ಮಂಗಳವಾರ, ಡಿಸೆಂಬರ್ 1, 2020
21 °C

ದೇವೀರಮ್ಮ ಬೆಟ್ಟ; ಹೊರಗಿನವರಿಗೆ ನಿರ್ಬಂಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ಕೋವಿಡ್‌ ಬಿಕ್ಕಟ್ಟಿನಿಂದಾಗಿ ಈ ಬಾರಿ ದೀಪಾವಳಿ ದೀಪೋತ್ಸವಕ್ಕೆ ಬೆಟ್ಟಕ್ಕೆ ತೆರೆಳದಂತೆ ಹೊರಗಿನವರಿಗೆ ನಿರ್ಬಂಧ ವಿಧಿಸಲಾಗಿದೆ.

ತಾಲ್ಲೂಕಿನ ಬಿಂಡಿಗಾ ಮಲ್ಲೇನಹಳ್ಳಿಯ 100 ಗ್ರಾಮಸ್ಥರಿಗೆ ಮಾತ್ರ ಬೆಟ್ಟಕ್ಕೆ ತೆರಳಲು ಜಿಲ್ಲಾಡಳಿತ ಅನುಮತಿ ನೀಡಿದೆ. ಬೆಟ್ಟದಲ್ಲಿ ಅವರು ಶನಿವಾರ ಕೈಂಕರ್ಯಗಳನ್ನು ನೆರವೇರಿಸುವರು ಎಂದು ಶ್ರೀದೇವೀರಮ್ಮ ದೇಗುಲ ಅಭಿವೃದ್ಧಿ ಟ್ರಸ್ಟ್‌ನ ಸುನೀಲ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಟ್ಟದ ಸಂಪರ್ಕ ಮಾರ್ಗಗಗಳಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ನಾಲ್ಕು ಚೆಕ್‌ ಪೋಸ್ಟ್‌ ವ್ಯವಸ್ಥೆ ಮಾಡಿ, ನಿಗಾ ಇಟ್ಟಿದ್ದೇವೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಕ್ಷಯ್‌ ಎಂ.ಹಾಕೆ ತಿಳಿಸಿದರು.

ತಾಲ್ಲೂಕಿನ ಬಿಂಡಿಗಾ ಮಲ್ಲೇನಹಳ್ಳಿಯಲ್ಲಿ ಇದೇ 13ರಿಂದ 17ರವರೆಗೆ ದೇವೀರಮ್ಮ ಜಾತ್ರಾ ಮಹೋತ್ಸವ ಸರಳವಾಗಿ ಜರುಗಲಿದೆ ಎಂದು ಟ್ರಸ್ಟ್‌ನವರು ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.