ಗುರುವಾರ , ಜುಲೈ 29, 2021
21 °C
ಕಾಫಿನಾಡಿನಲ್ಲಿ ಸಕ್ರಿಯ ಪ್ರಕರಣಗಳು 91– ಒಟ್ಟು ಸಂಖ್ಯೆ 226ಕ್ಕೆ ಏರಿಕೆ

ಕೋವಿಡ್‌: 28 ಮಂದಿಗೆ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಶುಕ್ರವಾರ 28 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಐವರು ಗುಣಮುಖರಾಗಿ ಕೋವಿಡ್‌ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

ತಾಲ್ಲೂಕುವಾರು ಚಿಕ್ಕಮಗಳೂರು–12, ತರೀಕೆರೆ– 6 , ಕಡೂರು– 4, ಮೂಡಿಗೆರೆ ಮತ್ತು ಎನ್‌.ಆರ್‌.ಪುರ– ತಲಾ ಮೂವರಿಗೆ ದೃಢಪಟ್ಟಿದೆ.

ಚಿಕ್ಕಮಗಳೂರಿನ 40, 34, 52, 40, 36, 43, 34, 60, 25 ವರ್ಷದ ಪುರುಷರು, 32 ಮತ್ತು 30 ವರ್ಷದ ಮಹಿಳೆಯರು, 10 ವರ್ಷದ ಬಾಲಕಿಗೆ ಸೋಂಕು ದೃಢಪಟ್ಟಿದೆ. ತರೀಕೆರೆ ತಾಲ್ಲೂಕಿನ 32 ವರ್ಷದ ಪುರುಷ, 11 ವರ್ಷದ ಬಾಲಕ, 39 ವರ್ಷದ ಮಹಿಳೆ, 6 ವರ್ಷದ ಬಾಲಕಿ, 25 ವರ್ಷದ ಮಹಿಳೆ, 45 ವರ್ಷದ ಪುರುಷ, ಕಡೂರು ತಾಲ್ಲೂಕಿನ 26, 32, 29 ಮತ್ತು 36 ವರ್ಷದ ಪುರುಷರಿಗೆ ಕೋವಿಡ್‌ ಪತ್ತೆಯಾಗಿದೆ. ಮೂಡಿಗೆರೆ ತಾಲ್ಲೂಕಿನ 25 ವರ್ಷದ ಮಹಿಳೆ, 28 ವರ್ಷದ ಪುರುಷ, 33 ವರ್ಷದ ಪುರುಷ ಹಾಗೂ ಎನ್‌.ಆರ್‌.ಪುರ ತಾಲ್ಲೂಕಿನ 27 ವರ್ಷದ ಮಹಿಳೆ, 52 ವರ್ಷದ ಪುರುಷ, 28 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಎಲ್ಲರನ್ನೂ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 91 ಸಕ್ರಿಯ ಪ್ರಕರಣಗಳು ಇವೆ. ಈವರೆಗೆ ದೃಢಪಟ್ಟ ಒಟ್ಟು ಪ್ರಕರಣಗಳು ಸಂಖ್ಯೆ 226ಕ್ಕೆ ತಲುಪಿದೆ.

584 ಮಂದಿ ಮಾದರಿ ಸಂಗ್ರಹ: ಕೊರೊನಾ ವೈರಾಣು ಸೋಂಕು ಪರೀಕ್ಷೆ ನಿಟ್ಟಿನಲ್ಲಿ ಶುಕ್ರವಾರ 584 ಮಂದಿಯ ಗಂಟಲು ಮತ್ತು ಮೂಗಿನ ದ್ರವ ಮಾದರಿ ಸಂಗ್ರಹಿಸಲಾಗಿದೆ. 387 ಮಂದಿಯ ಮಾದರಿ ಪರೀಕ್ಷೆ ವರದಿ ಬಂದಿದ್ದು, ಸೋಂಕು ಪತ್ತೆಯಾಗಿಲ್ಲ. 2828 ಮಂದಿಯ ಮಾದರಿ ಪರೀಕ್ಷೆ ವರದಿ ಬರಬೇಕಿದೆ. 579 ಮಂದಿಯನ್ನು ಪ್ರತ್ಯೇಕ ನಿಗಾ ವಾರ್ಡ್‌ಗೆ ದಾಖಲಿಸಲಾಗಿದೆ ಎಂದು ಜಿಲ್ಲಾಸರ್ವೇಕ್ಷಣಾಧಿಕಾರಿ ಡಾ.ಎಚ್‌.ಕೆ.ಮಂಜುನಾಥ್‌ ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು