಿಯಾದ ಉತ್ಪಾದನೆಯಿಂದ ಬೆಲೆ ಕುಸಿತ ಕಂಡು ಕೋಳಿ ಸಾಕಾಣಿಕೆ ಕಂಪನಿಗಳು ಭಾರಿ ನಷ್ಟ ಅನುಭವಿಸಿದ್ದವು. ಈ ಹಿನ್ನೆಲೆ ಕಂಪನಿಗಳು ಉತ್ಪಾದನೆಯನ್ನು ಕಡಿತಗೊಳಿಸಿದ್ದು ಇಂದಿನ ಬೆಲೆ ಏರಿಕೆಗೆ ಅದು ಪ್ರಮುಖ ಕಾರಣವಾಗಿದೆ. ಒಂದು ಅಥವಾ ಎರಡು ತಿಂಗಳೊಳಗೆ ಉತ್ಪಾದನೆ ಸಹಜ ಮಟ್ಟಕ್ಕೆ ಮರಳಿದರೆ ಕೋಳಿ ಮಾಂಸದ ಬೆಲೆ ಹಿಂದಿನ ಸರಾಸರಿ ಮಟ್ಟಕ್ಕೆ ಇಳಿಯುವ ಸಾಧ್ಯತೆ ಇದೆ ಎಂದು ಲೈಫ್ ಲೈನ್ ಫೀಡ್ಸ್ ಇಂಡಿಯಾ ಲಿಮಿಟೆಡ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಕೆ.ಕಿಶೋರ್ ಕುಮಾರ್ ಹೆಗಡೆ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.