ದುಬೈ: ಮುಂಬರುವ ಏಷ್ಯಾ ಕಪ್ನ ಕ್ರಿಕೆಟ್ ಟೂರ್ನಿಗಾಗಿ ರಶೀದ್ ಖಾನ್ ನಾಯಕತ್ವದ 22 ಆಟಗಾರರ ಪಟ್ಟಿಯನ್ನು ಅಫ್ಗಾನಿಸ್ತಾನ ಕ್ರಿಕೆಟ್ ಬೋರ್ಡ್ ಬಿಡುಗಡೆಗೊಳಿಸಿದೆ.

ಸೆಪ್ಟೆಂಬರ್ 9 ರಿಂದ 28 ರವರೆಗೆ ‘ಯುಎಇ‘ಯಲ್ಲಿ ಏಷ್ಯಾ ಕಪ್ ಟೂರ್ನಿ ಜರುಗಲಿದೆ.

ರಶೀದ್ ಖಾನ್, ರಹಮಾನುಲ್ಲಾ ಗುರ್ಬಾಜ್, ಮೊಹಮ್ಮದ್ ನಬಿ ಸೇರಿದಂತೆ ವಿಶ್ವಕಪ್ನಲ್ಲಿ ಭಾಗವಹಿಸಿದ್ದ ಅಫ್ಗಾನಿಸ್ತಾನ ತಂಡದ ಪ್ರಮುಖ ಆಟಗಾರ ಜೊತೆ ದೇಶಿ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರರು ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

‘ನಾಯಕ ರಶೀದ್ ಖಾನ್ ಅವರ ಲಯದ ಕುರಿತು ನಾವು ಚಿಂತಿಸುವುದಿಲ್ಲ. ಅವರು ತಂಡಕ್ಕಾಗಿ ಆಡುತ್ತಾರೆ, ಏಷ್ಯಾ ಕಪ್ನಲ್ಲಿ ರಶೀದ್ ಮಿಂಚುವ ವಿಶ್ವಾಸವಿದೆ’ಎಂದು ಅಫ್ಗಾನಿಸ್ತಾನ ಕ್ರಿಕೆಟ್ ಬೋರ್ಡ್(ಎಸಿಬಿ) ತಿಳಿಸಿದೆ.

ಕೊನೆಯ ಬಾರಿ ಐಪಿಎಲ್ನಲ್ಲಿ ಕಾಣಿಸಿಕೊಂಡಿದ್ದ ರಶೀದ್ ಖಾನ್, 18ನೇ ಆವೃತ್ತಿಯಲ್ಲಿ ಗುಜರಾತ್ ಟೈಟನ್ಸ್ ಪರ 9.34 ಸರಾಸರಿಯಲ್ಲಿ ಕೇವಲ 9 ವಿಕೆಟ್ ಪಡೆದಿದ್ದರು. ನಂತರ ನಡೆದ ಮೇಜರ್ ಲೀಗ್ ಕ್ರಿಕೆಟ್ ಟೂರ್ನಿಯಿಂದ ಹಿಂದೆ ಸರಿದಿದ್ದರು.

ಏಷ್ಯಾ ಕಪ್ ಟೂರ್ನಿಗೂ ಮುನ್ನ ಎರಡು ವಾರಗಳ ತರಬೇತಿ ಶಿಬಿರ ನಡೆಯಲಿದೆ. ನಂತರ ಅಫ್ಗಾನಿಸ್ತಾನ, ಯುಎಇ ಹಾಗೂ ಪಾಕಿಸ್ತಾನದ ನಡುವೆ ಟಿ–20 ತ್ರಿಕೋನ ಸರಣಿ ಜರುಗಲಿದೆ ಎಂದು ಎಸಿಬಿ ತಿಳಿಸಿದೆ.

ಏಷ್ಯಾ ಕಪ್ ಟೂರ್ನಿಯಲ್ಲಿ ಅಫ್ಗಾನಿಸ್ತಾನ ತಂಡವು ಬಿ ಗುಂಪಿನಲ್ಲಿದೆ. ಹಾಂಕಾಂಗ್, ಬಾಂಗ್ಲಾದೇಶ ಹಾಗೂ ಶ್ರೀಲಂಕಾ ವಿರುದ್ಧ ಗುಂಪು ಹಂತದಲ್ಲಿ ಆಡಲಿದೆ.

ಅಫ್ಗಾನಿಸ್ತಾನ ತಂಡ: ರಶೀದ್ ಖಾನ್ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಸೇದಿಕುಲ್ಲಾ ಅಟಲ್, ವಫಿವುಲ್ಲಾ ತಾರಖಿಲ್, ಇಬ್ರಾಹಿಂ ಜದ್ರಾನ್, ದರ್ವಿಶ್ ರಸೂಲಿ, ಮೊಹಮ್ಮದ್ ಇಶಾಕ್, ಮೊಹಮ್ಮದ್ ನಬಿ, ನಂಗ್ಯಾಲ್ ಕರೋತಿ, ಅಶ್ರಫ್ ಕರೋತಿ, ಒಮರ್ಝೈ, ಗುಲ್ಬದಿನ್ ನೈಬ್, ಮುಜೀಬ್ ಜದ್ರಾನ್, ನೂರ್ ಅಹ್ಮದ್, ಫಝಲ್ ಹಕ್ ಫಾರೂಕಿ, ನವೀನ್ ಉಲ್ ಹಕ್, ಫರೀದ್ ಮಲಿಕ್, ಸಲೀಮ್ ಸಫಿ, ಅಬ್ದುಲ್ಲಾ ಅಹ್ಮದ್ಝೈ, ಬಶೀರ್ ಅಹ್ಮದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.