ಬೆಂಗಳೂರು: ಬೆಳಗಾವಿ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ʼವಂದೇ ಭಾರತ್ʼ ರೈಲು ಸಂಚರಿಸುವ ಸಮಯ ಹತ್ತಿರ ಬಂದಿದೆ.

ಇದೇ ಆಗಸ್ಟ್ 10 ರಂದು ಭಾನುವಾರ ‘ಬೆಳಗಾವಿ–ಬೆಂಗಳೂರು ವಂದೇ ಭಾರತ್’ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಿಂದ ಚಾಲನೆ ನೀಡಲಿದ್ದಾರೆ ಎಂದು ಸಂಸದ ಪ್ರಲ್ಹಾದ ಜೋಶಿ ಟ್ವೀಟ್ ಮಾಡಿ ತಿಳಿಸಿದ್ದಾರೆ.

ಆಗಸ್ಟ್ 10 ರಂದು ಮಧ್ಯಾಹ್ನ 1 ಗಂಟೆಯ ಸುಮಾರು ಹೊಸ ವಂದೇ ಭಾರತ ರೈಲು ಬೆಂಗಳೂರಿನಿಂದ–ಬೆಳಗಾವಿಗೆ ಉದ್ಘಾಟನಾರ್ಥ ಸಂಚಾರ ಆರಂಭಿಸಲಿದ್ದು ಆಗಸ್ಟ್ 11ರಿಂದ ಬುಕಿಂಗ್ ತೆರೆಯಬಹುದು ಎನ್ನಲಾಗಿದೆ.

ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಸಂಚಾರದ ವೇಳಾಪಟ್ಟಿ ಹೀಗಿದೆ..

ನೂತನ ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ವಾರದಲ್ಲಿ ಆರು ದಿನ ಬೆಳಗಾವಿಯಿಂದ (BGM) ಬೆಳಿಗ್ಗೆ 5.20ಕ್ಕೆ ಹೊರಟು ಅದೇ ದಿನ ಬೆಂಗಳೂರಿಗೆ (SBC KSR) ಮಧ್ಯಾಹ್ನ 1.50ಕ್ಕೆ ತಲುಪಲಿದೆ.

ವಾರದಲ್ಲಿ ಆರು ದಿನ ಬೆಂಗಳೂರಿನಿಂದ (SBC KSR) ವಾಪಸ್ ಅದೇ ದಿನ ಮಧ್ಯಾಹ್ನ 2.20ಕ್ಕೆ ಹೊರಟು ರಾತ್ರಿ 10.40ಕ್ಕೆ ಬೆಳಗಾವಿ (BGM) ತಲುಪಲಿದೆ.

ನಿಲುಗಡೆಗೆ ಅವಕಾವಿರುವ ನಿಲ್ದಾಣಗಳು

ಬೆಳಗಾವಿ–ಬೆಂಗಳೂರು ವಂದೇ ಭಾರತ್ ರೈಲು ಧಾರವಾಡ, ಹುಬ್ಬಳ್ಳಿ, ಹಾವೇರಿ, ದಾವಣಗೆರೆ, ತುಮಕೂರು ನಿಲ್ದಾಣಗಳಿಗೆ ನಿಲುಗಡೆ ನೀಡಲಿದೆ.

ಮೂರು ಒಂದೇ ಭಾರತ್ ರೈಲಿಗೆ ಹಸಿರು ನಿಶಾನೆ

ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಭಾನುವಾರ ರಾಜ್ಯದಲ್ಲಿ 3 ವಂದೇ ಭಾರತ್ ರೈಲಿಗೆ ಹಸಿರು ನಿಶಾನೆ ತೋರಲಿದ್ದಾರೆ. ಬೆಂಗಳೂರು-ಬೆಳಗಾವಿ, ನಾಗ್ಪುರದ ಅಜ್ನಿ-ಪುಣೆ ಹಾಗೂ ಅಮೃತಸರ-ಶ್ರೀ ಮಾತಾ ವೈಷ್ಣವೊ ದೇವಿ ಕಾತ್ರಾ ಮಧ್ಯೆ ನೂತನ ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿವೆ.
.ವಿಡಿಯೊ: ಸೋರುತಿಹುದು ವಂದೇ ಭಾರತ್ ರೈಲು ಮಾಳಿಗೆ! ದೂರಿಗೆ ರೈಲ್ವೆ ಪ್ರತಿಕ್ರಿಯೆ.Video: ವಂದೇ ಭಾರತ್ ರೈಲಿನಲ್ಲಿ BJP ಶಾಸಕನ ಬೆಂಬಲಿಗರಿಂದ ಪ್ರಯಾಣಿಕನ ಮೇಲೆ ಹಲ್ಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.