ಕಲಬುರಗಿ: ಮೊಹಮ್ಮದ್ ಹಸನೈನ್ ನಿಹಾನ್ ಅವರ ಭರ್ಜರಿ ದ್ವಿಶ್ವತಕ (ಔಟಾಗದೆ 228 ರನ್, 120 ಎಸೆತ, 29 ಬೌಂಡರಿ, 9 ಸಿಕ್ಸರ್) ಬಲದಿಂದ ಕಲಬುರಗಿ ಸೂಪರ್ ಕಿಂಗ್ಸ್ ತಂಡವು ಕಲಬುರಗಿ ಪ್ರೀಮಿಯರ್ ಲೀಗ್ 16 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಭರ್ಜರಿ ಜಯ ದಾಖಲಿಸಿತು.

ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನ (ಸ್ವಾಯತ್ತ) ಕ್ರೀಡಾಂಗಣದಲ್ಲಿ ಮಂಗಳವಾರ ಚಿತ್ತಾಪುರ ಟೈಟನ್ಸ್ ಎದುರು ನಡೆದ ಪಂದ್ಯದಲ್ಲಿ ನಿಹಾನ್ ಅಕ್ಷರಶಃ ಅಬ್ಬರಿಸಿದರು. ಅವರ ತಂಡವು 264 ರನ್ಗಳ ಜಯ ಸಾಧಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಸೂಪರ್ ಕಿಂಗ್ಸ್ ನಿಗದಿತ 50 ಓವರ್ಗಳಲ್ಲಿ 8 ವಿಕೆಟ್ಗೆ 378 ರನ್ಗಳ ಬೃಹತ್ ಮೊತ್ತ ಗಳಿಸಿತು. ತಂಡದ ಆದಿತ್ಯ ಎ.ಕೆ. (48 ರನ್) ಉತ್ತಮ ಕೊಡುಗೆ ನೀಡಿದರು.

ಎದುರಾಳಿ ತಂಡದ ಶ್ರೇಯಸ್ (53ಕ್ಕೆ 4) ಬೌಲಿಂಗ್ನಲ್ಲಿ ಸ್ವಲ್ಪ ಪ್ರತಿರೋಧ ತೋರಿದರು.

ಗುರಿ ಬೆನ್ನತ್ತಿದ ಚಿತ್ತಾಪುರ ಟೈಟನ್ಸ್ ತಂಡ 21.1 ಓವರ್ಗಳಲ್ಲಿ 114 ರನ್ ಗಳಿಸಿ ಆಲೌಟ್ ಆಯಿತು. ಶ್ರೇಯಸ್ (28 ರನ್) ಗಳಿಸಿದ್ದೇ ಅತ್ಯಧಿಕ ವೈಯಕ್ತಿಕ ಸ್ಕೋರ್ ಎನಿಸಿತು. ಸೂಪರ್ ಕಿಂಗ್ಸ್ ತಂಡದ ಜೇಮ್ಸ್ ಬಿ.ಎಚ್ (13ಕ್ಕೆ 3), ಸಮರ್ಥ್ (15ಕ್ಕೆ 2) ರಿಷಿಕ್ ಹಾಗೂ ಸುಕೇತ್ (ಇಬ್ಬರೂ 24ಕ್ಕೆ 2) ಬೌಲಿಂಗ್ನಲ್ಲಿ ಮಿಂಚಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.