ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೃಂಗೇರಿ ಮಠದ ಶ್ರೀರಂಗ ದೊರೈ ಆಸ್ಪತ್ರೆಗೆ ಕರ್ಣಾಟಕ ಬ್ಯಾಂಕ್ ₹29.5 ಲಕ್ಷ ಕೊಡುಗೆ

Last Updated 5 ಸೆಪ್ಟೆಂಬರ್ 2022, 2:44 IST
ಅಕ್ಷರ ಗಾತ್ರ

ಶೃಂಗೇರಿ: ಇಲ್ಲಿನ ಶೃಂಗೇರಿ ಮಠದಿಂದ ನಡೆಯುತ್ತಿರುವ ಬೆಂಗಳೂರಿನ ಶ್ರೀರಂಗ ದೊರೈ ಆಸ್ಪತ್ರೆಗೆ ಸಲಕರಣೆ ಖರೀದಿಸಲು ಕರ್ಣಾಟಕ ಬ್ಯಾಂಕ್‌ ₹29.5 ಲಕ್ಷ ಕೊಡುಗೆ ನೀಡಿದೆ.

ಶೃಂಗೇರಿ ಶಾರದಾ ಪೀಠಕ್ಕೆ ಭಾನುವಾರ ಭೇಟಿ ನೀಡಿದ ಬ್ಯಾಂಕ್‌ ಅಧ್ಯಕ್ಷ ಪ್ರದೀಪ್ ಕುಮಾರ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಎಂ.ಎಸ್ ಮಹಾಬಲೇಶ್ವರ ಭಟ್ ಅವರು ಭಾರತೀತೀರ್ಥ ಸ್ವಾಮೀಜಿ ಮತ್ತು ವಿಧುಶೇಖರಭಾರತೀ ಸ್ವಾಮೀಜಿ ದರ್ಶನ ಪಡೆದು ಕೊಡುಗೆ ನೀಡಿದರು.

ಮಹಾಬಲೇಶ್ವರ ಭಟ್‍ ಮಾತನಾಡಿ, ‘ಕಳೆದ ವರ್ಷ ಬ್ಯಾಂಕ್‌ ದಾಖಲೆಯ ಲಾಭ ಗಳಿಸಿದೆ. 8,500 ಕ್ಕೂ ಹೆಚ್ಚು ಸಿಬ್ಬಂದಿ ಇದ್ದಾರೆ. 2024ರ ಫೆಬ್ರುವರಿಯಲ್ಲಿ ಬ್ಯಾಂಕ್ ಶತಮಾನೋತ್ಸವ ಆಚರಿಸಲಿದೆ. ಆ ಸಂದರ್ಭದಲ್ಲಿ ಬ್ಯಾಂಕ್ ಸಾಕಷ್ಟು ವ್ಯವಹಾರ ಹಾಗೂ ಲಾಭದ ಗುರಿಯನ್ನು ಹೊಂದಿದೆ’ ಎಂದರು.

‘ಸ್ಥಳೀಯ ಶಾರದಾ ಬ್ಯಾಂಕ್‌ ವಿಲೀನ ಮಾಡಿಕೊಂಡು ಬೆಳೆದಿರುವ ಕರ್ಣಾಟಕ ಬ್ಯಾಂಕ್ ಇನ್ನಷ್ಟು ಅಭಿವೃದ್ಧಿ ಸಾಧಿಸಲಿ. ಜನಸಾಮಾನ್ಯರಿಗೆ ಉತ್ತಮ ಸೇವೆ ಸಿಗಲಿ’ ಎಂದು ವಿಧುಶೇಖರಭಾರತೀ ಸ್ವಾಮೀಜಿಗಳು ಹಾರೈಸಿದರು.

ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಹಯವದನ ಉಪಧ್ಯಾಯ, ಸ್ಥಳೀಯ ಶಾಖಾ ವ್ಯವಸ್ಥಾಪಕ ಶರತ್ ಕುಮಾರ್, ನೈನಾರಾಣಿ, ಸುಭಾಷ್ ಅಶ್ವತ್‍ಪುರ, ನಿರಂಜನ್, ಆದಿಶೇಷ, ಗಣೇಶ್, ಶಿವಪ್ರಸಾದ್, ಸತೀಶ್ ಹಾಗೂ ಸಿಬ್ಬಂದಿ ಪ್ರತೀಕ, ಬಾಲಗಂಗಾಧರ್, ರವಿಶಂಕರ್, ರಾಘವೇಂದ್ರ, ನವೀನ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT