ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಯಿಂದ ಹೊರಗುಳಿದ ಮಕ್ಕಳು 1,034

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ವತಿಯಿಂದ ಮನೆಮನೆ ಸಮೀಕ್ಷೆ
Last Updated 11 ಜುಲೈ 2021, 3:19 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಗುರುತಿಸಲು ಗ್ರಾಮ ಪಂಚಾಯಿತಿಯಿಂದ ಮನೆಮನೆ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಈ ಮಕ್ಕಳು 1,034 ಇದ್ದು, ಚಿಕ್ಕಮಗಳೂರು ತಾಲ್ಲೂಕಿನಲ್ಲಿ ಪ್ರಮಾಣ ಜಾಸ್ತಿ ಇದೆ.

2020–21ನೇ ಸಾಲಿನ ಸಮೀಕ್ಷೆ ಮಾಡಲಾಗಿದೆ. ಗ್ರಾಮ ಪಂಚಾ ಯಿತಿ ಸಿಬ್ಬಂದಿ ಪ್ರತಿ ಮನೆಗೆ ತೆರಳಿ ವಿವರ ಸಂಗ್ರಹಿಸಿದ್ದಾರೆ. ಶಾಲೆಯಿಂದ ಹೊರಗುಳಿದಿರುವ 18 ವರ್ಷದೊಳ ಗಿನವರ ವಿವರ ಕಲೆ ಹಾಕಿದ್ದಾರೆ. ಚಿಕ್ಕಮಗಳೂರು ಬ್ಲಾಕ್‌ನಲ್ಲಿ ಪಿ.ಯು ಹಂತದಲ್ಲಿ ಬಿಟ್ಟಿರುವ 86 ಮಕ್ಕಳು ಸಹಿತ ಒಟ್ಟು 452 ಮಕ್ಕಳು ಇದ್ದಾರೆ.

ಬ್ಲಾಕ್‌ವಾರು ಅಂಕಿಅಂಶ (ಶಾಲೆ ಬಿಟ್ಟವರು ಮತ್ತು ದಾಖಲಾಗದವರು): ಚಿಕ್ಕಮಗಳೂರು – 452 (ಪಿಯು ಹಂತದಲ್ಲಿ ಬಿಟ್ಟವರು 86 ಮಕ್ಕಳು ಸಹಿತ), ತರೀಕೆರೆ– 197, ಕೊಪ್ಪ– 104, ಮೂಡಿಗೆರೆ– 86, ಬೀರೂರು– 63, ಕಡೂರು– 57, ನರಸಿಂಹರಾಜಪುರ– 56, ಶೃಂಗೇರಿ– 19 .

ಒಟ್ಟು 1034 ಮಕ್ಕಳ ಪೈಕಿ ಶಾಲೆ ಬಿಟ್ಟವರು 892, ಶಾಲೆಗೆ ದಾಖಲಾಗ ದವರು 142 ಮಕ್ಕಳು ಇದ್ದಾರೆ.

ಶಾಲೆ ಬಿಟ್ಟವರ ಪೈಕಿ 368, ಶಾಲೆಗೆ ದಾಖಲಾಗದವರ ಪೈಕಿ 92 ಒಟ್ಟು 461 ಮಕ್ಕಳನ್ನು ಮುಖ್ಯವಾಹಿನಿಗೆ ಕರೆತರಲಾಗಿದೆ. ಬಾಕಿ ಇರುವ 573 ಮಕ್ಕಳನ್ನು (ಶಾಲೆ ಬಿಟ್ಟವರು 524 ಮತ್ತು 49 ದಾಖಲಾಗದವರು) ಕರೆತರಬೇಕಿದ್ದು, ಈ ಪಟ್ಟಿಯಲ್ಲಿ ಪಿಯು ಹಂತದಲ್ಲಿ ತೊರೆದ 86 ಮಕ್ಕಳು ಇದ್ದಾರೆ.

‘ಪ್ರತಿ ಮನೆಗೆ ತೆರಳಿ ಸಮೀಕ್ಷೆ ಮಾಡಿದ್ದೇವೆ. ಮನೆ ಭೇಟಿ ಫೋಟೊ, ಮಕ್ಕಳ ಹೆಸರು, ಆಧಾರ್‌
ಸಂಖ್ಯೆ, ತಂದೆ, ತಾಯಿ ಹೆಸರು, ಊರು, ಶಾಲೆ ಬಿಟ್ಟಾಗ ಓದುತ್ತಿದ್ದ ತರಗತಿ, ಶಾಲೆಗೆ ದಾಖಲಾಗದಿರುವುದಕ್ಕೆ ಕಾರಣ ಮೊದಲಾದ ವಿವರಗಳನ್ನು
ಕಲೆ ಹಾಕಿದ್ದೇವೆ. ‘STUDENT SURVEY’ ಆ್ಯಪ್‌ನಲ್ಲಿ ಈ ವಿವರಗಳ್ನು ಅಪ್‌ಲೋಡ್‌ ಮಾಡಿದ್ದೇವೆ’ ಎಂದು ಚಿಕ್ಕಮಗಳೂರು ತಾಲ್ಲೂಕಿನ ಹಿರೇಕೊಳಲೆ ಗ್ರಾಮ ಪಂಚಾಯಿತಿ ಪಿಡಿಒ ಲಕ್ಷ್ಮಣ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋವಿಡ್‌ನ ಈ ಕಾಲಘಟ್ಟದಲ್ಲಿ ಶಿಕ್ಷಣದಿಂದ ಬಡ ಕುಟುಂಬಗಳ ಹಲವು ಮಕ್ಕಳು ಶಾಲೆ ಬಿಟ್ಟಿದ್ದಾರೆ. ಕೆಲವರು ದುಡಿಮೆಯಲ್ಲಿ ತೊಡಗಿದ್ದಾರೆ. ಮತ್ತೆ ಕೆಲವರು ಪೋಷಕರ ಜತೆ ಕೆಲಸಗಳಲ್ಲಿ (ಹಣ್ಣು, ತರಕಾರಿ ಮಾರಾಟ, ಗ್ಯಾರೇಜ್‌, ಕೃಷಿ ಚಟುವಟಿಕೆ...) ತೊಡಗಿಕೊಂಡಿದ್ದಾರೆ ಎಂದು ಸಮೀಕ್ಷೆಯಲ್ಲಿ ಪಾಲ್ಗೊಂಡ ಸಿಬ್ಬಂದಿ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT