ಮೂಡಿಗೆರೆ: ಪಟ್ಟಣದ ಬಸ್ ನಿಲ್ದಾಣದಿಂದ ಪ್ರತಿದಿನ ಸಂಜೆ 6.45 ಕ್ಕೆ ಗುತ್ತಿಹಳ್ಳಿಗೆ ಸಂಚರಿರಸುವ ಕೆಎಸ್ಆರ್ಟಿಸಿ ಬಸ್ ಸಮಯಕ್ಕೆ ಸರಿಯಾಗಿ ಬಸ್ ಸ್ಟ್ಯಾಂಡಿಗೆ ಬರುವುದಿಲ್ಲ. ಹೀಗಾಗಿ, ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ರಾತ್ರಿ 8 ಗಂಟೆಯಾದರೂ ಬಿದರಹಳ್ಳಿಯ ಡಿಪೋದಿಂದ ಬಸ್ ನಿಲ್ದಾಣಕ್ಕೆ ಬರಲ್ಲ. ನಿಯಂತ್ರಕರು, ಘಟಕ ವ್ಯವಸ್ಥಾಪಕರನ್ನು ವಿಚಾರಿಸಿದರೆ ಬರುತ್ತೆ... ಬರುತ್ತೆ.. ಬಸ್ ಡಿಪೋದಲ್ಲಿದೆ, ನಿರ್ವಾಹಕ, ಚಾಲಕ ಇಲ್ಲ. ಅವರನ್ನು ವ್ಯವಸ್ಥೆ ಮಾಡ್ತಾ ಇದ್ದೀವಿ, ಕಾಯ್ತಾ ಇರಿ! ಎಂಬ ಸಿದ್ಧ ಉತ್ತರ ನೀಡುತ್ತಾರೆ.

ಬಸ್ ಬರುವುದು ತುಂಬಾ ಹೊತ್ತಾಗಬಹುದು ಅಥವಾ ಬಾರದೆಯೂ ಇರಬಹುದು ಎಂದು ಪ್ರಯಾಣಿಕರು ಖಾಸಗಿ ವಾಹನಗಳಲ್ಲಿ ಊರು ತಲುಪುವುದು ಮಾಮೂಲಿಯಾಗಿದೆ. ಈ ವಾಹನಗಳಲ್ಲಿ ದುಪ್ಪಟ್ಟು ಹಣ ತೆರಬೇಕು.

ಈ ಮಾರ್ಗಕ್ಕೆ ಪ್ರಯಾಣಿಕರೇ ಇರೊಲ್ಲ, ಬಸ್ ಬಿಡುವುದು ಹೇಗೆ ಎಂದು ಕೆಲ ಅಧಿಕಾರಿಗಳು ಹೇಳುತ್ತಾರೆ. ಪ್ರಯಾಣಿಕರು ಈಚೆಗೆ ಬಸ್ ಘಟಕಕ್ಕೆ ತೆರಳಿ ಸಂಕಷ್ಟವನ್ನು ಅಧಿಕಾರಿಗಳಿಗೆ ಮನದಟ್ಟು ಮಾಡುವ ಪ್ರಯತ್ನ ಮಾಡಿದ್ದಾರೆ. ಸಮಸ್ಯೆ ಪರಿಹಾರಕ್ಕೆ ಸಂಬಂಧಪಟ್ಟವರು ಎಂದು ಜನರು ಒತ್ತಾಯಿಸಿದ್ದಾರೆ.

- ಡಾ.ಸಂಪತ್ ಬೆಟ್ಟಗೆರೆ, ಪ್ರಯಾಣಿಕರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.