ಶುಕ್ರವಾರ, ಆಗಸ್ಟ್ 19, 2022
21 °C
ಉನ್ನತೀಕರಿಸಿದ ತಾಂತ್ರಿಕ ಕೇಂದ್ರ ಲೋಕಾರ್ಪಣೆ

ಕೌಶಲ ಕಲಿಕೆ; ಉದ್ಯೋಗಕ್ಕೆ ದಾರಿ: ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಮಗಳೂರು: ‘ಕೈಗಾರಿಕೆಗಳು ನಿರೀಕ್ಷಿಸುವ ಕೌಶಲ ಕಲಿತಿದ್ದರೆ ಉದ್ಯೋಗ ಪಡೆಯಲು ಅನುಕೂಲ’ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಹೇಳಿದರು.

ಜ್ಯೋತಿನಗರದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಉನ್ನತೀಕರಿಸಿದ ತಾಂತ್ರಿಕ ಕೇಂದ್ರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೌಶಲ ಕಲಿಯದವರಿಗೆ ಉದ್ಯೋಗಗಳು ಸಿಗುತ್ತಿಲ್ಲ. ಕಲಿತವರಿಗೆ ಅಪಾರ ಅವಕಾಶಗಳು ಇವೆ’ ಎಂದು ಹೇಳಿದರು.

2018ರ ಅಧ್ಯಯನವೊಂದರ ಪ್ರಕಾರ ಭಾರತದಲ್ಲಿ ಶೇ 56ರಷ್ಟು ಮಂದಿ ಕೈಗಾರಿಕೆಗಳು ನಿರೀಕ್ಷಿಸುವ ಕೌಶಲ ಕಲಿತಿಲ್ಲ. ಹೀಗಾಗಿ, ಉದ್ಯೋಗ ಸಿಗುತ್ತಿಲ್ಲ. ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸ ಕೌಶಲಗಳಿಗೆ ಅಪ್ಡೇಟ್‌ ಆಗುವುದು ಅಗತ್ಯ ಎಂದು ಕಿವಿಮಾತು ಹೇಳಿದರು.

ಆಧುನಿಕ ತಂತ್ರಜ್ಞಾನ ಪರಿಚಯ, ಕೌಶಲ ಕಲಿಕೆ ನಿಟ್ಟಿನಲ್ಲಿ ಕೈಗಾರಿಕೆ 4.0 ಕಾರ್ಯಗತಗೊಳಿಸಲಾಗಿದೆ. ಟಾಟಾ ಟೆಕ್ನಾಲಜೀಸ್, ಇತರ 20 ಉದ್ಯಮ ಪಾಲುದಾರರ ಸಹಯೋಗದಲ್ಲಿ ರಾಜ್ಯದ 150 ಸರ್ಕಾರಿ ಐಟಿಐಗಳನ್ನು ₹ 4626ಕೋಟಿ ವೆಚ್ಚದಲ್ಲಿ ಉನ್ನತೀ
ಕರಿಸಲಾಗಿದೆ. ಐಟಿಐ ವಿದ್ಯಾರ್ಥಿಗಳು ಅದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಮಾತನಾಡಿ, ದೇಶದ ಅಭಿವೃದ್ಧಿ ಹಾಗೂ ಯುವಜನರಿಗೆ ಉದ್ಯೋಗಾವಕಾಶ ಕೈಗಾರಿಕೆ ತರಬೇತಿ ಸಂಸ್ಥೆಗಳನ್ನು ಉನ್ನತೀಕರಿಸಲಾಗುತ್ತಿದೆ. ವಿದ್ಯಾರ್ಥಿಗಳು ಕೌಶಲ ಕಲಿತು ಸ್ವಾವಲಂಬಿಗಳಾಗಬೇಕು ಎಂದರು.

ತಾಂತ್ರಿಕ ದೋಷ: ಪ್ರಧಾನಿ ಮೋದಿ ಅವರು ಬೆಂಗಳೂರಿನಲ್ಲಿ ಆನ್‌ಲೈನ್‌ ಮೂಲಕ ಉನ್ನತೀಕರಿಸಿದ ತಾಂತ್ರಿಕ ಕೇಂದ್ರ ಲೋಕಾರ್ಪಣೆ ನೆರವೇರಿಸಿದರು. ಆದರೆ, ತಾಂತ್ರಿಕ ದೋಷದಿಂದಾಗಿ ಲೋಕಾರ್ಪಣೆ ಪ್ರಸಾರ ವೀಕ್ಷಣೆ ಸಾಧ್ಯವಾಗಲಿಲ್ಲ.

ಜಿಲ್ಲಾ ಪಂಚಾಯಿತಿ ಸಿಇಒ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಹಾಕೆ, ಜ್ಯೋತಿನಗರದ ಐಟಿಐ ಪ್ರಾಚಾರ್ಯ ಎ.ಎಸ್.ಪ್ರಕಾಶ್. ನಿರ್ಮಿತಿ ಕೇಂದ್ರ ಯೋಜನಾ ವ್ಯವಸ್ಥಾಪಕ ವೈ.ಗಂಗಾಧರ್, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಎಚ್‌.ಸಿ.ಪ್ರಶಾಂತ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು