ಕಡೂರು: ವಿವಿಧತೆಯಲ್ಲಿ ಏಕತೆ ಹೊಂದಿದ ನಮ್ಮ ದೇಶದ ಸಂವಿಧಾನ ಎಲ್ಲಾ ವರ್ಗಗಳ ಜನರಿಗೆ ಸಮಾನ ಕಲ್ಪಿಸಿದೆ ಎಂದು ಶಾಸಕ ಕೆ.ಎಸ್. ಆನಂದ್ ಬಣ್ಣಿಸಿದರು.

ತಾಲ್ಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಕಡೂರು, ಬೀರೂರು ಪುರಸಭೆಗಳ ಸಹಯೋಗದಲ್ಲಿ ಬುಧವಾರ ನಡೆದ ಸಂವಿಧಾನ ದಿನಾಚರಣೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವೈವಿಧ್ಯಮಯ ಸಂಸ್ಕೃತಿಗೆ ಸಮಾನ ಅವಕಾಶ ಒದಗಿಸಿ ಸುಭದ್ರ ಪ್ರಜಾಪ್ರಭುತ್ವದ ಅಡಿಗಲ್ಲಾಗಿ ಸಂವಿಧಾನ ನಿಂತಿದೆ. ನಮ್ಮ ಹೆಮ್ಮೆಯ ಸಂವಿಧಾನದ ಪರಿಚಯ ಮಕ್ಕಳಿಗೆ ಎಳವೆಯಿಂದಲೇ ಆಗಬೇಕು. ಆ ಸಲುವಾಗಿ ಎಲ್ಲರ ಮನೆಗಳಲ್ಲಿ ಸಂವಿಧಾನ ಪ್ರತಿ ಇರಲಿ. ಶಿಕ್ಷಣದ ಜತೆಗೆ ಸಂವಿಧಾನದ ಮಹತ್ವದ ಅರಿವು ಮೂಡಿಸುವ ಕೆಲಸಗಳೂ ಆಗಲಿ. ಎಲ್ಲರಿಗೂ ಮೂಲಭೂತ ಹಕ್ಕುಗಳನ್ನು ಒದಗಿಸುತ್ತಿರುವ ಸಂವಿಧಾನವನ್ನು ಗೌರವಿವುವುದು ಕರ್ತವ್ಯ ಎಂದರು.

ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ವಿಶ್ವಕ್ಕೆ ಮಾದರಿಯಾದ ಪ್ರಜಾಪ್ರಭುತ್ವ ರೂಪಿಸುವಲ್ಲಿ ನಮ್ಮ ಸಂವಿಧಾನದ ಪಾತ್ರ ಮಹತ್ವದ್ದು. ನೆರೆ ರಾಷ್ಟ್ರಗಳ ಸದ್ಯದ ಪರಿಸ್ಥಿತಿ, ಕ್ರಾಂತಿಗಳ ನಡುವೆ ಭಾರತವು ಡಾ.ಅಂಬೇಡ್ಕರ್ ಅವರ ಅಪಾರ ಪರಿಶ್ರಮದ ಸಂವಿಧಾನದ ಗಟ್ಟಿ ತಳಹದಿಯಿಂದ ನೆಮ್ಮದಿಯಿಂದ ಬಾಳಲು ಅವಕಾಶವಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಭಾರತದಲ್ಲಿ ಅಂಬೇಡ್ಕರ್ ವಾದ ಪ್ರಜ್ವಲಿಸುತ್ತಿರುವುದಕ್ಕೆ ಸಂವಿಧಾನ ದಿನ ಶಕ್ತಿಯುತವಾಗಿ ಆಚರಿಸಲ್ಪಡುತ್ತಿರುವುದೇ ಸಾಕ್ಷಿ. ಮಕ್ಕಳಿಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಸಂವಿಧಾನದ ಮಹತ್ವದ ಅಂಶಗಳನ್ನು ಸಾರುವ ಕಿರು ಪುಸ್ತಕಗಳನ್ನು ವಿತರಿಸುವ ಕೆಲಸವಾಗಲಿ ಎಂದು ಸಲಹೆ ನೀಡಿದರು.

ವಿಶೇಷ ಉಪನ್ಯಾಸ ನೀಡಿದ ಎಚ್.ಎ. ಸನಾವುಲ್ಲಾ, ವಿವಿಧ ದೇಶಗಳ ಸಂವಿಧಾನಗಳ ಅಧ್ಯಯನ, ಸಾರ ಸಂಗ್ರಹದ ಮೂಲಕ ರಚಿಸಲಾದ ನಮ್ಮ ಲಿಖಿತ ಸಂವಿಧಾನದ ಆಶಯಗಳಾದ ಸಮಾನತೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಮಾನ ಅವಕಾಶ, ಎಲ್ಲರನ್ನೂ ಗೌರವಿಸುವ ಆಶಯಗಳನ್ನು ಅಳವಡಿಸಿಕೊಳ್ಳೋಣ ಎಂದು ಹೇಳಿದರು.

ಸಂವಿಧಾನ ಪೀಠಿಕೆ ಬೋಧಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಸಿ.ಎಸ್. ಪೂರ್ಣಿಮಾ, ಪೀಠಿಕೆ ಸಂವಿಧಾನದ ಆತ್ಮ. ದೇಶ ನಡೆಸುವ ಮಹಾನ್ಗ್ರಂಥದ ಅಗತ್ಯ ಪ್ರಜೆಗಳ ಹುಟ್ಟಿನಿಂದ ಸಾವಿನವರೆಗೆ ಇದೆ. ನಮ್ಮ ಹಕ್ಕುಗಳ ರಕ್ಷಣೆ, ಅನುಷ್ಠಾನದಲ್ಲಿ ಸಂವಿಧಾನದ ಪಾತ್ರ ಪ್ರಮುಖ ಎಂದು ಹೇಳಿದರು.

ದಲಿತ ಸಂಘಟನೆಗಳ ಮುಖಂಡರು ಮಾತನಾಡಿದರು. ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ನಡೆಸಿದ ಚಿತ್ರಕಲೆ, ಪ್ರಬಂಧ, ಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿಪತ್ರ ವಿತರಿಸಲಾಯಿತು. ಮರವಂಜಿ ವೃತ್ತದ ಬಳಿಯ ಅಂಬೇಡ್ಕರ್ ಪ್ರತಿಮೆ ಬಳಿಯಿಂದ ಸಮುದಾಯ ಭವನದವರೆಗೆ ವಿದ್ಯಾರ್ಥಿಗಳು ರಾಷ್ಟ್ರಧ್ವಜ, ಸಂವಿಧಾನ ಪ್ರತಿಕೃತಿ, ಘೋಷಣಾ ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಮೆರವಣಿಗೆ ನಡೆಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಣಾ ಅಧಿಕಾರಿ ಸಿ.ಆರ್. ಪ್ರವೀಣ್, ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಟಿ. ನಟರಾಜ್, ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಆಸಂದಿ ಕಲ್ಲೇಶ್, ಪ್ರಕಾಶ್ ನಾಯ್ಕ, ದಲಿತ ಸಂಘಟನೆಗಳ ಮಂಜಪ್ಪ, ಚಂದ್ರಶೇಖರ್, ಗಿರೀಶ್, ಪದವಿಪೂರ್ವ ಕಾಲೇಜು ಪ್ರಾಚಾರ್ಯ ತವರಾಜ್, ಕಡೂರು, ಬೀರೂರು ಪುರಸಭೆ ಮುಖ್ಯಾಧಿಕಾರಿ, ಸಿಬ್ಬಂದಿ, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.