ಶನಿವಾರ, 3 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ: ಬೆಟ್ಟದ ಮಲಹಾನಿಕರೇಶ್ವರ ರಥೋತ್ಸವ

Last Updated 21 ಫೆಬ್ರವರಿ 2023, 6:13 IST
ಅಕ್ಷರ ಗಾತ್ರ

ಶೃಂಗೇರಿ: ಬೆಟ್ಟದ ಮಲಹಾನಿಕರೇಶ್ವರ ರಥೋತ್ಸವವು ಸೋಮವಾರ ಬೆಳಿಗ್ಗೆ ಮತ್ತು ಸಂಜೆ ನಡೆಯಿತು. ಬೆಳಿಗ್ಗೆ ರಥವನ್ನು ಶಾರದಾ ಪೀಠದಿಂದ ಆರಂಭಿಸಿ ರಥಬೀದಿಯ ಮಧ್ಯದಲ್ಲಿ ನಿಲ್ಲಿಸಲಾಯಿತು. ಸಂಜೆ 6 ಗಂಟೆಗೆ ಅಲ್ಲಿಂದ ರಥವನ್ನು ಎಳೆದು ಉತ್ಸವ ನಡೆಸಲಾಯಿತು.

ಶಾರದಾ ಮಠದ ಉಭಯ ಗುರುಗಳಾದ ಭಾರತಿತೀರ್ಥ ಸ್ವಾಮೀಜಿ ಹಾಗೂ ವಿಧುಶೇಖರಭಾರತಿ ಸ್ವಾಮೀಜಿ ಅವರು ಶಾರದಾಂಬಾ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಉತ್ಸವ ಮೂರ್ತಿಯನ್ನು ರಥದಲ್ಲಿ ಇರಿಸಿದ ಬಳಿಕ ತಾಲ್ಲೂಕಿನ ಜನರು ಉತ್ಸವಕ್ಕೆ ಚಿತ್ತೈಸಿ ಎಂದು ಯತಿವರ್ಯರನ್ನು ಪ್ರಾರ್ಥಿಸಿದ ಬಳಿಕ ವಿಧುಶೇಖರಭಾರತಿ ಸ್ವಾಮೀಜಿ ಅವರು ರಥದಲ್ಲಿರುವ ಉತ್ಸವಮೂರ್ತಿಗೆ ಮಹಾಮಂಗಳಾರತಿ ಮಾಡಿ ರಥೋತ್ಸವಕ್ಕೆ ಚಾಲನೆ ನೀಡಿದರು.

ರಥೋತ್ಸವದಲ್ಲಿ ಶಾರದ ಮಠದ ಆಶ್ವಗಳು, ಆನೆಗಳು, ತಟ್ಟಿರಾಯಗಳು, ಛತ್ರಿ-ಚಾಮರಗಳೊಂದಿಗೆ ಉತ್ಸವ ಮುಖ್ಯಬೀದಿಯಲ್ಲಿ ಸಾಗಿ ಬಂದಿತು. ರಸ್ತೆಗಳ ಇಕ್ಕೆಲಗಳಲ್ಲಿ ಬಿಡಿಸಿದ ರಂಗವಲ್ಲಿ ಚಿತ್ತಾರ ಉತ್ಸವಕ್ಕೆ ಮೆರಗು ನೀಡಿದವು. ತಾಲ್ಲೂಕಿನ ಭಕ್ತರು ಹಾಗೂ ಶಾರದ ಮಠದ ಅಧಿಕಾರಿಗಳು ಉತ್ಸವದಲ್ಲಿ ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT