ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕಲವ್ಯ, ಕ್ರೀಡಾ ರತ್ನ, ಕ್ರೀಡಾ ಪೋಷಕ ಪ್ರಶಸ್ತಿ: 69 ಸಾಧಕರು, 5 ಸಂಸ್ಥೆ ಆಯ್ಕೆ

Last Updated 1 ನವೆಂಬರ್ 2020, 9:02 IST
ಅಕ್ಷರ ಗಾತ್ರ

ಚಿಕ್ಕಮಗಳೂರು: 2017, 2018 ಮತ್ತು 2019 ನೇ ಸಾಲಿನ ಏಕಲವ್ಯ, ಜೀವಮಾನ ಸಾಧನೆ, ಕರ್ನಾಟಕ ಕ್ರೀಡಾ ರತ್ನ ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ ಆಯ್ಕೆಯಾದವರಪಟ್ಟಿ ಪ್ರಕಟಿಸಲಾಗಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಸಿ.ಟಿ.ರವಿ ಅವರು ಪ್ರಶಸ್ತಿ ಪಟ್ಟಿ ಪ್ರಕಟಿಸಿದರು. ಏಕಲವ್ಯ ಪ್ರಶಸ್ತಿಗೆ 31, ಜೀವಮಾನ ಸಾಧನೆ ಪುರಸ್ಕಾರಕ್ಕೆ– 6 , ಕರ್ನಾಟಕ ಕ್ರೀಡಾರತ್ನ ಪ್ರಶಸ್ತಿಗೆ 27 ಹಾಗೂ ಕ್ರೀಡಾ ಪೋಷಕ ಪ್ರಶಸ್ತಿಗೆ ಐವರು ಒಟ್ಟು 69 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ 2ರಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬೆಳಿಗ್ಗೆ 11ಗಂಟೆಗೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡುವರು ಎಂದರು.

ಏಕಲವ್ಯ ಪುರಸ್ಕಾರ– 2 ಲಕ್ಷ ನಗದು, ಕಂಚಿನ ಪ್ರತಿಮೆ, ಜೀವಮಾನ ಸಾಧನೆ ಪ್ರಶಸ್ತಿ– 1.5 ಲಕ್ಷ ನಗದು, ಫಲಕ, ಕ್ರೀಡಾ ರತ್ನ ಪ್ರಶಸ್ತಿ– ಒಂದು ಲಕ್ಷ ನಗದು, ಫಲಕ, ಕ್ರೀಡಾ ಪೋಷಕ ಪ್ರಶಸ್ತಿ– 5 ಲಕ್ಷ ನಗದು ಒಳಗೊಂಡಿದೆ ಎಂದು ತಿಳಿಸಿದರು.

ವಿವಿಧ ಪ್ರಶಸ್ತಿಗೆ ಆಯ್ಕೆಯಾಗಿರುವವರು:2017ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ 14 ಮಂದಿ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ರೀನಾಜಾರ್ಜ್.ಎಸ್ (ಅಥ್ಲಿಟಿಕ್‌), ಮಿಥುಲಾ ಯು.ಕೆ (ಬ್ಯಾಡ್ಮಿಂಟನ್‌), ಅವಿನಾಶ್ ಎಂ (ಈಜು), ಎಸ್‌.ವರ್ಷಾ (ಬಿಲಿಯರ್ಡ್ಸ್‌, ಸ್ನೂಕರ್‌), ಕೆ.ತೇಜಸ್‌ (ಶೂಟಿಂಗ್‌), ಶೇಖರ್ ವೀರಸ್ವಾಮಿ (ಟೆನ್ನಿಸ್‌– ಪ್ಯಾರಾ), ಎಂ.ದೀಪಾ (ರೋಯಿಂಗ್‌), ಬಿ.ಕೆ.ಅನಿಲ್ ಕುಮಾರ್ (ಬಾಸ್ಕೆಟ್‌ ಬಾಲ್‌), ಎನ್‌.ಉಷಾರಾಣಿ (ಕಬಡ್ಡಿ), ವಿ.ಖುಷಿ (ಟೇಬಲ್‌ ಟೆನ್ನಿಸ್‌), ಬಾಗಲಕೋಟೆ ಜಿಲ್ಲೆ ಬೆವಿನಮಟ್ಟಿಯ ಕುಮಾರ ಅರ್ಜುನ್ ಹಲ್ಕುರ್ಕಿ (ಕುಸ್ತಿ), ಟಕ್ಕಳಕಿಯ ರಾಜು ಅಡಿವೆಪ್ಪಾ ಭಾಟಿ (ಸೈಕ್ಲಿಂಗ್‌), ಕೊಡಗು ಜಿಲ್ಲೆ ಪೊನ್ನಂ ಪೇಟೆಯ ಎಂ.ಎನ್‌.ಪೊನ್ನಮ್ಮ (ಹಾಕಿ), ಬೆಳಗಾವಿ ಜಿಲ್ಲೆಯ ಇಂಡೋಲ್‌ನಗರದ ವಿನಾಯಕ ರೋಖಡೆ (ವಾಲಿಬಾಲ್‌) ಆಯ್ಕೆಯಾಗಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಎಂ.ಫೆಡ್ರಿಕ್ಸ್ (ಹಾಕಿ),ಡಾ.ಪಟೇಲ್ ಮೊಹಮದ್ ಇಲಿಯಾಸ್ (ವಾಲಿಬಾಲ್‌) ಆಯ್ಕೆಯಾಗಿದ್ದಾರೆ.

ಕ್ರೀಡಾ ರತ್ನ ಪ್ರಶಸ್ತಿಗೆ 10 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಎಂ. ರಂಜಿತ್‌ (ಥ್ರೋಬಾಲ್‌), ಮಣಿಕಂದನ್‌ (ಪ್ಯಾರಾ ಕ್ಲೈಬಿಂಗ್‌),ಮೈಸೂರು ಜಿಲ್ಲೆಯ ಕುರುಬೂರಿನ ಎ।ಂ.ವೀಣಾ (ಕೊ ಕ್ಕೊ), ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಕೆ.ಎಸ್‌.ಕೌಸಲ್ಯಾ (ಕಬಡ್ಡಿ), ದಕ್ಷಿಣ ಕನ್ನಡ ಜಿಲ್ಲೆ ಗಾಣದ ಕೊಟ್ಯಾಮನೆಯ ಜಿ. ಜಯಲಕ್ಷ್ಮಿ (ಬಾಲ್‌ ಬ್ಯಾಡ್ಮಿಂಟನ್‌), ಚಿಕ್ಕಮಗಳೂರು ಹೊಸಹಳ್ಳಿಯ ಎಚ್‌.ಎಸ್‌.ಅನುಶ್ರೀ(ಕುಸ್ತಿ), ಬಾಗಲಕೋಟೆ ಜಿಲ್ಲೆಯ ಬೀಮಪ್ಪ ಹಡಪದ (ಮಲ್ಲಕಂಬ), ಚಂದ್ರಶೇಖರ್‌ ಎಚ್‌.ಕಲ್ಲಹೊಲದ (ಗುಂಡುಎತ್ತುವುದು), ಹಾವೇರಿ ಜಿಲ್ಲೆಯ ಮಹೇಶ್‌ ಆರ್‌.ಎರೆಮನಿ (ಆಟ್ಯಾಪಾಟ್ಯಾ), ದಕ್ಷಣಿ ಕನ್ನಡ ಜಿಲ್ಲೆಯ ಗೋಪಾಲಕೃಷ್ಣ ಪ್ರಭು (ಕಂಬಳ), ಶ್ರೀನಿವಾಸಗೌಡ (ಕಂಬಳ) ಆಯ್ಕೆ ಮಾಡಲಾಗಿದೆ.

2018ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ 9 ಮಂದಿ ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಕೆ.ಎಲ್‌.ರಾಹುಲ್‌ (ಕ್ರಿಕೆಟ್‌), ಫೌವಾದ್ ಮಿರ್ಜಾ (ಈಕ್ವೆಸ್ಟ್ರಿಯನ್‌), ನಿಕ್ಕಿನ್ ತಿಮ್ಮಯ್ಯ (ಹಾಕಿ), ಶಕೀನಾ ಖಾತೂನ್ (ಪ್ಯಾರಾ ಪವರ್‌ಲಿಫ್ಟಿಂಗ್‌), ಹರಿ ನಟರಾಜ್ (ಈಜು), ಮಂಡ್ಯ ಜಿಲ್ಲೆಯ ಜಿ.ಕೆ. ವಿಜಯಕುಮಾರಿ (ಅಥ್ಲಿಟಿಕ್‌), ಎಚ್‌.ಎಂ.ಬಾಂಧವ್ಯ (ಬಾಸ್ಕೆಟ್‌ ಬಾಲ್‌), ಬಾಗಲಕೋಟೆ ಜಿಲ್ಲೆಯ ಮೇಘಾ ಗೂಗಾಡ್ (ಸೈಕ್ಲಿಂಗ್‌), ಬೆಳಗಾವಿ ಜಿಲ್ಲೆಯ ಗೀತಾ ದಾನಪ್ಪಗೊಳ್ (ಜುಡೋ) ಆಯ್ಕೆಯಾಗಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಸಿ.ಎ. ಕರುಂಬಯ್ಯ (ಹಾಕಿ), ಆರ್. ಮಂಜುನಾಥ (ಕಬಡ್ಡಿ) ಆಯ್ಕೆಯಾಗಿದ್ದಾರೆ.ಕ್ರೀಡಾ ರತ್ನ ಪ್ರಶಸ್ತಿಗೆ 7 ಸಾಧಕರನ್ನು ಆಯ್ಕೆ ಮಾಡಲಾಗಿದೆ. ಬೆಳಗಾವಿ ಜಿಲ್ಲೆಯ ಸಂಪತ್ ನಾಗಪ್ಪ ಯರಗಟ್ಟಿ (ಅಟ್ಯಾಪಾಟ್ಯಾ), ಯಮನಪ್ಪ ಎಂ.ಕಲ್ಲೋಳಿ (ಮಲ್ಲಕಂಬ), ದಕ್ಷಿಣ ಕನ್ನಡ ಜಿಲ್ಲೆಯ ಸುರೇಶ್ ಶೆಟ್ಟಿ (ಕಂಬಳ), ಕೊಡಗು ಜಿಲ್ಲೆಯ ಬಿ.ಡಿ. ಲಾವಣ್ಯ (ಬಾಲ್‌ ಬ್ಯಾಡ್ಮಿಂಟನ್‌), ಹಾಸನ ಜಿಲ್ಲೆಯ ಎಚ್‌.ಎನ್‌. ಶಿವಕುಮಾರ್ (ಕೊ ಕ್ಕೊ), ಬೆಂಗಳೂರಿನ ಐ. ಕಿರಣ್‌ಕುಮಾರ್ (ಟೆನ್ನಿಕಾಯ್ಟ್‌), ದಾವಣಗೆರೆ ಜಿಲ್ಲೆಯ ಮಲ್ಲಪ್ಪಗೌಡ ಪಾಟೀಲ್(ಕುಸ್ತಿ) ಆಯ್ಕೆಯಾಗಿದ್ದಾರೆ.

2019ನೇ ಸಾಲಿನ ಏಕಲವ್ಯ ಪ್ರಶಸ್ತಿಗೆ ಎಂಟು ಮಂದಿ ಆಯ್ಕೆ ಮಾಡಲಾಗಿದೆ.ಬೆಂಗಳೂರಿನ ಖುಷಿ ದಿನೇಶ್‌ (ಈಜು), ಮಯಾಂಕ್ ಅಗರ್‌ಗವಾಲ್ (ಕ್ರಿಕೆಟ್‌), ಪುನೀತ್ ನಂದಕುಮಾರ್ (ಪ್ಯಾರಾ ಈಜು), ಚಿಕ್ಕಮಗಳೂರು ಜಿಲ್ಲೆಯ ವೇದಾ ಕೃಷ್ಣಮೂರ್ತಿ(ಕ್ರಿಕೆಟ್‌), ಉಡುಪಿ ಜಿಲ್ಲೆಯ ಅಭಿನಯ ಶೆಟ್ಟಿ (ಅಥ್ಲಿಟಿಕ್‌), ದಕ್ಷಿಣ ಕನ್ನಡ ಜಿಲ್ಲೆಯ ಅಭಿಷೇಕ ಎನ್.ಶೆಟ್ಟಿ (ಅಥ್ಲಿಟಿಕ್ಸ್‌), ಬಾಗಲಕೋಟೆ ಜಿಲ್ಲೆಯ ವೆಂಕಪ್ಪ ಕೆಂಗಲಗುತ್ತಿ (ಸೈಕ್ಲಿಂಗ್), ಕೊಡಗು ಜಿಲ್ಲೆಯ ಪುಲಿಂದ ಲೋಕೇಶ್ ತಿಮ್ಮಣ್ಣ (ಹಾಕಿ) ಆಯ್ಕೆಯಾಗಿದ್ದಾರೆ.

ಜೀವಮಾನ ಸಾಧನೆ ಪ್ರಶಸ್ತಿಗೆ ಇಬ್ಬರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಶಾಂತಾ ರಂಗಸ್ವಾಮಿ, ಶಿವಮೊಗ್ಗ ಜಿಲ್ಲೆಯ ಸಂಜೀವ ಆರ್.ಕನಕ ಆಯ್ಕೆಯಾಗಿದ್ದಾರೆ.

ಕ್ರೀಡಾ ರತ್ನ ಪ್ರಶಸ್ತಿಗೆ 9 ಸಾಧಕರನ್ನು ಆಯ್ಕೆ ಮಾಡಲಾಗಿದೆ.ಧಾರವಾಡ ಜಿಲ್ಲೆಯ ಅನಿತಾ ಬಿಚಗಟ್ಟಿ (ಅಟ್ಯಾಪಟ್ಯಾ), ಹಾಸನ ಜಿಲ್ಲೆಯ ಸುದರ್ಶನ್ (ಕೊಕ್ಕೊ), ದಕ್ಷಿಣ ಕನ್ನಡ ಜಿಲ್ಲೆಯ ಎಸ್‌.ಕೆ.ಪಲ್ಲವಿ (ಬಾಲ್‌ ಬ್ಯಾಡ್ಮಿಂಟನ್‌), ಮೈಸೂರು ಜಿಲ್ಲೆಯ ಎಸ್‌.ರಕ್ಷಿತಾ (ಕಬಡ್ಡಿ), ಬಾಗಲಕೋಟೆ ಜಿಲ್ಲೆಯ ಅನುಪಮಾ ಎಚ್.ಕೆರಕಲಮಟ್ಟಿ (ಮಲ್ಲಕಂಬ), ದಕ್ಷಿಣ ಕನ್ನಡ ಜಿಲ್ಲೆಯ ಕೆ. ಪ್ರವೀಣ್ (ಕಂಬಳ),ಶಿವಮೊಗ್ಗ ಜಿಲ್ಲೆಯ ಎಚ್‌. ಮಂಜುನಾಥ್ (ಥ್ರೋಬಾಲ್‌), ಬಾಗಲಕೋಟೆ ಜಿಲ್ಲೆಯ ಸತೀಶ್ ಪಡತಾರೆ (ಕುಸ್ತಿ), ಬೆಂಗಳೂರಿನ ಅನಿಶಾ ಮಣೆಗಾರ್ (ಟೆನ್ನಿ ಕಾಯ್ಟ್‌) ಆಯ್ಕೆಯಾಗಿದ್ದಾರೆ.

ಕ್ರೀಡಾ ಪೋಷಕ ಪ್ರಶಸ್ತಿಗೆ ಐದು ಸಂಸ್ಥೆಗಳನ್ನು ಆಯ್ಕೆ ಮಾಡಲಾಗಿದೆ.

2018–19ನೇ ಸಾಲಿನ ಪ್ರಶಸ್ತಿಗೆ ಮಂಡ್ಯದ ಸ್ವರ್ಣ ಪುಟ್ಬಾಲ್‌ ಅಭಿವೃದ್ಧಿ ಸಂಸ್ಥೆ, ಹಳಿಯಾಳದ ವಿಆರ್ ದೇಶಪಾಂಡೆ ಮೆಮೊರಿಯಲ್‌ ಟ್ರಸ್ಟ್‌.

2019–20ನೇ ಸಾಲಿನ ಪ್ರಶಸ್ತಿಗೆ ಮಂಗಳೂರು ವಿಶ್ವವಿದ್ಯಾಲಯ

2020–21 ನೇ ಸಾಲಿನ ಪ್ರಶಸ್ತಿಗೆ ತುಮಕೂರಿನ ಸಿದ್ಧಗಂಗಾ ಎಜುಕೇಷನ್‌ ಟ್ರಸ್ಟ್‌, ಬೀದರ್‌ ಜಿಲ್ಲೆಯ ಮಾಣಿಕ್‌ಪ್ರಭು ಸ್ಪೋರ್ಟ್ಸ್‌ ಅಕಾಡೆಮಿ ಆಯ್ಕೆ ಮಾಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT