ಚಿಕ್ಕಮಗಳೂರು: ನೌಕರರ ಮುಷ್ಕರದಿಂದ ಸಂಜೆ ತನಕ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಎಲ್ಲೆಡೆ ಸ್ಥಗಿತಗೊಂಡಿತ್ತು. ಖಾಸಗಿ ಬಸ್ಗಳಲ್ಲಿ ದುಬಾರಿ ದರ ಪಾವತಿಸಿ ಜನ ಪ್ರಯಾಣ ಮಾಡಿದರು.

ನಗರ ಸೇರಿ ಗ್ರಾಮೀಣ ಪ್ರದೇಶದಲ್ಲಿ ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಚಿಕ್ಕಮಗಳೂರಿನ ಬಸ್ ನಿಲ್ದಾಣದಲ್ಲಿ ಮಂಗಳವಾರ ದಿನವಿಡೀ ಖಾಸಗಿ ಬಸ್, ಮಿನಿ ಬಸ್, ಜೀಪ್ಗಳು ನಿಂತಿದ್ದವು.

ಚಿಕ್ಕಮಗಳೂರು ಡಿಪೋದಲ್ಲಿ 156 ಬಸ್ಗಳಿದ್ದು, 150 ಬಸ್ಗಳು ಡಿಪೋದಲ್ಲೇ ನಿಂತಿದ್ದವು. ಜಿಲ್ಲೆಯ ಆರು ಘಟಕಗಳ ಪೈಕಿ 560 ಬಸ್ಗಳಿದ್ದು, ಬಹುತೇಕ ಬಸ್ಗಳು ಕಾರ್ಯಾಚರಣೆ ನಿಲ್ಲಿಸಿದ್ದವು.

ರಾತ್ರಿಯೇ ಬೆಂಗಳೂರಿನಿಂದ ಬಂದಿದ್ದ ಎಲೆಕ್ಟ್ರಿಕ್ ಬಸ್ಗಳು ಮಧ್ಯಾಹ್ನದ ನಂತರ ಬಸ್ ನಿಲ್ದಾಣಕ್ಕೆ ಬಂದವು. ಈ ಬಸ್ ಚಾಲಕರು ಕೆಎಸ್ಆರ್ಟಿಸಿ ನೌಕರರಲ್ಲದ ಕಾರಣ ಮುಷ್ಕರಕ್ಕೆ ಅವರ ಬೆಂಬಲ ಇರಲಿಲ್ಲ. ಆದರೂ ಬಸ್ ಕಾರ್ಯಾಚರಣೆಗೆ ಹಿಂದೇಟು ಹಾಕುತ್ತಿದ್ದರು. ಅಧಿಕಾರಿಗಳು ಧೈರ್ಯ ತುಂಬಿ ಕಾರ್ಯಾಚರಣೆ ಮಾಡಿಸಿದರು.

ಬಸ್ ನಿಲ್ದಾಣದಲ್ಲಿ ಅಲ್ಲಲ್ಲಿ ಪ್ರಯಾಣ ದರದ ಪಟ್ಟಿ ಹಾಕಲಾಗಿತ್ತು. ಆದರೂ, ದುಪಟ್ಟು ದರ ನಿಗದಿ ಮಾಡಿ ಖಾಸಗಿ ಬಸ್ಗಳ ಸಿಬ್ಬಂದಿ ಪ್ರಯಾಣಿಕರನ್ನು ಕರೆದೊಯ್ದರು. ಪಾಸ್ ಹೊಂದಿರುವ ವಿದ್ಯಾರ್ಥಿಗಳು, ನೌಕರರು, ಉಚಿತ ಪ್ರಯಾಣದ ಅವಕಾಶ ಹೊಂದಿರುವ ಮಹಿಳೆಯರು ಹಣ ಪಾವತಿಸಿ ಪ್ರಯಾಣ ಮಾಡಬೇಕಾಯಿತು.

ಖಾಸಗಿ ಬಸ್ಗಳು ಹಾಸನ, ಕಡೂರು, ಬೇಲೂರು, ಶೃಂಗೇರಿ, ಮೂಡಿಗೆರೆಗೆ ಹೆಚ್ಚಿನವು ತೆರಳಿದವು. ಗ್ರಾಮೀಣ ವಿಭಾಗದ ಬಸ್ ನಿಲ್ದಾಣದಲ್ಲಿ ಯಾವುದೇ ಬಸ್ಗಳೂ ಇರಲಿಲ್ಲ. ನಗರಕ್ಕೆ ಬಂದವರು ತಮ್ಮ ಊರುಗಳಿಗೆ ತೆರಳಲು ಪರದಾಡಿದರು.

ಖಾಸಗಿ ಬಸ್ಗಳ ಕಾರ್ಯಾಚರಣೆಗೆ ಅಡ್ಡಿಪಡಿಸದಂತೆ ಪೊಲೀಸರು ಬಸ್ ನಿಲ್ದಾಣದಲ್ಲಿ ಬಂದೋಬಸ್ತ್ ಕೈಗೊಂಡಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಮ ಅಮಟೆ ಕೂಡ ನಿಲ್ದಾಣಕ್ಕೆ ಬಂದು ಪರಿಶೀಲನೆ ನಡೆಸಿದರು.

ತರೀಕೆರೆಯಲ್ಲಿ ಪ್ರಯಾಣಿಕರಿಗೆ ತೊಂದರೆ

ತರೀಕೆರೆ: ಪಟ್ಟಣದಲ್ಲೂ ಕೆಎಸ್ಆರ್ಟಿಸಿ ಬಸ್ ಇಲ್ಲದೇ ಮಧ್ಯಾಹ್ನದ ತನಕ ಪ್ರಯಾಣಿಕರು ತೊಂದರೆ ಅನುಭವಿಸಿದರು. ಪಟ್ಟಣದಿಂದ ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿರುವ ವಿದ್ಯಾ ಸಂಸ್ಥೆಗೆ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳು ನೌಕರರು ಪ್ರಯಾಣಿಸುತ್ತಾರೆ. ಬಸ್ ಇಲ್ಲದೆ ಮಂಗಳವಾರ ಪರದಾಡಿದರು. ಬೆಂಗಳೂರು ಮೈಸೂರು ಚಿಕ್ಕಮಗಳೂರು ಮತ್ತು ಶಿವಮೊಗ್ಗ ನಗರಗಳಿಗೆ ಪ್ರತಿನಿತ್ಯ ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದು ಇವರು ಸಹ ತೊಂದರೆ ಅನುಭವಿಸಿದರು.

- ಸಂಚಾರ ವ್ಯವಸ್ಥೆ ಅಸ್ತವ್ಯಸ್ತ

ಕಡೂರು: ನೌಕರರ ಮುಷ್ಕರಿಂದ ಸಾರ್ವಜನಿಕ ಸಂಚಾರ ವ್ಯವಸ್ಥೆ ಕಡೂರಿನಲ್ಲಿ ಅಸ್ತವ್ಯಸ್ತಗೊಂಡಿತ್ತು. ರೈಲುಗಳ ಮೂಲಕ ಬೀರೂರು ಅಥವಾ ಕಡೂರಿಗೆ ಬಂದು ಅಲ್ಲಿಂದ ಧರ್ಮಸ್ಥಳ ಮಂಗಳೂರು ಮೊದಲಾದ ಕಡೆ ತೆರಳುವ ಪ್ರಯಾಣಿಕರು ಬಸ್ಗಳಿಲ್ಲದೇ ಪರದಾಡಿದರು. ಬೆಂಗಳೂರಿನಿಂದಲೂ ರೈಲುಗಳ ಮೂಲಕ ಬೀರೂರಿಗೆ ಬಂದು ಶಿವಮೊಗ್ಗದ ಕಡೆ ತೆರಳುವ ನೌಕರರು ಅನಿವಾರ್ಯವಾಗಿ ಖಾಸಗಿ ವಾಹನಗಳ ಮೊರೆ ಹೋಗಬೇಕಾಯಿತು. ಕಡೂರು ಡಿಪೊದ 176 ಬಸ್ಗಳಿದ್ದು ಮುಷ್ಕರದ ನಡುವೆಯೂ ಚಿಕ್ಕಮಗಳೂರಿಗೆ ತೆರಳಲು ಮೂರು ಬಸ್ಗಳನ್ನು ಬಸ್ ನಿಲ್ದಾಣಕ್ಕೆ ಅಧಿಕಾರಿಗಳು ಕಳುಹಿಸಿದರು. ಆದರೂ ಒಂದು ಬಸ್ ಮಾತ್ರ ಚಿಕ್ಕಮಗಳೂರಿಗೆ ತೆರಳಿತು. ಇದರ ಹೊರತಾಗಿ ಸಂಜೆ ತನಕ ಬಸ್ಗಳು ಸಂಚರಿಸಲಿಲ್ಲ. ಇದರಿಂದಾಗಿ ಚಿಕ್ಕಮಗಳೂರು ಕೊಪ್ಪ ಶೃಂಗೇರಿ ಕಡೆ ತೆರಳುವವರಿಗೆ ಸಮಸ್ಯೆಯಾಗಿತ್ತು. ಕಡೂರು ಬಸ್ ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ಖಾಸಗಿ ವಾಹನಗಳು ಬಸ್ ನಿಲ್ದಾಣದ ಒಳಗೆ ಬಂದವು. ಕಡೂರು ತಹಶೀಲ್ದಾರ್ ಸಿ.ಎಸ್.ಪೂರ್ಣಿಮಾ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಕಡೂರು ಡಿಪೊದಲ್ಲಿ ನಿತ್ಯ ಸುಮಾರು ₹15.50 ಲಕ್ಷ ಸಂಗ್ರಹವಾಗುತ್ತಿದ್ದು ನಿಗಮಕ್ಕೆ ಅಷ್ಟು ಹಣ ನಷ್ಟವಾಗಿದೆ ಎಂದು ಡಿಪೊ ವ್ಯವಸ್ಥಾಪಕಿ ಅರುಣ ಕುಮಾರಿ ಮಾಹಿತಿ ನೀಡಿದರು. ಅಜ್ಜಂಪುರ– ಹೊಸದುರ್ಗ– ಚಿತ್ರದುರ್ಗ ಕಡೆಗೆ ತೆರಳುವ ಖಾಸಗಿ ಬಸ್ಗಳು ಎಂದಿನಂತೆ ಸಂಚರಿಸಿ ಪ್ರಯಾಣಿಕರಿಗೆ ಸೇವೆ ಒದಗಿಸಿದವು. ಸಂಜೆ ವೇಳೆಗೆ ಮುಷ್ಕರ ವಾಪಸ್ ಪಡೆದಿರುವ ಸಂದೇಶ ದೊರೆತ ನಂತರ ಕೆಲ ಬಸ್ಗಳು ಕಾರ್ಯಾಚರಣೆ ನಡೆಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.