ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಶೃಂಗೇರಿಯಲ್ಲಿ ವಿಜೃಂಭಣೆಯ ಗೌರಿ-ಗಣೇಶ ಹಬ್ಬ

Published : 8 ಸೆಪ್ಟೆಂಬರ್ 2024, 13:49 IST
Last Updated : 8 ಸೆಪ್ಟೆಂಬರ್ 2024, 13:49 IST
ಫಾಲೋ ಮಾಡಿ
Comments

ಶೃಂಗೇರಿ: ತಾಲ್ಲೂಕಿನಲ್ಲಿ ಶನಿವಾರ ಗಣಪತಿ ಹಬ್ಬದ ಪ್ರಯುಕ್ತ ಮನೆಗಳಲ್ಲಿ ಮತ್ತು ಸಾರ್ವಜನಿಕ ಪ್ರದೇಶಗಳಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪಿಸಿ, ನೈವೇದ್ಯ ಅರ್ಪಿಸಿ ಪೂಜಿಸಿದರು.

ತಾಲ್ಲೂಕಿನ ನಲ್ಲೂರು, ಬೇಗಾರು, ಕಾಂಚೀನಗರ, ವಿದ್ಯಾರಣ್ಯಪುರ, ನೆರಲಕೂಡಿಗೆ, ಆನೆಗುಂದ, ತೆಕ್ಕೂರು, ಬೆಟ್ಟಗೆರೆ, ಶಿಡ್ಲೆ, ಮಳೂರು, ಗಂಡಘಟ್ಟ, ಅಡ್ಡಗದ್ದೆ, ಕೆಳಕೊಪ್ಪ, ತೊರೆಹಡ್ಲು, ಮೆಣಸೆ, ಕಿಗ್ಗಾ, ಕೋರನಕೂಡಿಗೆ, ವೈಕುಂಠಪುರ, ಹೆಬ್ಬಾರಗದ್ದೆ, ಪಟ್ಟಣದ ಭಾರತಿ ಬೀದಿಯ ಗಣಪತಿ ದೇವಾಲಯ, ವಿ.ಆರ್.ಗೌರೀಶಂಕರ್ ಸಭಾಂಗಣದಲ್ಲಿ ಪ್ರತಿಷ್ಠಾಪಿಸಿದ ಸಾರ್ವಜನಿಕ ಗಣಪತಿ, ಶಾಲಾ-ಕಾಲೇಜುಗಳಲ್ಲಿ ಸ್ಥಾಪಿಸಲಾದ ವಿನಾಯಕನಿಗೆ ವಿಶೇಷ ಪೂಜೆ, ಗಣಹೋಮ ನಡೆಸಲಾಯಿತು.

ಗಣೇಶನಿಗೆ ನೈವೇದ್ಯ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಶೃಂಗೇರಿ ಶಾರದ ಮಠದ ಪ್ರವಚನ ಮಂದಿರದಲ್ಲಿ ಗಣಪತಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಶಕ್ತಿಗಣಪತಿ, ಹೊರ ಪ್ರಾಂಗಣದಲ್ಲಿರುವ ತೋರಣಗಣಪತಿಯ ಸನ್ನಿಧಿಯಲ್ಲಿ, ಮಲಹಾನಿಕರೇಶ್ವರ ದೇವಾಲಯದ ಸ್ತಂಭಗಣಪತಿ, ವಿದ್ಯಾಶಂಕರ ದೇವಾಲಯದ ವಿದ್ಯಾಗಣಪತಿ, ದೇವಾಲಯದ ಹೊರಗೆ ಇರುವ ಕಡಲೆ ಗಣಪತಿಗೆ ಪೂಜೆ ಸಲ್ಲಿಸಲಾಯಿತು.

ನರಸಿಂಹವನದ ಗುರುನಿವಾಸದಲ್ಲಿ ಚಂದ್ರಮೌಳೇಶ್ವರ ಸ್ವಾಮಿಯ ಬಲಭಾಗದಲ್ಲಿ ಪ್ರತಿಷ್ಠಾಪಿಸಲಾದ ಗಣಪತಿಗೆ ವಿಶೇಷ ಪೂಜೆಯನ್ನು ಉಭಯ ಸ್ವಾಮೀಜಿಗಳಾದ ಭಾರತೀತೀರ್ಥ ಸ್ವಾಮೀಜಿ, ವಿಧುಶೇಖರಭಾರತಿ ಸ್ವಾಮೀಜಿ ಸಲ್ಲಿಸಿ, ವರಸಿದ್ಧಿ ವಿನಾಯಕ ವ್ರತ ನೆರವೇರಿಸಿದರು. ಅಲಂಕೃತವಾದ ಗಣಪತಿಗೆ ಗರಿಕೆಯನ್ನು ಏರಿಸಿ ಪೂಜೆ ಸಲ್ಲಿಸಲಾಯಿತು.

ಶೃಂಗೇರಿ ಪಟ್ಟಣದ ಗೌರೀಶಂಕರ್ ಸಭಾಂಗಣದಲ್ಲಿ 64ನೇ ವರ್ಷದ ಮಹಾಗಣಪತಿಯನ್ನು ಶನಿವಾರ ಬೆಳಿಗ್ಗೆ ಅರ್ಚಕರಾದ ನಾಗರಾಜ್ ಭಟ್‍ ಅವರ ನೇತೃತ್ವದಲ್ಲಿ ಪ್ರತಿಷ್ಠಾಪಿಸಿದರು. ಸಂಜೆ ಶಾರದಾ ಮಠದ ಹರೀಶ್ ಭಟ್ ಸಂಗಡಿಗರಿಂದ ಭಕ್ತಿ ಸಿಂಚನ ಕಾರ್ಯಕ್ರಮ ನಡೆಯಿತು.

ವಿಧುಶೇಖರಭಾರತಿ ಸ್ವಾಮೀಜಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು
ವಿಧುಶೇಖರಭಾರತಿ ಸ್ವಾಮೀಜಿ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT