ಆಹಾರ ಹುಡುಕಿಕೊಂಡು ಬಂದಿದ್ದ ಆನೆ, ತೋಟದಲ್ಲಿ ಅಡಿಕೆ ಮರವೊಂದನ್ನು ಉರುಳಿಸಿದೆ. ಅದರ ಜತೆಗೆ ವಿದ್ಯುತ್ ತಂತಿ ನೆಲಕ್ಕೆ ಜಾರಿದೆ. ಅದು ಒಂಟಿ ಸಲಗಕ್ಕೆ ಸ್ಪರ್ಶಿಸಿ ಆನೆ ಸ್ಥಳದಲ್ಲೇ ಮೃತಪಟ್ಟಿದೆ.
ಆನೆಗೆ 50ರಿಂದ 60 ವರ್ಷ ವಯಸ್ಸಿರಬಹುದು. ಆಹಾರ ಹುಡುಕಿಕೊಂಡು ಬಂದಾಗ ಈ ಅವಘಡ ಸಂಭವಿಸಿದೆ ಎಂದು ಉಪಅರಣ್ಯ ಸಂರಕ್ಷಣಾಧಿಕಾರಿ ರಮೇಶ್‌ಬಾಬು ತಿಳಿಸಿದರು.