ಮಂಗಳವಾರ, ಜುಲೈ 27, 2021
21 °C

ಕುಕ್ಕೆ ದೇವಳದಿಂದ ಉಚಿತ ಆಂಬುಲೆನ್ಸ್ ಸೇವೆಗೆ ಸಹಾಯವಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಳದ ಆಡಳಿತ ಮಂಡಳಿಯ ನಿರ್ಣಯದಂತೆ ಸಾರ್ವಜನಿಕರ ಉಪಯೋಗಕ್ಕಾಗಿ ದೇವಳದಿಂದ ಉಚಿತ ಆಂಬುಲೆನ್ಸ್ ಸೇವೆ ನೀಡಲಾಗುತ್ತಿದೆ.

ಸುಳ್ಯ, ಕಡಬ, ಬೆಳ್ಳಾರೆ, ಕೊಲ್ಲಮೊಗ್ರು ಮತ್ತು ಸುಬ್ರಹ್ಮಣ್ಯ ಮುಂತಾದ ಸ್ಥಳಗಳಲ್ಲಿ ಕೋವಿಡ್-19ನ ಸಂತ್ರಸ್ತರ ಸಹಾಯಕ್ಕಾಗಿ ದಿನದ 24 ಗಂಟೆ ಆಂಬುಲೆನ್ಸ್‌ ಸೇವೆ ನೀಡಲಾಗುತ್ತಿದೆ. ಕೋವಿಡ್-19 ಸಂತ್ರಸ್ತರು ವಾರ್ ರೂಂ ಮೂಲಕ ಹೆಸರು ನೋಂದಾಯಿಸಿ ಆಯಾಯ ಸ್ಥಳಕ್ಕೆ ನಿಯೋಜಿಸಿದ ಆಂಬುಲೆನ್ಸ್ ಸೇವೆಯನ್ನು ಉಚಿತವಾಗಿ ಪಡೆದುಕೊಳ್ಳಬಹುದಾಗಿದೆ.

ಸುಳ್ಯ ವಲಯದ ಚಾಲಕರ ಮೊಬೈಲ್ ಸಂಖ್ಯೆ 9448857353, ಬೆಳ್ಳಾರೆ ವಲಯ 8073472724, ಕೊಲ್ಲಮೊಗ್ರು ವಲಯ 9483904542 ಕರೆ ಮಾಡಿ ಸೇವೆ ಪಡೆಯಬಹುದು. ಅಥವಾ ವಾರ್‌ರೂಂ ದೂರವಾಣಿ ಸಂಖ್ಯೆ 9449510286, ಸಹಾಯವಾಣಿ ಸಂಖ್ಯೆ 7204416167 ಕರೆ ಮಾಡಿ ಸಹಕಾರ ಪಡೆಯಬಹುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು