ಶುಕ್ರವಾರ, ಮೇ 27, 2022
21 °C

ಕಾಂಗ್ರೆಸ್‌ಗೆ ದೂರಲು ಮೋದಿ ಬೇಕು, ಒಳ್ಳೆಯದ್ದಕ್ಕೆ ಬೇಡ: ಸಿ.ಟಿ.ರವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಮಗಳೂರು: ‘ಕಾಂಗ್ರೆಸ್‌ನವರಿಗೆ ದೂರುವುದಕ್ಕೆ ಮೋದಿ ಬೇಕು, ಒಳ್ಳೆಯದಕ್ಕಾದ್ರೆ ಬೇಡ. ಕಾಂಗ್ರೆಸ್‌ನದು ಗೋಸುಂಬೆ ರಾಜಕಾರಣ’ ಎಂದು ಶಾಸಕ ಸಿ.ಟಿ.ರವಿ ಕಟಕಿಯಾಡಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೋವಿಡ್‌ ಪ್ರತಿರೋಧಕ ಲಸಿಕೆಯನ್ನು ಎಲ್ಲರಿಗೂ ಉಚಿತವಾಗಿ ನೀಡುವುದಾಗಿ ಪ್ರಧಾನಿ ಹೇಳಿದಾಗ, ಕಾಂಗ್ರೆಸ್‌ನವರು ‘ಥ್ಯಾಂಕ್ಯು ಸುಪ್ರೀಂ ಕೋರ್ಟ್‌’ ಎಂದು ಹೇಳಿದ್ದರು’ ಎಂದರು.  

‘ಲಸಿಕೆ ಬಗ್ಗೆ  ಕಾಂಗ್ರೆಸ್‌ನವರು ಅಪಪ್ರಚಾರ ಮಾಡಿದ್ದರು. ಲಸಿಕೆ ಹಾಕಿಸಿಕೊಂಡರೆ ಮಕ್ಕಳಾಗಲ್ಲ ಎಂದು ಹೇಳಿದ್ದರು.

ಡಿ.ಕೆ.ಶಿವಕುಮಾರ್‌ ಅವರ ಟ್ವೀಟ್‌ ತೋರಿಸ್ಲಾ? ಸಿದ್ದರಾಮಯ್ಯ ನೀಡಿದ್ದ ಹೇಳಿಕೆ ಹೇಳ್ಲಾ?’ ಎಂದು ತಿವಿದರು.

ಇದನ್ನೂ ಓದಿ... ಸಿಎಂ ವಿಶೇಷ ವಿಮಾನದಲ್ಲಿ ದೆಹಲಿಗೆ ಕೊಂಡೊಯ್ದಿದ್ದು ಏನು: ಎಚ್‌ಡಿಕೆ ಪ್ರಶ್ನೆ

‘ಕಾಂಗ್ರೆಸ್‌ಗೆ ಅಧಿಕಾರವೇ ಇಲ್ಲ, ಆದರೂ ಮುಖ್ಯಮಂತ್ರಿ ಸ್ಥಾನದ ಕನಸು ಕಾಣುತ್ತಿರುವುದಕ್ಕೆ ಏನು ಹೇಳಲಿ? ಇನ್ನಷ್ಟು ಜನರು ಕಾಂಗ್ರೆಸ್‌ ತೊರೆದು ವಲಸೆ ಹೋಗದಿರಲಿ ಎಂದು ಈ ‘ಇನ್ನರ್‌ ಪಾಲಿಟಿಕ್ಸ್‌’ (ಒಳರಾಜಕೀಯ) ಮಾಡುತ್ತಿರಬಹುದು’ ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ... ಜುಲೈ 26ಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ: ಬಿ.ಎಸ್‌. ಯಡಿಯೂರಪ್ಪ‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು