ಮಂಗಳವಾರ, ಜನವರಿ 26, 2021
16 °C

ಚಿಕ್ಕಮಗಳೂರು ಹಾಪ್‌ಕಾಮ್ಸ್‌; ಕುಮಾರಸ್ವಾಮಿ ಅಧ್ಯಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ಹಾಪ್‌ಕಾಮ್ಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕೆ.ಎಚ್.ಕುಮಾರಸ್ವಾಮಿ, ಉಪಾಧ್ಯಕ್ಷರಾಗಿ ಎನ್.ಪಿ.ರವಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತೋಟಗಾರಿಕೆ ಇಲಾಖೆ ಕಚೇರಿ ಸಭಾಂಗಣದಲ್ಲಿ ಈಚೆಗೆ ಚುನಾವಣೆ ನಡೆದಿತ್ತು. ಹಾಮ್‌ಕಾಮ್ಸ್‌ ಜಿಲ್ಲಾ ಘಟಕದ ನಿರ್ದೇಶಕರು ಅವಿರೋಧ ವಾಗಿ ಆಯ್ಕೆ ಮಾಡಿದರು. ಚುನಾವ ಣಾಧಿಕಾರಿಯಾಗಿ ಪೃಥ್ವಿಜಿತ್ ಕಾರ್ಯ ನಿರ್ವಹಿಸಿದರು.

ನೂತನ ಅಧ್ಯಕ್ಷ ಕೆ.ಎಚ್ ಕುಮಾರಸ್ವಾಮಿ ಮಾತನಾಡಿ, ‘ಹಾಪ್‌ ಕಾಮ್ಸ್‌ಗಳನ್ನು ಜನ ಸ್ನೇಹಿಯಾಗಿಸಲು ಶ್ರಮಿಸಲಾಗುವುದು’ ಎಂದರು.

ಉಪಾಧ್ಯಕ್ಷ ಎನ್.ಕೆ ರವಿ, ನಿರ್ದೇಶಕರಾದ ಎ.ಎನ್ ಮಹೇಶ್, ರಾಮಚಂದ್ರಪ್ಪ, ಡಿ.ಬಿ.ಪ್ರಕಾಶ್, ಬಿ.ನಾಗಭೂಷಣ್, ಕೆ.ಸಿ.ನಾರಾಯಣ್, ಶಶಿಕಲಾ, ಮೋಹನ್‌ಕುಮಾರಿ, ಮಲ್ಲೇಶಯ್ಯ, ಜಯಮ್ಮ, ರಾಮಚಂದ್ರಪ್ಪ ಎಸ್.ಬಿ. ಆನಂದ, ಸಹಾಯಕ ಚುನಾವ ಣಾಧಿಕಾರಿ ಎಂ.ಡಿ ಲೋಹಿತ್ ಇದ್ದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.