ಗುರುವಾರ , ಜುಲೈ 29, 2021
21 °C

ಚಿಕ್ಕಮಗಳೂರಿನ ಆಭರಣ ಅಂಗಡಿ: ದರೋಡೆಗೆ ಯತ್ನ, ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ನಗರದ ಎಂ.ಜಿ.ರಸ್ತೆಯ ಕೇಸರಿ ಜ್ಯೂವೆಲರ್ಸ್‌ ಹಾಡಹಗಲೇ ಮೂವರು ದುಷ್ಕರ್ಮಿಗಳು ನುಗ್ಗಿ ದರೋಡೆಗೆ ಯತ್ನಿಸಿ, ಮೂರು ಗುಂಡು ಹಾರಿಸಿ ಬೈಕಿನಲ್ಲಿ ಪರಾರಿಯಾಗಿದ್ದಾರೆ.

ಬೆಳ್ಳಿಗೆ 11.25ರ ಈ ಘಟನೆ ನಡೆದಿದೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ, ಅಂಗಡಿ ಮಾಲೀಕ ಜಯಪ್ರಕಾಶ್ ಅವರಿಗೆ ಗಾಜು ತಗುಲಿ ಗಾಯವಾಗಿದೆ.
 
'ಮೂವರು ಪಲ್ಸರ್ ಬೈಕಿನಲ್ಲಿ ಬಂದು ದರೋಡೆಗೆ ಯತ್ನಿಸಿ, ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಮೂರು ಗುಂಡು ಹಾರಿಸಿದ್ದಾರೆ. ಅಂಗಡಿ ಮಾಲೀಕ ಜಯಪ್ರಕಾಶ ಅವರಿಗೆ ಗಾಜು ತಗುಲಿದ್ದು ಗಾಯವಾಗಿದೆ' ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ ತಿಳಿಸಿದ್ದಾರೆ.

'ಮೂವರ ಪೈಕಿ ಒಬ್ಬ ಹೆಲ್ಮೆಟ್ , ಇಬ್ಬರು ಮಾಸ್ಕ್ ಧರಿಸಿದ್ದರು ಎಂದು ಅಂಗಡಿಯವರು ಹೇಳಿದ್ದಾರೆ. ಮಳಿಗೆಯಲ್ಲಿನ ಸಿ.ಸಿ ಟಿವಿ ಕ್ಯಾಮೆರಾ ಪೂಟೇಜ್ ಪಡೆದುಕೊಂಡಿದ್ದೇವೆ' ಎಂದು ಪೊಲೀಸರು ತಿಳಿಸಿದ್ದಾರೆ.

ದುಷ್ಕರ್ಮಿಗಳ ಪತ್ತೆಗೆ ತಲಾಶ್ ಶುರುವಾಗಿದ್ದು, ತಂಡ ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು