ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಭ್ರಮದ ವೆಂಕಟರಮಣ ಸ್ವಾಮಿ ರಥೋತ್ಸವ

Published 3 ಮೇ 2024, 14:08 IST
Last Updated 3 ಮೇ 2024, 14:08 IST
ಅಕ್ಷರ ಗಾತ್ರ

ಕೊಪ್ಪ: ಹುಲುಮಕ್ಕಿಯಲ್ಲಿನ ದಾಸಮಠದ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ಸಂಭ್ರಮದಿಂದ ರಥೋತ್ಸವ ನೇರವೇರಿತು.

ಮಧ್ಯಾಹ್ನ ಮನ್ಮಹಾರಥಾರೋಹಣ ನಡೆಯಿತು. ಭಕ್ತರು ಹರ್ಷೋದ್ಗಾರದಿಂದ ರಥ ಎಳೆದರು. ದೇವರಿಗೆ ಹೂವಿನ ವಿಶೇಷ ಅಲಂಕಾರ ಮಾಡಲಾಗಿದ್ದು, ವಿಶೇಷ ಪೂಜೆ ಜರುದವು. ಭಕ್ತರು ಹಣ್ಣು ಕಾಯಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.

ಆದಿಚುಂಚನಗಿರಿಯ ಶೃಂಗೇರಿ ಶಾಖಾ ಮಠದ ಗುಣನಾಥ ಸ್ವಾಮೀಜಿ, ಆದಿಚುಂಚನಗಿರಿಯ ಮಂಗಳೂರು ಶಾಖಾ ಮಠದ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಸಲಹಾ ಸಮಿತಿ ಅಧ್ಯಕ್ಷ ಕೋಡ್ರು ಶ್ರೀನಿವಾಸ್ ಇದ್ದರು.

ಮೇ 4ರಂದು ಅಭಿಷೇಕ, ಕುಂಕುಮೋತ್ಸವ, ಅವಭೃತ, ಮಹಾಮಂಗಳಾರತಿ, ರಾತ್ರಿ ಪಲ್ಲಕ್ಕಿ ಉತ್ಸವ ನಡೆಯಲಿದ್ದು, 5ರಂದು ಸಂಪ್ರೋಕ್ಷಣೆ, ಗಂಗಾ ಪೂಜೆ ಜರುಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT