ಮುತ್ತಿನಕೊಪ್ಪ (ನರಸಿಂಹರಾಜಪುರ): ‘ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವನ್ನು ಓದಿ ಅರ್ಥೈಸಿಕೊಂಡು ಅದರಂತೆ ನಡೆದರೆ ಜೀವನದಲ್ಲಿ ಬೆಳಕು ಕಾಣಲು ಸಾಧ್ಯವಾಗುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಸಂವಿಧಾನವನ್ನು ಓದಬೇಕು’ ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದರು.

ತಾಲ್ಲೂಕಿನ ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ ಸಂವಿಧಾನ ದಿನಾಚರಣೆ ಅಂಗವಾಗಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಅನಾವರಣ, ಸಂವಿಧಾನ ಕುರಿತ ಮಾಹಿತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ತುಂಬಾ ಜನ ಸಂವಿಧಾನವನ್ನು ಸರಿಯಾಗಿ ಓದಿಲ್ಲ, ಅರ್ಥ ಮಾಡಿಕೊಂಡಿಲ್ಲ. ಅದರಂತೆ ನಡೆದುಕೊಳ್ಳುತ್ತಿಲ್ಲ. ಅಂಬೇಡ್ಕರ್ ಪ್ರತಿಮೆ ಮಾಡಿ ನಮಿಸಿದರೆ ಸಾಲದು, ಅವರ ಅರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.

ಅಂಬೇಡ್ಕರ್ ಅವರು ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜಕೀಯ ತಜ್ಞ, ಉತ್ತಮ ಆಡಳಿತಗಾರ, ನ್ಯಾಯಶಾಸ್ತ್ರ ತಜ್ಞ, ಸಂವಿಧಾನದ ರಚನೆಕಾರ, ಮಾನವಹಕ್ಕುಗಳ ಪ್ರತಿಪಾದಕರಾಗಿ ಮಹಾನ್ ಕೊಡುಗೆ ನೀಡಿದ್ದಾರೆ. ದೇಶ ಮಾತ್ರವಲ್ಲದೆ ಜಗತ್ತೇ ಅವರಿಗೆ ಗೌರವ ಸಲ್ಲಿಸುತ್ತದೆ. ಅವರ ಜನ್ಮದಿನ ಏಪ್ರಿಲ್ 14 ಅನ್ನು ವಿಶ್ವಸಂಸ್ಥೆ ವಿಶ್ವ ಜ್ಞಾನ ದಿನ ಎಂದು ಘೋಷಿಸಿದೆ ಎಂದರು.

ದೇಶದ ಗಡಿ ಗುರುತಿಸಿದ್ದು, ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನ ಮಾಡಿದ್ದು, ಪಾಳೇಗಾರ ಪದ್ದತಿ ರದ್ದುಪಡಿಸಿ ಪ್ರಜಾಪ್ರಭುತ್ವ, ಸಂಸತ್ತು, ವಿಧಾನ ಸಭೆ, ಕಾರ್ಯಾಂಗ, ನ್ಯಾಯಾಂಗ ರಚಿಸಿದ್ದು ಸಂವಿಧಾನ ಜಾರಿಗೆ ಬಂದ ನಂತರ. ಮಹಿಳೆಯರು, ದಲಿತರು, ಅಲ್ಪಸಂಖ್ಯಾತರಿಗೆ ಗೌರವ ಸಿಗಲು ಸಂವಿಧಾನ ಕಾರಣ ಎಂದರು.

ಶಿವಮೊಗ್ಗ ಭದ್ರಾ ಕಾಡ ನಿಗಮದ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್ ಮಾತನಾಡಿ, ಮುತ್ತಿನಕೊಪ್ಪ ಗ್ರಾಮ ಪಂಚಾಯಿತಿ ಶೃಂಗೇರಿಯ ಹೆಬ್ಬಾಗಿಲಾಗಿದ್ದು, ಎಲ್ಲರ ಸಹಕಾರದಿಂದ ಇಂದು ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿರುವುದು ಅವಿಸ್ಮರಣೀಯ ದಿನವಾಗಿದೆ. ಅಂಬೇಡ್ಕರ್ ಅವರ ವಿಚಾರಧಾರೆಯನ್ನು ಗಟ್ಟಿಯಾಗಿ ಪ್ರತಿಪಾದಿಸಬೇಕು. ಅಂಬೇಡ್ಕರ್ ಪ್ರತಿಮೆ ಇರುವ ಸ್ಥಳದ ಆವರಣದಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾವುಳ್ಳ ಗ್ರಂಥಾಲಯ ಸ್ಥಾಪಿಸಲಾಗುವುದು ಎಂದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಟಿ.ಡಿ. ರಾಜೇಗೌಡ ಮಾತನಾಡಿ, ಸಂವಿಧಾನ ಹಕ್ಕು, ಕರ್ತವ್ಯದ ಪುಸ್ತಕವಲ್ಲ. ಅಖಂಡ ಭಾರತವನ್ನು ಒಗ್ಗೂಡಿಸುವ ಮಾನವ ಗ್ರಂಥವಾಗಿದೆ. ಅಂಬೇಡ್ಕರ್ ರಚಿಸಿದ ಸಂವಿಧಾನ ಸರ್ವಕಾಲಕ್ಕೂ ಅನ್ವಯವಾಗುತ್ತದೆ ಎಂದರು.

ಜನಸಂಗ್ರಾಮ ವೇದಿಕೆಯ ಕೆ.ಎಲ್. ಅಶೋಕ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ.ಎಸ್. ಸುಬ್ರಹ್ಮಣ್ಯ, ವಕೀಲ ಕೆ.ಪಿ. ಶ್ರೀಪಾಲ್ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಮ್ಮ, ಉಪಾಧ್ಯಕ್ಷ ಎನ್.ಎಸ್. ನರೇಂದ್ರ, ತಹಶೀಲ್ದಾರ್ ನೂರುಲ್ ಹುದಾ, ಇಒ ಎಚ್.ಡಿ. ನವೀನ್ ಕುಮಾರ್, ಬಿಇಒ ಶಬಾನಾ ಅಂಜುಮ್, ಕೃಷಿಕ ಸಮಾಜದ ಅಧ್ಯಕ್ಷ ನಾರಾಯಣಸ್ವಾಮಿ, ಗ್ರಾಮ ಪಂಚಾಯಿತಿ ಸದಸ್ಯರು, ರಾಜಕುಮಾರ್, ಶ್ರೀನಿವಾಸ್, ಪ್ರೇಮಾ ಶ್ರೀನಿವಾಸ್ ತಂಡ, ತಿಮ್ಮೇಶ್ ಭಾಗವಹಿಸಿದ್ದರು. ಸಂವಿಧಾನ ದಿನಾಚರಣೆ ಅಂಗವಾಗಿ ನಡೆದ ಸ್ಪರ್ಧೆಯ ವಿಜೇತರನ್ನು ಸನ್ಮಾನಿಸಲಾಯಿತು. ಮುತ್ತಿನಕೊಪ್ಪ ಗ್ರಾಮದಲ್ಲಿ ಜಾಥಾ ನಡೆಸಲಾಯಿತು.

‘ಸಂವಿಧಾನ ಅಪ್ರಸ್ತುತ ಎನ್ನುವವರು ಅದನ್ನು ಓದಿಲ್ಲ’

ಪ್ರಸ್ತುತ ಕೆಲವರು ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನ ಅಪ್ರಸ್ತುತ ಎನ್ನುತ್ತಿದ್ದಾರೆ. ಹೀಗೆ ಹೇಳುವವರು ಸರಿಯಾಗಿ ಸಂವಿಧಾನ ಓದಿಲ್ಲ. ಸಂವಿಧಾನದಲ್ಲಿ ಸಹಿಷ್ಣುತೆಯಿದೆ. ಆದರೆ ಪ್ರಸ್ತುತ ದಿನಗಳಲ್ಲಿ ಅಸಹಿಷ್ಟುತೆ ಹೆಚ್ಚುತ್ತಿದೆ. ದೇಶದಲ್ಲಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಬೌದ್ಧ ಸಿಖ್ಖರು ಒಟ್ಟಾಗಿ ಬಾಳಿದ್ದೇವೆ. ದೇಶವನ್ನು ಒಟ್ಟಾಗಿ ಕಟ್ಟಿದ್ದೇವೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಸ್ವಾತಂತ್ರ್ಯ ಗಳಿಸಿದ್ದೇವೆ. ಭಾವೈಕ್ಯತೆ ಭಾತೃತ್ವ ಸಹೋದರತ್ವ ಸಮಾನತೆಯಿಂದ ಬದುಕಬೇಕೆಂಬುದು ಅಂಬೇಡ್ಕರ್ ಅವರ ಆಶಯ. ಜಾತಿ ಧರ್ಮ ದೇವರ ವಿಚಾರ ತೆಗೆದು ಏಕತೆ ಒಡೆಯುವ ಅಪನಂಬಿಕೆ ಭಯ ಹುಟ್ಟುಹಾಕುತ್ತಿರುವವರ ವಿರುದ್ಧ ಧ್ವನಿ ಎತ್ತಬೇಕೆ ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹದಾಸ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.