ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Womens Day: ಬಟ್ಟೆ ಬ್ಯಾಗ್ ಮೂಲಕ ಆರ್ಥಿಕ ಸ್ವಾವಲಂಬನೆ

Published 8 ಮಾರ್ಚ್ 2024, 7:27 IST
Last Updated 8 ಮಾರ್ಚ್ 2024, 7:27 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಇಲ್ಲಿನ ಶ್ರೀಜ್ವಾಲಾಮಾಲಿನಿ ಸ್ವಸಹಾಯ ಸಂಘದ ಸದಸ್ಯೆಯರು ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್ ಬಳಕೆ ತಗ್ಗಿಸಲು ಸಂಘಟಿತ ಪ್ರಯತ್ನ ನಡೆಸಿದ್ದು, ಇದರ ಭಾಗವಾಗಿ ಬಟ್ಟೆ ಬ್ಯಾಗ್‌ಗಳನ್ನು ತಯಾರಿಸುವ ಘಟಕ ಆರಂಭಿಸಿ, ಆ ಮೂಲಕ ಪರಿಸರ ಸ್ನೇಹಿ ಆರ್ಥಿಕ ಸ್ವಾವಲಂಬನೆ ಕಂಡುಕೊಂಡಿದ್ದಾರೆ.

ಸಂಘದಲ್ಲಿ 10 ಸದಸ್ಯರಿದ್ದರೂ ಪುಷ್ಪಾ, ವೀಣಾ, ಜ್ಯೋತಿ, ಮಮತಾ ಎಂಬ ನಾಲ್ವರು ಮಹಿಳೆಯರು ಉದ್ಯಮದಲ್ಲಿ  ಸಕ್ರಿಯರಾಗಿದ್ದಾರೆ. ಉಳಿದ ಸದಸ್ಯರು ಸಹಕಾರ ಅವರಿಗೆ ನೀಡಿದ್ದಾರೆ.  ಸಂಘದ ಸದಸ್ಯರೇ ನೇರವಾಗಿ ಬಟ್ಟೆ ಅಂಗಡಿ, ತರಕಾರಿ ಮಾರುಕಟ್ಟೆ, ದಿನಸಿ ಅಂಗಡಿ, ಹಣ್ಣಿನ ಅಂಗಡಿ ಮತ್ತು ಶುಭ ಸಮಾರಂಭ ನಡೆಯುವ ಸ್ಥಳಗಳಿಗೆ ಭೇಟಿ ನೀಡಿ, ಅಲ್ಲಿನ ಗ್ರಾಹಕರ ಬೇಡಿಕೆಗೆ ತಕ್ಕಂತೆ ವಿವಿಧ ಅಳತೆಯ ಡಬ್ಯೂ ಕಟ್, ಡಿ ಕಟ್, ಕ್ಯಾರಿ ಬ್ಯಾಗ್, ಬಾಕ್ಸ್ ಬ್ಯಾಗ್‌ಗಳನ್ನು ತಯಾರಿಸಿ ಪೂರೈಸುವ ಮೂಲಕ ಮಾರುಕಟ್ಟೆಯನ್ನೂ ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ,

ನರಸಿಂಹರಾಜಪುರದ ಸುಂಕದಕಟ್ಟೆಯಲ್ಲಿರುವ ಮಹಿಳೆಯರು ಸೇರಿಸಿಕೊಂಡು ಶ್ರೀ ಜ್ವಾಲಾಮಾಲಿನಿ ಸ್ವಸಹಾಯ ಸಂಘ ಆರಂಭಿಸಿದ್ದು 2015ರಲ್ಲಿ. ಶಹರಿ ರೋಜ್‌ಗಾರ್ ಯೋಜನೆಯಡಿ ಅಂದಿನ ಮುಖ್ಯಾಧಿಕಾರಿ ಕುರಿಯಾಕೋಸ್ ಅವರು ಸಂಘ ಸ್ಥಾಪನೆಗೆ ಮಾರ್ಗದರ್ಶನ ನೀಡಿದ್ದರು. 2021ರಲ್ಲಿ ಡೇನಲ್ಮ್ ಯೋಜನೆ ಜಾರಿಗೆ ಬಂದಾಗ ಪಟ್ಟಣ ಮಹಿಳಾ ಪ್ರಾದೇಶಿಕ ಒಕ್ಕೂಟ ಸ್ಥಾಪನೆಯಾಯಿತು. 2022ರಲ್ಲಿ ರಾಷ್ಟ್ರೀಯ ನಗರ ಜೀವನೋಪಾಯ ದೀನ್‌ದಯಾಳ್‌ ಅಂತ್ಯೋದಯ ಯೋಜನೆಯಡಿ ಜಿಲ್ಲಾ ಮಟ್ಟದ ಉತ್ತಮ ಸಾಧನೆ ಪ್ರಶಸ್ತಿ ಪಡೆದ ಜ್ವಾಲಾಮಾಲಿನಿ ಸ್ವಸಹಾಯ ಸಂಘದವರು, ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿ ಬಟ್ಟೆ ಬ್ಯಾಗ್ ತಯಾರಿಕಾ ಉದ್ಯಮಕ್ಕೆ ಮುಂದಾದರು. ಪಟ್ಟಣ ಪಂಚಾಯಿತಿಯ ಸಮುದಾಯ ಸಂಘಟನಾ ಅಧಿಕಾರಿ ಲಕ್ಷ್ಮೇಗೌಡ ಹಾಗೂ ಬ್ಯಾಂಕ್ ಆ್ಯಪ್ ಬರೋಡಾದ ವ್ಯವಸ್ಥಾಪಕರು ಇದನ್ನು ಪ್ರೋತ್ಸಾಹಿಸಿ, ಸಹಾಯಧನದ ರೂಪದಲ್ಲಿ ₹5ಲಕ್ಷ ಸಾಲ ಒದಗಿಸಿದರು. ದೆಹಲಿ ಮೂಲದ ಅಮನ್ ಇನ್ ಪ್ಯಾಂಕ್ ಕಂಪನಿಯ ಜತೆಗೆ ಸಂಪರ್ಕ ಸಾಧಿಸಿ ಬ್ಯಾಗ್ ತಯಾರಿಕೆಗೆ ಬೇಕಾಗುವ ಯಂತ್ರೋಪಕರಣ ಹಾಗೂ ಕಚ್ಚಾವಸ್ತುಗಳನ್ನು ತರಿಸಿಕೊಂಡು, 2023ರ ನವೆಂಬರ್‌ನಲ್ಲಿ ಉದ್ಯಮ ಆರಂಭಿಸಿದರು.

‘ಪ್ಲಾಸ್ಟಿಕ್‌ ಹಾವಳಿ ತಗ್ಗಿಸುವ ಉದ್ದೇಶದಿಂದ ಸಂಘದ ಸದಸ್ಯೆಯರು ಬಟ್ಟೆ ಬ್ಯಾಗ್‌ಗಳನ್ನು ತಯಾರಿಸಿ ಮಾರುಕಟ್ಟೆಗೆ ಪೂರೈಸಲು ಪ್ರಯತ್ನಿಸುತ್ತಿದ್ದರೂ, ಪ್ಲಾಸ್ಟಿಕ್ ಬಳಕೆಗೆ ಸ್ಥಳೀಯ ಆಡಳಿತ ಸಂಪೂರ್ಣ ಕಡಿವಾಣ ಹಾಕದ ಕಾರಣ ನಾವು ಮಾರುಕಟ್ಟೆ ಕಂಡುಕೊಳ್ಳಲು ಕಷ್ಟಪಡಬೇಕಾಗಿದೆ. ಪ್ಲಾಸ್ಟಿಕ್ ಬಳಕೆ ಸಂಪೂರ್ಣ ನಿಷೇಧವಾದರೆ ಉದ್ಯಮ ಅಭಿವೃದ್ಧಿ ಹೊಂದಲು ಸಾಧ್ಯ’ ಎನ್ನುತ್ತಾರೆ ಜ್ವಾಲಾಮಾಲಿನಿ ಸ್ವಸಹಾಯ ಸಂಘದ ಪುಷ್ಪಾ.

ಜ್ವಾಲಾಮಾಲಿನಿ ಸ್ವಹಾಯ ಸಂಘದ ಸದಸ್ಯರು ತಯಾರಿಸುತ್ತಿರುವ ಬಟ್ಟೆ ಬ್ಯಾಗ್‌ ಗುಣಮಟ್ಟದ್ದಾಗಿದ್ದು ಮಾರುಕಟ್ಟೆ ಲಭಿಸಿದರೆ ಉದ್ಯಮ ಯಶಸ್ವಿಯಾಗುತ್ತದೆ
- ಲಕ್ಷ್ಮಣೇಗೌಡ, ಪಟ್ಟಣ ಪಂಚಾಯಿತಿ ಸಮುದಾಯ ಸಂಘಟನಾಧಿಕಾರಿ

 ಸಂಘದ ಬಟ್ಟೆ ಬ್ಯಾಗ್‌ ಘಟಕಕ್ಕೆ ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ನಯನಾ, ಪಟ್ಟಣ ಪಂಚಾಯಿತಿ ಅಧಿಕಾರಿ ಆರ್.ವಿ.ಮಂಜುನಾಥ್, ಎನ್‌ಆರ್‌ಎಲ್‌ಎಂ ಅಧಿಕಾರಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ಥಳೀಯವಾಗಿ ಹಲವು ಅಂಗಡಿಯವರು ಬ್ಯಾಗ್‌ಗಳನ್ನು ಖರೀದಿಸುವ ಮೂಲಕ ಮಹಿಳೆಯರ ಕಾರ್ಯಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಬ್ಯಾಗ್ ಬೇಕಾದವರು ಹೆಚ್ಚಿನ ಮಾಹಿತಿಗೆ   9945421973, 8792422770,7483390853  ಸಂಪರ್ಕಿಸಬಹುದು.

ನರಸಿಂಹರಾಜಪುರದ ಸುಂಕದಕಟ್ಟೆಯಲ್ಲಿ ಜ್ವಾಲಾಮಾಲಿನಿ ನಾನ್ ವೋವನ್ಸ್ ಬ್ಯಾಗ್ ತಯಾರಿಸುತ್ತಿರುವ ಮಹಿಳಾ ಸಂಘ ಜಿಲ್ಲಾಧಿಕಾರಿಯವರಿಂದ ಜಿಲ್ಲಾ ಮಟ್ಟದ ಉತ್ತಮ ಸಾಧನೆ ಪ್ರಶಸ್ತಿ ಪಡೆಯುತ್ತಿರುವುದು
ನರಸಿಂಹರಾಜಪುರದ ಸುಂಕದಕಟ್ಟೆಯಲ್ಲಿ ಜ್ವಾಲಾಮಾಲಿನಿ ನಾನ್ ವೋವನ್ಸ್ ಬ್ಯಾಗ್ ತಯಾರಿಸುತ್ತಿರುವ ಮಹಿಳಾ ಸಂಘ ಜಿಲ್ಲಾಧಿಕಾರಿಯವರಿಂದ ಜಿಲ್ಲಾ ಮಟ್ಟದ ಉತ್ತಮ ಸಾಧನೆ ಪ್ರಶಸ್ತಿ ಪಡೆಯುತ್ತಿರುವುದು
ನರಸಿಂಹರಾಜಪುರದ ಜ್ವಾಲಾಮಾಲಿನಿ ಸ್ವಸಹಾಯ ಸಂಘದವರು ತಯಾರಿಸುತ್ತಿರುವ ನಾನ್ ವೋವನ್ಸ್ ಬ್ಯಾಗ್ ಘಟಕಕ್ಕೆ ಭೇಟಿ ನೀಡಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್
ನರಸಿಂಹರಾಜಪುರದ ಜ್ವಾಲಾಮಾಲಿನಿ ಸ್ವಸಹಾಯ ಸಂಘದವರು ತಯಾರಿಸುತ್ತಿರುವ ನಾನ್ ವೋವನ್ಸ್ ಬ್ಯಾಗ್ ಘಟಕಕ್ಕೆ ಭೇಟಿ ನೀಡಿದ್ದ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್
ನರಸಿಂಹರಾಜಪುರದ ಸುಂಕದಕಟ್ಟೆಯಲ್ಲಿ ಜ್ವಾಲಾಮಾಲಿನಿ ಸ್ವಸಹಾಯ ಸಂಘದವರು ತಯಾರಿಸುತ್ತಿರುವು ವಿವಿಧ ಬ್ಯಾಗ್ ಗಳು
ನರಸಿಂಹರಾಜಪುರದ ಸುಂಕದಕಟ್ಟೆಯಲ್ಲಿ ಜ್ವಾಲಾಮಾಲಿನಿ ಸ್ವಸಹಾಯ ಸಂಘದವರು ತಯಾರಿಸುತ್ತಿರುವು ವಿವಿಧ ಬ್ಯಾಗ್ ಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT